Browsing: ರಾಷ್ಟ್ರೀಯ

ನವದೆಹಲಿ: ವ್ಯಕ್ತಿಯೊಬ್ಬ ಹೆಲಿಕಾಪ್ಟರ್ ಮೂಲಕ ಬಂದು ಕಸದ ಬುಟ್ಟಿಗೆ ಕಸ ಎಸೆದು ಮರಳಿದ್ದಾನೆ. ಈ ವಿಡಿಯೋ ಭಾರಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ದೇವರೇ…

ಅಯೋಧ್ಯೆ: ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನಾ ಮಹೋತ್ಸವಕ್ಕೆ ಗಂಟೆಗಳ ಎಣಿಕೆ ಆರಂಭವಾಗಿದೆ. ಈ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಈಗಾಗಲೇ ಅಯೋಧ್ಯೆಗೆ ದೇಶದ ಗಣ್ಯಾತಿಗಣ್ಯರು ಆಗಮಿಸ್ತಿದ್ದಾರೆ. ಭಾನುವಾರ ಗಣ್ಯರ ಆಗಮನದ ಸಂಖ್ಯೆ ಇನ್ನೂ…

ಬೇತುಲ್: ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ ನವಜಾತ ಮಗನನ್ನು ಕೊಂದಿರುವ ಘಟನೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಡೆದಿದೆ. ಈ ಕೊಲೆಗೆ ಕಾರಣ ಅನೇಕರನ್ನು ಬೆಚ್ಚಿಬೀಳಿಸಿದೆ. ಕೊಲೆಗಾರನಿಗೆ ಮಗಳು ಹುಟ್ಟಬೇಕೆಂಬ…

ಅಯೋಧ್ಯೆ (ಉತ್ತರ ಪ್ರದೇಶ): ರಾಮಮಂದಿರದಲ್ಲಿ  ಜನವರಿ 22 ರಂದು ನಡೆಯಲಿರುವ ಬಾಲರಾಮನ ಪ್ರಾಣಪ್ರತಿಷ್ಠಾಪನೆ  ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿಯವರು ಕಠಿಣ ವ್ರತ ಕೈಗೊಂಡಿದ್ದಾರೆ. ವ್ರತದ ಭಾಗವಾಗಿ ಮೋದಿಯವರು …

ದಿಸ್ಪುರ್: ಕೇಂದ್ರ ಗೃಹ ಸಚಿವ ಅಮಿತ್ ಶಾ  ಅಸ್ಸಾಂನ  ತೇಜ್‍ಪುರ್‌ನ ಐತಿಹಾಸಿಕ ಮಹಾಭೈರಬ್ ದೇವಾಲಯಕ್ಕೆ  ಭೇಟಿ ನೀಡಿ ಅವರಣದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಈಶಾನ್ಯ ರಾಜ್ಯಗಳಾದ ಮೇಘಾಲಯ…

ಬೆಂಗಳೂರು: ಅಯೋಧ್ಯೆಯಲ್ಲಿ ರಾಮನದ್ದೇ ಜಪ. ರಾಮಲಲ್ಲಾನ ಪ್ರಾಣ ಪ್ರತಿಷ್ಠಾನಕ್ಕೆ ಕ್ಷಣಗಣನೆ ಶುರುವಾಗಿದೆ. ಸೋಮವಾರ ಅಪರೂಪದ ಕ್ಷಣಕ್ಕೆ ಇಡೀ ವಿಶ್ವವೇ ಸಾಕ್ಷಿ ಆಗ್ತಿದೆ. ಹೀಗಾಗಿ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಸಂಭ್ರಮ…

ಅಯೋಧ್ಯೆ ರಾಮಯ್ಯನ ದರ್ಶನಕ್ಕಾಗಿ ದೇಶದ ಎಲ್ಲೆಡೆಯಿಂದ ಈ ಪವಿತ್ರ ನಗರಕ್ಕೆ ಭಕ್ತರು ಆಗಮಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಗೆ ವಿಶೇಷ ರೈಲುಗಳನ್ನು ಆರಂಭಿಸುವುದಾಗಿ ಭಾರತೀಯ ರೈಲ್ವೆ ಪ್ರಕಟಿಸಿದೆ.…

ದೆಹಲಿ:– ಬಿಲ್ಕಿಸ್ ಬಾನು ಪ್ರಕರಣದ ದೋಷಿಗಳು ಜ.21ರೊಳಗೆ ಶರಣಾಗಲು ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ಬಿ.ವಿ.ನಾಗರತ್ನ ನೇತೃತ್ವದ ಪೀಠವು ಈ ಆದೇಶ ನೀಡಿದೆ. ಪ್ರಕರಣದ 11 ದೋಷಿಗಳು…

ಚಿರತೆಯೊಂದು ಖಾಸಗಿ ಹೋಟೆಲ್​ಗೆ ನುಗ್ಗಿರುವ ಘಟನೆ, ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಹೋಟೆಲ್ ಕನೋಟಾ ಕ್ಯಾಸಲ್‌ಗೆ ಚಿರತೆಯೊಂದು ನುಗ್ಗಿದ್ದು, ಕೊಠಡಿಯೊಂದರಲ್ಲಿ ಅಡಗಿ ಕುಳಿತಿತ್ತು. ಚಿರತೆ ಕಂಡು ಸಿಬ್ಬಂದಿ ತಕ್ಷಣ…

ಮುಂಬೈ: ಮುಂಬೈನ ರೆಸ್ಟೋರೆಂಟ್‌ನಲ್ಲಿ ಊಟದಲ್ಲಿ ಸತ್ತ ಇಲಿ ಪತ್ತೆಯಾಗಿದ್ದು, ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜನವರಿ 8, 2024ರಂದು ಮುಂಬೈಗೆ ಭೇಟಿ ನೀಡಿದ ರಾಜೀವ್‌ ಶುಕ್ಲಾ, ವರ್ಲಿಯಲ್ಲಿರುವ ಹೆಸರಾಂತ ರೆಸ್ಟೋರೆಂಟ್‌ನಲ್ಲಿ ಸಸ್ಯಾಹಾರಿ ಊಟವನ್ನು ಆರ್ಡರ್ ಮಾಡಿದರು. ಆಹಾರ ರೂಮ್‌ಗೆ ತಲುಪಿ ಬಾಕ್ಸ್ ಓಪನ್ ಮಾಡಿ ತಿಂದ ಸ್ಪಲ್ಪ ಹೊತ್ತಿನಲ್ಲಿ ಬಾಕ್ಸ್‌ನಲ್ಲಿ ಸತ್ತ ಇಲಿಯನ್ನು ನೋಡಿದ್ದಾರೆ. ಆಹಾರ ತಿಂದು ಅಸ್ವಸ್ಥಗೊಂಡ ಶುಕ್ಲಾರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಶುಕ್ಲಾ ಈ ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರೂ, ಟ್ವೀಟ್ ಮಾಡುವ ಸಮಯದಲ್ಲಿ ನಾಗ್ಪಾಡಾ ಪೊಲೀಸ್ ಠಾಣೆಗೆ ಅಧಿಕೃತ ದೂರು ದಾಖಲಿಸಿರಲಿಲ್ಲ. ಟ್ವೀಟ್‌ನೊಂದಿಗೆ ಆರ್ಡರ್ ರಸೀದಿ, ವಿತರಿಸಿದ ಪ್ಯಾಕೇಜ್ ಮತ್ತು ಇಲಿಯಿದ್ದ ಆಹಾರದ ಪ್ಯಾಕೆಟ್‌ನ ಪೋಟೋಗಳು ಇದ್ದವು. ಆಸ್ಪತ್ರೆಗೆ ದಾಖಲಾಗಿರುವ ಫೋಟೋವನ್ನು ಸಹ ಶುಕ್ಲಾ ಹಂಚಿಕೊಂಡಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಈ ಘಟನೆ ತಕ್ಷಣವೇ ವೈರಲ್ ಆಗಿದೆ. ನೆಟ್ಟಿಗರು ನಾನಾ ರೀತಿ ಪ್ರತಿಕ್ರಿಯಿಸಿದ್ದಾರೆ. ಹಲವಾರು X ಬಳಕೆದಾರರು ಶುಕ್ಲಾ ಅವರ ಪರವಾಗಿ ಸಹಾಯಕ್ಕಾಗಿ ಮನವಿಯಲ್ಲಿ ವಿವಿಧ ಅಧಿಕಾರಿ ಗಳನ್ನು ಟ್ಯಾಗ್ ಮಾಡಿದ್ದಾರೆ.  ರೆಸ್ಟೋರೆಂಟ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದು, ಅನಾನುಕೂಲತೆಗಾಗಿ ವಿಷಾದ ವ್ಯಕ್ತಪಡಿಸಿದೆ. ತಮ್ಮ ಹೇಳಿಕೆಯಲ್ಲಿ, ಮುಂಬೈನಲ್ಲಿರುವ ತಮ್ಮ ಪ್ರಾದೇಶಿಕ ಕಚೇರಿಯಿಂದ ಪರೇಶ್ ಎಂಬವರು ಪರಿಸ್ಥಿತಿಯ ವಿವರಗಳನ್ನು ತಿಳಿದುಕೊಳ್ಳಲು ಮತ್ತು ಪರಿಹಾರಕ್ಕಾಗಿ ಕೆಲಸ ಮಾಡಲು ಈಗಾಗಲೇ ಶುಕ್ಲಾ ಅವರನ್ನು ಸಂಪರ್ಕಿಸಿದ್ದಾರೆ ಎಂದು ಉಲ್ಲೇಖಿಸಿದೆ.