ಪ್ರಮುಖ ಸಭೆಗಾಗಿ ಭಾಗಿಯಾಗಲು ಅಮೆರಿಕದ ಉನ್ನತ ಭಯೋತ್ಪಾದನಾ ನಿಗ್ರಹ ಅಧಿಕಾರಿ ದೆಹಲಿಗೆ ಭೇಟಿ

ವಾಷಿಂಗ್ಟನ್‌: ಅಮೆರಿಕದ ಭಯೋತ್ಪಾದನಾ ನಿಗ್ರಹದ ಉನ್ನತ ಅಧಿಕಾರಿ ತಿಮೋತಿ ಬೆಟ್ಸ್ ಅವರು ಅಮೆರಿಕ-ಭಾರತದ ಭಯೋತ್ಪಾದನಾ ನಿಗ್ರಹದ ಜಂಟಿ ಕಾರ್ಯಾಚರಣೆಯ ವಾರ್ಷಿಕ ಸಭೆಗೆ ಹಾಜರಾಗಲು ಡಿಸೆಂಬರ್‌12ರಂದು ದೆಹಲಿಗೆ ಆಗಮಿಸಲಿದ್ದಾರೆ. ವಾರ್ಷಿಕ ಸಭೆಯಲ್ಲಿ ಪ್ರಾದೇಶಿಕ ಮತ್ತು ಜಾಗತಿಕ ಭಯೋತ್ಪಾದನಾ ಬೆದರಿಕೆ, ಜಾರಿಗೊಳಿಸಬೇಕಿರುವ ಕಾನೂನು, ದ್ವಿಪಕ್ಷೀಯ ಮತ್ತು ಪ್ರಾದೇಶಿಕ ಭಯೋತ್ಪಾದನಾ ನಿಗ್ರಹದ ಕ್ರಮ ಹಾಗೂ ನ್ಯಾಯಾಂಗವನ್ನು ಬಲಪಡಿಸುವ ಕುರಿತು ಚರ್ಚೆ ನಡೆಯಲಿದೆ. ಬೆಟ್ಸ್‌ ಅವರು ಮೊದಲು ಜಪಾನ್‌, ಫಿಲಿಪ್ಪೀನ್ಸ್‌ಗೆ ಭೇಟಿ ನೀಡಿ ನಂತರ ಭಾರತಕ್ಕೆ ಆಗಮಿಸಲಿದ್ದಾರೆ. ಡಿಸೆಂಬರ್ 8ಕ್ಕೆ ಆರಂಭವಾಗುವ ಇವರ […]

Continue Reading

ಅಫ್ಗಾನಿಸ್ತಾನ: ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾದ 27 ಜನರಿಗೆ ಸಾರ್ವಜನಿಕವಾಗಿ ಛಡಿಯೇಟು

ಅಫ್ಗಾನಿಸ್ತಾನ: ವಿವಿಧ ಅಪರಾಧಗಳಿಗೆ ಸಂಬಂಧಿಸಿದಂತೆ ಮಹಿಳೆಯರೂ ಸೇರಿದಂತೆ ಒಟ್ಟು 27 ಜನರಿಗೆ ತಾಲಿಬಾನ್‌ ಸಾರ್ವಜನಿಕವಾಗಿ ಛಡಿಯೇಟು ನೀಡಿದೆ. ಸುಮಾರು ಒಂದು ಮೀಟರ್ ಉದ್ದ ಮತ್ತು ನಾಲ್ಕು ಬೆರಳುಗಳ ಅಗಲದ ಬೆತ್ತದಿಂದ 20 ರಿಂದ 39 ಹೊಡೆತಗಳನ್ನು ನೀಡಲಾಯಿತು ಎಂದು ವರದಿಗಳು ಉಲ್ಲೇಖಿಸಿವೆ. ಪರ್ವಾನ್‌ ಪ್ರಾಂತ್ಯದ ರಾಜಧಾನಿ ಚರಿಕಾರ್‌ನ ಸ್ಟೇಡಿಯಂನಲ್ಲಿ ಈ ಘಟನೆ ನಡೆದಿದ್ದು, ಸಾವಿರಾರು ಸಾರ್ವಜನಿಕರು ಇದಕ್ಕೆ ಸಾಕ್ಷಿಯಾಗಿದ್ದರು. ಛಡಿಯೇಟಿಗೆ ಒಳಗಾದವರಲ್ಲಿ 9 ಜನ ಮಹಿಳೆಯರು ಇದ್ದರು ಎನ್ನಲಾಗಿದೆ. ವಂಚನೆ, ನಕಲಿ, ಖೋಟಾ, ಡ್ರಗ್ಸ್ ಮಾರಾಟ ಮತ್ತು ಖರೀದಿ, […]

Continue Reading

18-25 ವರ್ಷ ವಯಸ್ಸಿನವರಿಗೆ ಉಚಿತ ಕಾಂಡೋಮ್‌ ನೀಡಲು ಮುಂದಾದ ಫ್ರಾನ್ಸ್

ಪ್ಯಾರಿಸ್: ಲೈಂಗಿಕವಾಗಿ ಹರಡುವ ರೋಗಗಳನ್ನು ತಡೆಗಟ್ಟಲು ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹೊಸ ಪ್ಲ್ಯಾನ್‌ ಮಾಡಿದ್ದಾರೆ. ಮುಂದಿನ ವರ್ಷದಿಂದ ಔಷಧಾಲಯಗಳಲ್ಲಿ 18-25 ವರ್ಷದ ಒಳಗಿನ ಯುವ ಜನರಿಗೆ ಉಚಿತ ಕಾಂಡೋಮ್‌ ನೀಡಲು ಮುಂದಾಗಿದ್ದಾರೆ. ಯುವ ಜನರ ಆರೋಗ್ಯದ ಕುರಿತಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ಔಷಧಾಲಯಗಳಲ್ಲಿ ಜನವರಿ 1 ರಿಂದ 18 – 25 ವರ್ಷ ವಯಸ್ಸಿನವರಿಗೆ ಕಾಂಡೋಮ್‌ಗಳನ್ನು ಉಚಿತವಾಗಿ ನೀಡಲಾಗುವುದು ಎಂದಿದ್ದಾರೆ. ಫ್ರಾನ್ಸ್‌ನಲ್ಲಿ 2020 ಮತ್ತು 2021 ರಲ್ಲಿ ಲೈಂಗಿಕವಾಗಿ ಹರಡುವ ರೋಗಗಳ ಪ್ರಮಾಣ ಶೇ.30 […]

Continue Reading

ಸೌತ್ ಕೊರಿಯಾ ಜೊತೆ ವ್ಯಾಪಾರ ವಹಿವಾಟು ಮಾತುಕತೆಗೆ ಸಿದ್ಧವಾದ ಬ್ರಿಟನ್

ಲಂಡನ್‌: ಸೌತ್ ಕೊರಿಯಾದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಜ್ಜಾಗಿರುವ ಬ್ರಿಟನ್‌, ಈ ಸಂಬಂಧ ತನ್ನ ವಹಿವಾಟು ಸಂಸ್ಥೆಗಳು ಮತ್ತು ಉದ್ಯಮಿಗಳನ್ನು ಸಂಪರ್ಕಿಸಲು ಪ್ರಾರಂಭಿಸಿದೆ. ಯೂರೋಪಿಯನ್‌ ಒಕ್ಕೂಟದಿಂದ ಹೊರಬಂದ ನಂತರ ವಿಶ್ವದೆಲ್ಲೆಡೆ ವಹಿವಾಟು ಒಪ್ಪಂದ ಬ್ರಿಟನ್‌ನ ಗುರಿಯಾಗಿದ್ದು, ಏಷ್ಯಾ ರಾಷ್ಟ್ರಗಳ ಜೊತೆಗೆ ವಹಿವಾಟು ವೃದ್ಧಿಗೆ ಎದುರು ನೋಡುತ್ತಿದೆ. ಜಿ20 ಸದಸ್ಯ ರಾಷ್ಟ್ರ ದಕ್ಷಿಣ ಕೊರಿಯಾದೊಂದಿಗೆ ಬ್ರಿಟನ್ ಇನ್ನಷ್ಟೇ ಔಪಚಾರಿಕ ಮಾತುಕತೆ ಆರಂಭಿಸಬೇಕಿದೆ. ಉಭಯ ರಾಷ್ಟ್ರಗಳ ವ್ಯಾಪಾರ ಬಾಂಧವ್ಯದಿಂದ 14.3 ಶತಕೋಟಿ ಪೌಂಡ್‌ ವಹಿವಾಟು ಎದುರು ನೋಡುತ್ತಿರುವುದಾಗಿ ಬ್ರಿಟನ್‌ ಹೇಳಿಕೊಂಡಿದೆ. ‘ಜಗತ್ತಿನಲ್ಲಿ […]

Continue Reading

ಬ್ರಿಟನ್ ಚಾರ್ಲ್ಸ್ ಚಿತ್ರವಿರುವ 50 ಪೆನ್ಸ್ ನಾಣ್ಯ ಬಿಡುಗಡೆ

ಲಂಡನ್‌: ಬ್ರಿಟನ್ ನ ರಾಜ 3ನೇ ಚಾರ್ಲ್ಸ್‌ ಚಿತ್ರವಿರುವ ಮೊದಲ 50 ಪೆನ್ಸ್‌ ನಾಣ್ಯಗಳನ್ನು ಚಲಾವಣೆಗೆ ಬಿಡುಗಡೆ ಮಾಡಲಾಗಿದೆ. 74 ವರ್ಷದ ರಾಜನ ಚಿತ್ರವಿರುವ ನಾಣ್ಯದ ಹಿಂಬದಿಯಲ್ಲಿ ರಾಣಿ 2ನೇ ಎಲಿಜಬೆತ್‌ ಅವರ ಜೀವನ ಮತ್ತು ಪರಂಪರೆಯನ್ನು ಚಿತ್ರಿಸಲಾಗಿದೆ. ಲಂಡನ್‌ನ ನಾಣ್ಯಗಳಲ್ಲಿ ಹೊಸ ಸೇರ್ಪಡೆ ಇದಾಗಿದ್ದು, ಅಂಚೆ ಕಚೇರಿಗಳಲ್ಲಿ ಹೊಸ ನಾಣ್ಯಗಳನ್ನು ಪಡೆಯಬಹುದಾಗಿದೆ. ಪ್ರಸ್ತುತ ಒಟ್ಟು 96 ಲಕ್ಷ ಪೆನ್ಸ್‌ ನಾಣ್ಯಗಳನ್ನು ಬಿಡುಗಡೆ ಮಾಡಲಾಗಿದೆ. ರಾಜನ ಚಿತ್ರವನ್ನು ಖ್ಯಾತ ಬ್ರಿಟಿಷ್‌ ಶಿಲ್ಪಿ ಮಾರ್ಟಿನ್‌ ಜೆನ್ನಿಂಗ್ಸ್‌ ಅವರು ರಚಿಸಿದ್ದು, […]

Continue Reading

ತೀವ್ರ ಪ್ರತಿಭಟನೆಯ ಬಳಿಕ ಕೋವಿಡ್ ನಿರ್ಬಂಧ ಸಡಿಲಗೊಳಿಸಿದ ಚೀನಾ

ಬೀಜಿಂಗ್: ತೀವ್ರ ಪ್ರತಿಭಟನೆಯ ಬಳಿಕ ಕೊನೆಗೂ ಚೀನಾ ಕೋವಿಡ್ ನಿರ್ಬಂಧಗಳ ಸಡಿಲಗೊಳಿಸಿದೆ. ಈ ಬಗ್ಗೆ ಸರ್ಕಾರ ಇದೀಗ ಘೋಷಣೆ ಮಾಡಿದೆ. ಕೆಲವು ಸಕಾರಾತ್ಮಕ ಪ್ರಕರಣಗಳು ಮನೆಯಲ್ಲಿ ಸಂಪರ್ಕ ತಡೆಯನ್ನು ಮಾಡಬಹುದು ಮತ್ತು ಕಡ್ಡಾಯ ಪಿಸಿಆರ್ ಪರೀಕ್ಷೆಯ ಅವಶ್ಯಕತೆಗಳನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದೆ. ಬೀಜಿಂಗ್‌ನ ರಾಷ್ಟ್ರೀಯ ಆರೋಗ್ಯ ಆಯೋಗ ಅನಾವರಣಗೊಳಿಸಿದ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ, ಲಕ್ಷಣ ರಹಿತ ಸೋಂಕಿತ ವ್ಯಕ್ತಿಗಳು ಮತ್ತು ಮನೆಯ ಪ್ರತ್ಯೇಕತೆಗೆ ಅರ್ಹರಾಗಿರುವ ಸೌಮ್ಯ ಪ್ರಕರಣಗಳನ್ನು ಸಾಮಾನ್ಯವಾಗಿ ಮನೆಯಲ್ಲಿಯೇ ಪ್ರತ್ಯೇಕಿಸಲಾಗುತ್ತದೆ ಮತ್ತು ದೇಶವು ನ್ಯೂಕ್ಲಿಯಿಕ್ ಆಮ್ಲ […]

Continue Reading

ಫೋರ್ಬ್ಸ್ ವಿಶ್ವದ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಜಾಗ ಪಡೆದ ನಿರ್ಮಲಾ ಸೀತಾರಾಮನ್

ನ್ಯೂಯಾರ್ಕ್: ಫೋರ್ಬ್ಸ್‌ ವಿಶ್ವದ 100 ಅತ್ಯಂತ ಪ್ರಭಾವಿ ಮಹಿಳೆಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ ಆರು ಭಾರತೀಯ ಮಹಿಳೆಯರು ಸ್ಥಾನ ಪಡೆದಿದ್ದಾರೆ. ಫೋರ್ಬ್ಸ್‌ 100 ಪ್ರಭಾವಿ ಮಹಿಳೆಯರ ವಾರ್ಷಿಕ ಪಟ್ಟಿಯಲ್ಲಿ ನಿರ್ಮಲಾ ಸೀತಾರಾಮನ್ ಅವರು 36ನೇ ಸ್ಥಾನ ಪಡೆದಿದ್ದಾರೆ. ಸೀತಾರಾಮನ್ ಅವರು ಸತತ ನಾಲ್ಕನೇ ಬಾರಿಗೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, 2021 ರಲ್ಲಿ ಕೇಂದ್ರ ಸಚಿವೆ ಪಟ್ಟಿಯಲ್ಲಿ 37ನೇ ಸ್ಥಾನದಲ್ಲಿದ್ದರೆ, 2020 ರಲ್ಲಿ 41ನೇ ಸ್ಥಾನ ಮತ್ತು 2019ರಲ್ಲಿ 34ನೇ […]

Continue Reading

ರೋಮ್ ನ ಅಂತಾರಾಷ್ಟ್ರೀಯ ಸಿರಿಧಾನ್ಯ ಪ್ರದರ್ಶನದಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಭಾಗಿ

ಇಟಲಿ ಪ್ರವಾಸದಲ್ಲಿರುವ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ರೋಮ್ ನಲ್ಲಿ ಆಯೋಜಿಸಲಾದ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ಪ್ರದರ್ಶನ- 2023 ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು. ಅಂತರಾಷ್ಟ್ರೀಯ ಆಹಾರ ಮತ್ತು ಕೃಷಿ ಸಂಸ್ಥೆಯ ಡೈರೆಕ್ಟರ್ ಜನರಲ್ ಕ್ಯೂ ಡೊಂಗ್ಯು ಸಹಿತ ಇತರ ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಿದರು. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನೀಡಿರುವ ಪ್ರಸ್ತಾವನೆಯಂತೆ, 2023ನೇ ವರ್ಷವನ್ನು ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಎಂದು ವಿಶ್ವಸಂಸ್ಥೆ ಘೋಷಿಸಿದೆ.

Continue Reading

ಕೊಲೆ ಆರೋಪಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ ತಾಲಿಬಾನ್‌

ಕಾಬುಲ್: ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಕೊಲೆ ಆರೋಪಿಯನ್ನು ತಾಲಿಬಾನ್‌ ಸಾರ್ವಜನಿಕವಾಗಿ ಗಲ್ಲಿಗೇರಿಸಿದೆ. ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಕೊಲೆ ಆರೋಪಿಯನ್ನು ಗಲ್ಲಿಗೇರಿಸಲಾಗಿದೆ. 2017 ರಲ್ಲಿ ಪಶ್ಚಿಮ ಫರಾಹ್ ಪ್ರಾಂತ್ಯದಲ್ಲಿ ವ್ಯಕ್ತಿಯೋರ್ವ ಮತ್ತೊಬ್ಬ ವ್ಯಕ್ತಿಯನ್ನು ಇರಿದು ಕೊಂದಿದ್ದ. ಈ ಆರೋಪವನ್ನು ಹೊಂದಿದ್ದ ಕಾರಣಕ್ಕೆ ಆತನನ್ನು ಗಲ್ಲಿಗೇರಿಸಲಾಗಿದೆ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ. ಈ ಪ್ರಕರಣವನ್ನು ಮೂರು ನ್ಯಾಯಾಲಯಗಳು ತನಿಖೆ ಮಾಡಿವೆ. ದಕ್ಷಿಣ ಕಂದಹಾರ್ ಪ್ರಾಂತ್ಯದಲ್ಲಿ ನೆಲೆಸಿರುವ ತಂಡದ ಅತ್ಯುನ್ನತ ಆಧ್ಯಾತ್ಮಿಕ ನಾಯಕರಿಂದ ಶಿಕ್ಷೆಯನ್ನು ಅಧಿಕೃತಗೊಳಿಸಲಾಗಿದೆ ಎಂದು […]

Continue Reading

ತೆರಿಗೆ ವಂಚನೆ ಪ್ರಕರಣ: ಡೊನಾಲ್ಡ್ ಟ್ರಂಪ್‌ ಒಡೆತನದ ಕಂಪನಿಗೆ ದಂಡ

ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕುಟುಂಬದ ಒಡೆತನದಲ್ಲಿರುವ ಸಂಸ್ಥೆಗಳು ತೆರಿಗೆ ಕಟ್ಟದೆ ವಂಚಿಸಿದ ಆರೋಪದಡಿ ಕೋರ್ಟ್ ದಂಡ ವಿಧಿಸಿದೆ. ಇದು ಮುಂದಿನ ಅಧ್ಯಕ್ಷಿಯ ಚುನಾವನೆಗೆ ತಮ್ಮ ಉಮೇದುವಾರಿಕೆ ಘೋಷಿಸಿಕೊಂಡಿರುವ ಟ್ರಂಪ್‌ ಗೆ ಭಾರಿ ಹಿನ್ನಡೆ ತಂದೊಡ್ಡಲಿದೆ ಎಂದು ಹೇಳಲಾಗುತ್ತಿದೆ. ಟ್ರಂಪ್ ಆರ್ಗನೈಸೆಷನ್ ಮತ್ತು ಟ್ರಂಪ್ ಪೇರೋಲ್ ಕಾರ್ಪ್‍ಗಳು ತೆರಿಗೆ ವಂಚಿಸಿರುವ ಬಗ್ಗೆ ಆರೋಪ ಕೇಳಿ ಬಂದಿತ್ತು. ಆ ಬಳಿಕ ಕೋರ್ಟ್‍ನಲ್ಲಿ ಕೇಸ್ ದಾಖಲಾಗಿತ್ತು. ಇದೀಗ ಕೋರ್ಟ್‍ನಲ್ಲಿ ಟ್ರಂಪ್ ಕುಟುಂಬದ ಸಂಸ್ಥೆಗಳು ತೆರಿಗೆ ವಂಚನೆ ಮಾಡಿರುವುದು ಸಾಭೀತಾಗಿದ್ದು […]

Continue Reading