ಕ್ಲೋರಿನ್ ಅನಿಲ ಸೋರಿಕೆ: 10 ಮಕ್ಕಳು ಅಸ್ವಸ್ಥ

ವಿಜಯವಾಡ: ಆಂಧ್ರಪ್ರದೇಶದ ವಿಜಯವಾಡ ಜಿಲ್ಲೆಯ ಪುರಸಭೆಯ ಈಜುಕೊಳದಲ್ಲಿ ಕ್ಲೋರಿನ್ ಅನಿಲ ಸೋರಿಕೆಯಾಗಿ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಇವರೆಲ್ಲರೂ 8 ರಿಂದ 14 ವರ್ಷ ವಯಸ್ಸಿನವರು ಎಂದು ಈಜುಕೊಳ ಅಕಾಡೆಮಿ ಮೇಲ್ವಿಚಾರಕರು ತಿಳಿಸಿದ್ದಾರೆ. ವಿಜಯವಾಡ ಮಹಾನಗರ ಪಾಲಿಕೆಯ ಈಜುಕೊಳದಲ್ಲಿ ಮಕ್ಕಳು ಈಜುಕೊಳದಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಕೊಳದಲ್ಲಿ ಕ್ಲೋರಿನ್ ಸೋರಿಕೆಯಿಂದಾಗಿ ಮಕ್ಕಳು ತೀವ್ರ ಅಸ್ವಸ್ಥರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ಹಳೆಯ ಉಪಕರಣಗಳು ಮತ್ತು ಹಳೆಯ ಗ್ಯಾಸ್ ಸಿಲಿಂಡರ್‌ನಿಂದಾಗಿ ಅನಿಲ ಸೋರಿಕೆ ಸಂಭವಿಸಿದೆ. ನಂತರ ಅದನ್ನು ಸರಿಪಡಿಸಲಾಗಿದೆ. […]

Continue Reading

ಮದುವೆ ಮನೆಯಲ್ಲಿ ಸಿಲಿಂಡರ್ ಸ್ಪೋಟ; 2 ಮಕ್ಕಳು ಸಾವು – 50 ಮಂದಿಗೆ ಗಂಭೀರ ಗಾಯ

ಜೋಧಪುರ: ರಾಜಸ್ಥಾನದ ಜೋಧ್ಪುರದಲ್ಲಿ ಮದುವೆಗಾಗಿ ಅತಿಥಿಗಳು ಸೇರಿದ್ದ ಮನೆಯೊಂದರಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಐವರು ಸಾವನ್ನಪ್ಪಿದ್ದು, 50 ಮಂದಿ ಗಾಯಗೊಂಡಿದ್ದಾರೆ. ಭೂಂಗಾರ ಗ್ರಾಮದಲ್ಲಿ ಗುರುವಾರ ಅವಘಡ ಸಂಭವಿಸಿದ್ದು, ಗ್ಯಾಸ್ ಸಿಲಿಂಡರ್ ಏಕಾಏಕಿ ಸ್ಫೋಟಗೊಂಡಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಎಂಜಿಎಚ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹಿಮಾಂಶು ಗುಪ್ತಾ ತಿಳಿಸಿದ್ದಾರೆ.  ಮಧ್ಯಾಹ್ನ ಸಂಭವಿಸಿದ ಸ್ಫೋಟದ ಪ್ರಭಾವದಿಂದ ಶೇರ್ಗಢ ಉಪವಿಭಾಗದ ಭುಂಗ್ರಾ ಗ್ರಾಮದಲ್ಲಿ ಮನೆಯ ಒಂದು ಭಾಗವೂ ಕುಸಿದಿದೆ ಎಂದು ಅವರು ಹೇಳಿದರು. ಗಾಯಗೊಂಡವರಲ್ಲಿ ಕೆಲವರಿಗೆ […]

Continue Reading

Shabarimale Temple ಗೆ ಹೋಗೋ ಅಯ್ಯಪ್ಪ ಭಕ್ತರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಶಬರಿಮಲೆ ಸ್ವಾಮಿ ಅಯ್ಯಪ್ಪ ದರ್ಶನ ಆರಂಭವಾಗಿದ್ದು, ಭಕ್ತರಿಗೆ ಪೂಜಾ ಕ್ರಮ ಹಾಗೂ ಪೂಜಾ ಸಮಯದ ಕುರಿತ ಬಹು ಮುಖ್ಯ ಮಾಹಿತಿ ಇಲ್ಲಿದೆ. ತುಪ್ಪ ಅಭಿಷೇಕ ಅಯ್ಯಪ್ಪ ಸ್ವಾಮಿಗೆ ಸಲ್ಲಿಸುವ ಅತ್ಯಂತ ಪ್ರಧಾನವಾದ ಸೇವೆಯೇ ತುಪ್ಪ ಅಭಿಷೇಕ. ಈ ಪೂಜಾ ವಿಧಿಯನ್ನು ನೆರವೇರಿಸುವುದಕ್ಕಾಗಿ ತುಪ್ಪ ತುಂಬಿಸಿದ ತೆಂಗಿನ ಕಾಯಿಗಳನ್ನು ಉಪಯೋಗಿಸಲಾಗುತ್ತದೆ. ಪ್ರಾತಃಕಾಲ ನಾಲ್ಕು ಗಂಟೆಗೆ ಆರಂಭವಾಗುವ ತುಪ್ಪ ಅಭಿಷೇಕ ಮಧ್ಯಾಹ್ನ ಪೂಜೆವರೆಗೆ (1.00p.m) ಮುಂದುವರಿಯುತ್ತದೆ. ಭಗವಾನ್ ಅಯ್ಯಪ್ಪ ಸ್ವಾಮಿಯನ್ನೂ ಉಪದೇವತೆಗಳ ಪ್ರತಿಷ್ಠೆಯನ್ನೂ ದರ್ಶನ ಮಾಡಿದ ನಂತರ ಅಯ್ಯಪ್ಪ ಭಕ್ತರ […]

Continue Reading

ಗುಜರಾತ್ ನಲ್ಲಿ ಸಕ್ಸಸ್ ಆಯ್ತು ಮೋದಿ- ಅಮಿತ್ ಷಾ ಫಾರ್ಮುಲಾ…!

ಗುಜರಾತ್, ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ ರಾಜ್ಯಕ್ಕೆ ಮಿಶ್ರಫಲ ಕೊಟ್ಟಿದೆ.ರಾಜ್ಯ ಚುನಾವಣೆಯ ಸೋಲು- ಗೆಲುವಿನ ಲೆಕ್ಕಾಚಾರಗಳಿಗೆ ದಿಕ್ಸೂಚಿ ಕೊಟ್ಟಿದೆ ರಿಸಲ್ಟ್. ಗುಜರಾತ್ ನ ಯವಶಕ್ತಿಯ ಟಿಕೆಟ್ ಹಂಚಿಕೆ ಫಾರ್ಮುಲಾ ಸಕ್ಸಸ್ ಆಗಿದ್ದು ಇದೀಗ ರಾಜ್ಯದ ಹಿರಿಯ ನಾಯಕರಿಗೆ ಟಿಕೆಟ್ ಕೈತಪ್ಪುವ ಟೆನ್ಷನ್ ಶುರುವಾಗಿದೆ…. ಇಡೀ ದೇಶ ಕಾತರದಿಂದ ಕಾಯ್ತಿದ್ದ ಗುಜರಾತ್ ವಿಧಾನಸಭಾ ಫಲಿತಾಂಶ ಹೊರಬಿದ್ದಿದೆ, ಇತಿಹಾಸದಲ್ಲೆ ದಾಖಲೆಯ ಸೀಟ್ ಗಳೊಂದಿಗೆ ಮೋದಿ ತವರು ರಾಜ್ಯದಲ್ಲಿ ಬಿಜೆಪಿ ಸತತವಾಗಿ 7ನೇ ಭಾರಿಗೆ ಅಧಿಕಾರದ ಗದ್ದುಗೆ ಏರಿದೆ. ಗುಜರಾತ್ ಫಲಿತಾಂಶದಿಂದ […]

Continue Reading

ಹಿಮಾಚಲ ಪ್ರದೇಶದ ಸಿಎಂ ಜೈರಾಮ್ ಠಾಕೂರ್ ರಾಜೀನಾಮೆ

ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಹಾಲಿ ಸಿಎಂ ಜೈರಾಮ್ ಠಾಕೂರ್ ತಮ್ಮ ಸ್ವಕ್ಷೇತ್ರದಲ್ಲಿ ಗೆಲುವು ಸಾಧಿಸಿದರೂ ಸಿಎಂ ಪಟ್ಟ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಆಡಳಿತಾರೂಢ ಬಿಜೆಪಿ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದು, ಜೈರಾಮ್ ಠಾಕೂರ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ 39 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ 26 ಕ್ಷೇತ್ರಗಳಲ್ಲಿ ಮುನ್ನಡೆ ಮೂಲಕ ಮುಖಭಂಗ ಅನುಭವಿಸಿದೆ. ಪಕ್ಷೇತರ ಅಭ್ಯರ್ಥಿಗಳು 3 ಸ್ಥಾನಗಳಲ್ಲಿ ಮುನ್ನಡೆ ಪಡೆದಿದ್ದಾರೆ. ಬಿಜೆಪಿ ಸೋಲು ಹಿನ್ನೆಲೆಯಲ್ಲಿ ಸಿಎಂ ಜೈರಾಮ್ ಠಾಕೂರ್ ರಾಜಿನಾಮೆ ನೀಡಿದ್ದು, […]

Continue Reading

ಕೇಂದ್ರೀಯ ವಿದ್ಯಾಲಯದಲ್ಲಿ ಬೃಹತ್ ಉದ್ಯೋಗಾವಕಾಶ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಮತ್ತೊಂದು ಬೃಹತ್ ಉದ್ಯೋಗ ಅಧಿಸೂಚನೆಯ ಅಡಿಯಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ದೇಶಾದ್ಯಂತ ಕೇಂದ್ರೀಯ ವಿದ್ಯಾಲಯ ಸಂಘಟನೆಇತ್ತೀಚೆಗೆ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿಯ ಮೂಲಕ ಒಟ್ಟು 13,000 ಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಈ ನಿಟ್ಟಿನಲ್ಲಿ ಇತ್ತೀಚೆಗೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ನೇಮಕಾತಿ : ಟಿಜಿಟಿ, ಪಿಜಿಟಿ ಮತ್ತು ಪಿಆರ್ಟಿಯಂತಹ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಅರ್ಹ ಅಭ್ಯರ್ಥಿಗಳು ಡಿಸೆಂಬರ್ 26 ರಂದು ಅಥವಾ ಅದಕ್ಕಿಂತ ಮೊದಲು ಆನ್ ಲೈನ್ ನಲ್ಲಿ […]

Continue Reading

ಗುಜರಾತ್ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಡಿ. 12ರಂದು ಪ್ರಮಾಣವಚನ ಸ್ವೀಕಾರ

ಅಹಮದಾಬಾದ್: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದ್ದು, ಹೊಸ ದಾಖಲೆ ಬರೆದಿದೆ. ಬಿಜೆಪಿ ಭರ್ಜರಿ ಗೆಲುವು ಪಡೆಯುತ್ತಿದ್ದಂತೆ ಭೂಪೇಂದ್ರ ಪಟೇಲ್ 2ನೇ ಬಾರಿಗೆ ಅಧಿಕಾರಕ್ಕೇರಲು ಮುಹೂರ್ತ ನಿಗದಿಯಾಗಿದೆ. ಗುಜರಾತ್ ನಲ್ಲಿ ಬಿಜೆಪಿ 156 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ 16, ಆಪ್ 5 ಹಾಗೂ ಇತರೆ 3 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿವೆ. ಬಿಜೆಪಿ ಐತಿಹಾಸಿಕ ಗೆಲುವು ಖಚಿತವಾಗುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿದ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸಿ.ಆರ್.ಪಾಟೀಲ್, ಡಿಸೆಂಬರ್ 12ರಂದು ಗುಜರಾತ್ ಮುಖ್ಯಮಂತ್ರಿಗಳ ಪ್ರಮಾಣವಚನ ಸಾಮಾರಂಭ […]

Continue Reading

Rivaba Jadeja.. ಜಡೇಜಾ ಪತ್ನಿಗೆ ಭರ್ಜರಿ ಗೆಲುವು: ಜಾಮ್ ನಗರದಲ್ಲಿ ಅರಳಿದ ಕಮಲ

ಗಾಂಧಿನಗರ: ಬಹುನಿರೀಕ್ಷೆ ಹುಟ್ಟಿಸಿದ್ದ ಟೀಂ ಇಂಡಿಯಾದ ಆಲ್‍ರೌಂಡರ್ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ಅವರು ಗುಜರಾತ್ ಚುನಾವಣೆಯಲ್ಲಿ ಭರ್ಜರಿ ಜಯ ಸಿಕ್ಕಿದೆ. ಜಾಮ್‍ನಗರ ಕ್ಷೇತ್ರದಲ್ಲಿ ರಿವಾಬಾ ಜಡೇಜಾ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಇಂದು ನಡೆದ ಮತ ಎಣಿಕೆ ಸಂದರ್ಭದಲ್ಲಿ ಆಪ್‍ನ ಕರ್ಶನ್‍ಭಾಯ್ ಕರ್ಮೂರ್ ಅವರ ವಿರುದ್ಧ 40 ಸಾವಿರಕ್ಕೂ ಅಧಿಕ ಮತಗಳಿಂದ ಭಾರೀ ಮುನ್ನಡೆ ಸಾಧಿಸಿ ವಿಜಯ ಸಾಧಿಸಿದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 11 ಅಭ್ಯರ್ಥಿಗಳು ಜಾಮ್‍ನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಈ ಕ್ಷೇತ್ರದಲ್ಲಿ 57.82% ಮತದಾನವಾಗಿದೆ. […]

Continue Reading

ಬಿಟ್ಟಿ ಕೊಡ್ತೀವಿ ಎನ್ನುವವರನ್ನು ನಂಬಲಿಲ್ಲ ಜನ: ಆಪ್ ಸೋಲನ್ನು ಲೇವಡಿ ಮಾಡಿದ ಅಮಿತ್ ಶಾ

ನವದೆಹಲಿ: ಗುಜರಾತ್​ನಲ್ಲಿ ಬಿಜೆಪಿ ನಿಚ್ಚಳ ಗೆಲುವಿನತ್ತ ದಾಪುಗಾಲು ಹಾಕಿದೆ. ಬಿಜೆಪಿಗೆ ಗುಜರಾತ್​ನಲ್ಲಿ ಪ್ರಬಲ ಪ್ರತಿರೋಧ ಒಡ್ಡಬಹುದು ಎಂದು ನಿರೀಕ್ಷಿಸಿದ್ದ ಆಮ್ ಆದ್ಮಿ ಪಕ್ಷವು ಮಧ್ಯಾಹ್ನ 2:50ರ ಸಮಯದಲ್ಲಿ ಕೇವಲ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತ್ತು. ಆಪ್ ಸೋಲಿನ ಬಗ್ಗೆ ವ್ಯಂಗ್ಯವಾಡಿರುವ ಬಿಜೆಪಿ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ,   ‘ಬಿಟ್ಟಿ ಕೊಡುಗೆಗಳ ಆಮಿಷ ಒಡ್ಡಿದವರನ್ನು ಗುಜರಾತ್​ನ ಮತದಾರರು ತಿರಸ್ಕರಿಸಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ. ಮೋದಿ ಅವರ ನಾಯಕತ್ವದಲ್ಲಿ ಗುಜರಾತ್ ಅದ್ಭುತ ಪ್ರಗತಿ ಸಾಧಿಸಿದೆ. ಹೀಗಾಗಿಯೇ ಮಹಿಳೆಯರೂ […]

Continue Reading

Gujarat Election Result.. ಗುಜರಾತ್ ನಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ; ಕಾಂಗ್ರೆಸ್ ಗೆ ಮುಖಭಂಗ

ಗುಜರಾತ್​ನಲ್ಲಿ ಬಿಜೆಪಿ ಈ ಬಾರಿ ದಿಗ್ವಿಜಯ ಸಾಧಿಸುವುದು ಬಹುತೇಕ ನಿಶ್ಚಿತವಾಗಿದೆ. ಈ ಹಿಂದಿನ ಎಲ್ಲ ದಾಖಲೆಗಳನ್ನೂ ಮೀರಿ ಬಿಜೆಪಿ ಗುಜರಾತ್​ನಲ್ಲಿ ಜಯಭೇರಿ ಬಾರಿಸಲಿದೆ. 182 ವಿಧಾನಸಭಾ ಕ್ಷೇತ್ರಗಳಿರುವ ಗುಜರಾತ್​ನಲ್ಲಿ ಬಿಜೆಪಿ ಈಗಾಗಲೇ 154 ಕ್ಷೇತ್ರಗಳಲ್ಲಿ ಭಾರೀ ಮುನ್ನಡೆ ಸಾಧಿಸುವ ಮೂಲಕ ಗೆಲುವಿನ ಹಾದಿಯನ್ನು ಸುಗಮಗೊಳಿಸಿಕೊಂಡಿದೆ. ಬಿಜೆಪಿಯ ಎದುರು ಕಾಂಗ್ರೆಸ್​ಗೆ ಮತ್ತೊಮ್ಮೆ ಮುಖಭಂಗವಾಗುವುದು ಖಚಿತವಾಗಿದೆ. ಈ ಹಿನ್ನೆಲೆಯಲ್ಲಿ ಗುಜರಾತ್​ನಲ್ಲಿ ಬಿಜೆಪಿ ಕಾರ್ಯಕರ್ತರು ಗರ್ಭಾ ನೃತ್ಯ ಮಾಡಿ, ಡೋಲು ಬಾರಿಸಿ ರಸ್ತೆಗಳಲ್ಲಿ, ಮೈದಾನಗಳಲ್ಲಿ, ಬಿಜೆಪಿ ಕಚೇರಿಗಳ ಬಳಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ.

Continue Reading