Browsing: ಲೈಫ್ ಸ್ಟೈಲ್

ಹೊಟ್ಟೆ (Stomach) ನೋವು (Pain) ಹೆಚ್ಚಾಗಿ ಮಕ್ಕಳನ್ನು ಕಾಡುತ್ತದೆ. ಮಕ್ಕಳು ಆಗಾಗ ಹೊಟ್ಟೆ ನೋವಿನಿಂದ ಬಳಲ್ತಿರುತ್ತಾರೆ. ಮಕ್ಕಳಿಗೆ ಮಾತ್ರವಲ್ಲ ಮಹಿಳೆಯರಿಗೂ  ಅನೇಕ ಕಾರಣಗಳಿಂದ ಹೊಟ್ಟೆ ನೋವು ಬರುತ್ತದೆ.…

ಹಣ್ಣುಗಳ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ವೈದ್ಯರು ಹೇಳುತ್ತಾರೆ. ಆದ್ರೆ ಕೆಲವೊಂದು ಹಣ್ಣುಗಳು ಮಾತ್ರವಲ್ಲ ಕಾಯಿಗಳು ಸಹ ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಅದ್ರಲ್ಲೊಂದು ಪಪ್ಪಾಯಿ. ಪಪ್ಪಾಯವನ್ನು ನೀವು ಹಣ್ಣಾದ್ಮೇಲೆ ಸೇವನೆ ಮಾಡ್ಬಹುದು. ಹಾಗೆ ಪಪ್ಪಾಯ ಕಾಯಿಯಿಂದ ಸಲಾಡ್ ಮಾಡಬಹುದು. ಇಲ್ಲವೆ ಪಪ್ಪಾಯಿ ಕಾಯಿಯ ಪರಾಟ ಮಾಡಬಹುದು. ಪಪ್ಪಾಯಿಯಲ್ಲಿ ಹಲವು ರೀತಿಯ ಪೋಷಕಾಂಶಗಳು ಕಂಡುಬರುತ್ತವೆ. ಇದು ಜೀವಸತ್ವಗಳು, ಕಿಣ್ವಗಳು ಮತ್ತು ಅನೇಕ ರೀತಿಯ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ತುಂಬಾ ಪ್ರಯೋಜನಕಾರಿ. ಪಪ್ಪಾಯಿ ಕಾಯಿಯಲ್ಲಿ ವಿಟಮಿನ್–ಇ, ಸಿ, ಬಿ, ಎ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಖನಿಜಗಳಂತಹ ಪೋಷಕಾಂಶಗಳು ಕಂಡುಬರುತ್ತವೆ. ಇದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ನೀವು ಅಧಿಕ ತೂಕ (Weight) ಹೊಂದಿದ್ದರೆ ಅಥವಾ ಯೂರಿಕ್ ಆಮ್ಲವು ನಿಮ್ಮ ದೇಹ (Body)ದಲ್ಲಿ ವೇಗವಾಗಿ ಹೆಚ್ಚುತ್ತಿದ್ದರೆ, ಹಸಿ ಪಪ್ಪಾಯಿಯು (Raw papaya) ನಿಮಗೆ ರಾಮಬಾಣವೆಂದು ಸಾಬೀತಾಗಲಿದೆ. ಇದನ್ನು ತಿನ್ನುವ ಸರಿಯಾದ ಮಾರ್ಗ, ಸಮಯ ಮತ್ತು ಅನುಪಾತದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾದ ತಕ್ಷಣ ಕೀಲು ನೋವು ಅಥವಾ ಸಂಧಿವಾತದ (Arthritis) ಸಮಸ್ಯೆ ಶುರುವಾಗುತ್ತದೆ. ಯೂರಿಕ್ ಆಸಿಡ್ ಅನ್ನು ಸಮಯಕ್ಕೆ ನಿಯಂತ್ರಿಸದೆ ಹೋದಲ್ಲಿ, ಅದು ಸಂಧಿವಾತವಾಗಿ ಬದಲಾಗುತ್ತದೆ. ನಂತರ ನಡೆದಾಡುವುದರಿಂದ ಹಿಡಿದು ಕುಳಿತುಕೊಳ್ಳುವವರೆಗೆ ಅಸಹನೀಯ ನೋವು (Pain) ಕಾಣಿಸಿಕೊಳ್ಳುತ್ತದೆ. ಆದರೆ ಇಲ್ಲಿ ನಾವು ಹಸಿ ಪಪ್ಪಾಯಿಯ ಪ್ರಯೋಜನಗಳ ಬಗ್ಗೆ ಹೇಳುತ್ತಿದ್ದೇವೆ. ಹಸಿ ಪಪ್ಪಾಯಿ ಸೇವನೆ ನಿಮ್ಮ ಈ ಸಮಸ್ಯೆಯನ್ನು ಬುಡ ಸಮೇತ ನಿವಾರಿಸುತ್ತದೆ. ಹಸಿ ಪಪ್ಪಾಯಿಯ ಗುಣಗಳು ಹಸಿ ಪಪ್ಪಾಯಿಯು ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಕ್ಯಾಲೋರಿಯೂ ಕಡಿಮೆಯಾಗಿರುತ್ತದೆ. ಇದು ವಿಟಮಿನ್ ಸಿ, ಫೋಲೇಟ್ ಮತ್ತು ವಿಟಮಿನ್ ಇ ಗಳಿಂದ ಸಮೃದ್ಧವಾಗಿದೆ. ಯೂರಿಕ್ ಆಮ್ಲವನ್ನು ಕಡಿಮೆ ಮಾಡುವಲ್ಲಿ ಈ ಮೂರೂ ರಾಸಾಯನಿಕಗಳು ಔಷಧಿಗಳಂತೆ (Medicine)  ಕೆಲಸ ಮಾಡುತ್ತವೆ. ಹಾಗಾದರೆ ಪಪ್ಪಾಯಿಯ ಹೆಚ್ಚಿನ ಪ್ರಯೋಜನಗಳನ್ನು ಮತ್ತು ಅದನ್ನು ತಿನ್ನಲು ಸರಿಯಾದ ಮಾರ್ಗ ಯಾವುದು ತಿಳಿದುಕೊಳ್ಳೋಣ. ಪಪ್ಪಾಯಿ ಜ್ಯೂಸ್ ತಯಾರಿಸಿ ಯೂರಿಕ್ ಆಮ್ಲವನ್ನು ತಕ್ಷಣವೇ ನಿಯಂತ್ರಣಕ್ಕೆ ತರಬೇಕು ಎಂದರೆ, ನೀವು ಪ್ರತಿದಿನ ಬೆಳಗ್ಗೆ (Morning) ಕನಿಷ್ಠ ಒಂದು ಲೋಟ ಹಸಿ ಪಪ್ಪಾಯಿ ರಸವನ್ನು ಕುಡಿಯುವುದು ಮುಖ್ಯ. ನೀವು ಬಯಸಿದರೆ, ನೀವು ಅದರಲ್ಲಿ ನಿಂಬೆ (Lemon) ಅಥವಾ ಜೇನುತುಪ್ಪ (Honey)ವನ್ನು ಕೂಡ ಬೆರೆಸಬಹುದು. ಅದರಲ್ಲಿಯೂ ವಿಶೇಷವಾಗಿ ಯೂರಿಕ್ ಆಮ್ಲ ಹೆಚ್ಚಳ ಸಮಸ್ಯೆ ಇರುವವರು ಪಪ್ಪಾಯಿ ಜ್ಯೂಸ್ ಕುಡಿಯುವುದರಿಂದ ಹೆಚ್ಚಿನ ಪ್ರಯೋಜನ ಸಿಗುತ್ತದೆ. ಹೆಚ್ಚುವರಿ ಕ್ಯಾಲೊರಿಗಳನ್ನು ಬರ್ನ್ ಮಾಡಲು ಮಾಡಲು ಇದು ಸಹಾಯ ಮಾಡುತ್ತದೆ. ತರಕಾರಿಯ ರೂಪದಲ್ಲಿ ಸೇವಿಸಿ ಹಸಿ ಪಪ್ಪಾಯಿಯನ್ನು ನೀಡುವ ತರಕಾರಿಯ (Vegetables) ರೂಪದಲ್ಲಿ ಸೇವಿಸುವ ಅಭ್ಯಾಸ ಮಾಡಿಕೊಂಡರೂ ಕೂಡ ಉತ್ತಮ. ಇದು ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಇದನ್ನು ತಯಾರಿಸುವಾಗ, ಅದರಲ್ಲಿ ಮೆಂತ್ಯ ಮತ್ತು ಇಂಗು ಹಾಕಿ. ಅರಿಶಿನ ಮತ್ತು ಉಪ್ಪಿನೊಂದಿಗೆ ಬೇಯಿಸಿ. ಯೂರಿಕ್ ಆಸಿಡ್ ಅಧಿಕವಾಗಿರುವ ಯಾವುದೇ ರೂಪದಲ್ಲಿ ಹಸಿ ಪಪ್ಪಾಯಿಯನ್ನು ಆದಷ್ಟು ಹೆಚ್ಚು ತಿನ್ನಲು ಪ್ರಯತ್ನಿಸಿ.

ಮಾರುಕಟ್ಟೆಯಲ್ಲಿ ಸೊಳ್ಳೆಗಳನ್ನು ಓಡಿಸಲೆಂದೇ ಹಲವು ರೀತಿಯ ಮಾಸ್ಕಿಟೋ ಕಾಯಿಲ್‌ಗಳು ಲಭ್ಯವಿದೆ. ಇವು ಸೊಳ್ಳೆಗಳ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ನಮ್ಮ ಆರೋಗ್ಯದ ಮೇಲೆ…

ಸಾಕುಪ್ರಾಣಿಗಳಲ್ಲಿನ ಆನುವಂಶಿಕ ಅಸ್ವಸ್ಥತೆಗಳು ಸಾಕುಪ್ರಾಣಿ ಮಾಲೀಕರಿಗೆ ಕಳವಳವನ್ನು ಉಂಟುಮಾಡಬಹುದು ಏಕೆಂದರೆ ಅವರು ತಮ್ಮ ರೋಮದಿಂದ ಕೂಡಿದ ಸಹಚರರ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಪರಿಣಾಮ ಬೀರಬಹುದು. ಸಾಕುಪ್ರಾಣಿಗಳಲ್ಲಿ…

ಸೌಂದರ್ಯದ ಹೊಳಪನ್ನು ಹೆಚ್ಚಿಸಲು ಆಲೂಗಡ್ಡೆ ರಾಮಭಾಣ ಎಂದು ಹೇಳುತ್ತಾರೆ. ಸ್ಕಿನ್ ಮೇಲಿರುವ ಕಲೆ ಹಾಗೂ ಡಾರ್ಕ್ ಸರ್ಕಲ್ ತೆಗೆಯಲು ಮಾತ್ರ ಆಲೂಗಡ್ಡೆ ಉಪಯೋಗಿಸಬಹುದು ಎಂದು ಸಾಕಷ್ಟು ಜನ…

ಹಾಲು ಅಥವಾ ಹಾಲಿನ ಯಾವುದೇ ಉತ್ಪನ್ನಗಳನ್ನು ಬಳಸದೇ ಐಸ್‌ಕ್ರೀಮ್ ಮಾಡಬಹುದು ಎಂದರೆ ನೀವು ನಂಬುತ್ತೀರಾ? ಇಲ್ಲ ಎಂದರೆ ನಾವಿಂದು ಹೇಳಿಕೊಡುತ್ತಿರೋ ಐಸ್‌ಕ್ರೀಮ್ ರೆಸಿಪಿಯನ್ನೊಮ್ಮೆ ನೀವು ಟ್ರೈ ಮಾಡ್ಲೇಬೇಕು.…

ಮುಖಕ್ಕೆ ಅರಿಶಿಣದ ಸ್ಕ್ರಬ್ ಮಾಡಿಕೊಳ್ಳುವುದರಿಂದ ನಿಮ್ಮನ್ನು ಸುಂದರವಾಗಿ ಕಾಣಿಸಲು ಸಹಾಯ ಮಾಡುತ್ತದೆ. ಅರಿಶಿಣದಲ್ಲಿ ಆಂಟಿಕ್ಸೆಸಿಂಡಸ್, ಆಂಟಿ ಮೈಕ್ರೊಬಿಬಲ್ ಹಾಗೂ ಆಂಟಿ ಇಂಫ್ಲೆಮೆಂಟರಿ ಅಂಶವಿರುತ್ತದೆ. ಇದು ನಿಮ್ಮ ತ್ವಚೆಯ…

ನವರಾತ್ರಿಯ ಅಷ್ಟಮಿ ಮತ್ತು ನವಮಿ ತಿಥಿಗಳಿಗೆ ಧಾರ್ಮಿಕ ಜ್ಯೋತಿಷ್ಯದಲ್ಲಿ ವಿಶೇಷ ಸ್ಥಾನಮಾನ ನೀಡಲಾಗಿದೆ. ಮಾರ್ಚ್ 29 ಅಷ್ಟಮಿ ತಿಥಿ, ಮಾರ್ಚ್ 30 ನವಮಿ. ನವಮಿಯಂದು ಭಗವಾನ್ ರಾಮನ…

ಕತ್ತೆ ಹಾಲು ತನ್ನ ಅದ್ಭುತ ಆರೋಗ್ಯ ಪ್ರಯೋಜನಗಳಿಂದಾಗಿ ಪ್ರಪಂಚದಾದ್ಯಂತ ನಿಧಾನವಾಗಿ ಜನಪ್ರಿಯವಾಗುತ್ತಿದೆ. ಇದು ಹಸುವಿನ ಹಾಲಿಗೆ ಉತ್ತಮ ಪರ್ಯಾಯವಾಗಿದೆ ಮತ್ತು ವಯಸ್ಕ ಎದೆ ಹಾಲಿಗೆ ಹೋಲುವ ಪೌಷ್ಟಿಕಾಂಶದ…

ಪ್ರತಿಯೊಬ್ಬರ ಹಣಕಾಸು ಯೋಜನೆ ಪಯಣದಲ್ಲಿ, ಅವಧಿ ವಿಮೆ ಬಹುಶಃ ಅವರ ಹೂಡಿಕೆ ಬಂಡವಾಳದ ಅತ್ಯಂತ ನಿರ್ಣಾಯಕ ಅಂಶವಾಗಿದೆ. ಕಾರಣಗಳು ಹಲವು-ಪ್ರಾಥಮಿಕವಾಗಿ, ಪಾಲಿಸಿದಾರನ ಮರಣದ ಸಂದರ್ಭದಲ್ಲಿ ಪ್ರೀತಿಪಾತ್ರರಿಗೆ ಆರ್ಥಿಕ…