ರೆಪೋ ದರ ಹೆಚ್ಚಳ: ಇಎಂಐ ಹೊರೆ ಹೆಚ್ಚಳ, ಯಾವ ವಲಯದ ಮೇಲೆ ಏನು ಪ್ರಭಾವ.?

ನಿರೀಕ್ಷೆಯಂತೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸಾಲದ ಮೇಲಿನ ಬಡ್ಡಿ ದರಗಳನ್ನು 35 ಮೂಲ ಅಂಕಗಳಷ್ಟು, ಅಂದರೆ ಶೇ.0.35ನಷ್ಟು ಏರಿಕೆ ಮಾಡಿದೆ. ಅದರಿಂದಾಗಿ ಗೃಹ, ವಾಹನ ಸಾಲಗಳೂ ಸೇರಿದಂತೆ ಬೇರೆ ಬೇರೆ ರೀತಿಯ ಸಾಲಗಳ ಮೇಲಿನ ಬಡ್ಡಿ ದರಗಳು ಇನ್ನಷ್ಟು ಏರಿಕೆಯಾಗಲಿವೆ. ಏರುತ್ತಿರುವ ಹಣದುಬ್ಬರ ನಿಯಂತ್ರಿಸಲು ಕಳೆದ 10 ತಿಂಗಳಿಂದ ಸತತವಾಗಿ ಆರ್‌ಬಿಐ ರೆಪೋ ದರ ಏರಿಕೆ ಮಾಡುತ್ತಿದೆ. ಇದೀಗ 5ನೇ ಬಾರಿ ರೆಪೋ ದರ ಏರಿಕೆ ಮಾಡಿದೆ. ಎರಡು ತಿಂಗಳ ಹಿಂದೆ ಶೇ.0.5ರಷ್ಟು ಬಡ್ಡಿ ದರ ಏರಿಕೆ ಮಾಡಿತ್ತು. ಈಗಿನ ಏರಿಕೆಯೊಂದಿಗೆ 10 ತಿಂಗಳಿನಲ್ಲಿ ರೆಪೋ ದರ ಶೇ.2.25ರಷ್ಟು ಏರಿಕೆಯಾದಂತಾಗಿದೆ. ಆರ್‌ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ) ಕಳೆದ ಮೂರು ದಿನಗಳಿಂದ ಸತತ ಸಭೆ ನಡೆಸಿ ರೆಪೋ ದರ (ಬ್ಯಾಂಕುಗಳಿಗೆ ಆರ್‌ಬಿಐ ನೀಡುವ ಸಾಲಕ್ಕೆ ವಿಧಿಸುವ ಬಡ್ಡಿ ದರ)ವನ್ನು ಶೇ.6.25ಕ್ಕೆ ಏರಿಸುವ ನಿರ್ಧಾರವನ್ನು 5:1ರ ಬಹುಮತದಲ್ಲಿ ಬುಧವಾರ ಪ್ರಕಟಿಸಿತು. ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ರೆಪೋ ದರ ಏರಿಕೆ ನಿರ್ಧಾರ ಪ್ರಕಟಿಸಿದರು. ‘ದೇಶದ ಅಭಿವೃದ್ಧಿ ದರ ಏರಿಕೆಯಾಗುತ್ತಿದೆ. ಹಣದುಬ್ಬರ ಇಳಿಕೆಯಾಗುವ ಸಾಧ್ಯತೆಯಿದೆ. ಆದರೆ ಹಣದುಬ್ಬರದ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ’ ಎಂದು ಶಕ್ತಿಕಾಂತ್‌ ದಾಸ್‌ ಹೇಳಿದರು. ಪ್ರಸಕ್ತ ಹಣಕಾಸು ವರ್ಷದ ಕೊನೆಯವರೆಗೂ (ಮಾರ್ಚ್‌ ಅಂತ್ಯ) ಹಣದುಬ್ಬರ ಶೇ.6.7ರಷ್ಟುಇರುವ ಸಾಧ್ಯತೆಯಿದ್ದು, ದೇಶದ ಸಮಗ್ರ ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಬೆಳವಣಿಗೆ ದರ ಶೇ.6.8ರಷ್ಟುಇರಲಿದೆ ಎಂದು ಆರ್‌ಬಿಐ ಅಂದಾಜಿಸಿದೆ. ಇದೇ ವೇಳೆ 2022-23ನೇ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆ ಶೇ.6.8ರ ದರದಲ್ಲಿ ಬೆಳವಣಿಗೆ ಹೊಂದಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಅಂದಾಜಿಸಿದೆ. ಇದು ಈ ಹಿಂದೆ ಆರ್‌ಬಿಐ ಅಂದಾಜಿಸಿದ್ದ ಶೇ.7ರ ಅಭಿವೃದ್ಧಿ ದರಕ್ಕಿಂತ ಶೇ.0.2ರಷ್ಟು ಕಡಿಮೆಯಾಗಿದೆ. ಜಾಗತಿಕ ಹಣಕಾಸು ಮಾರುಕಟ್ಟೆಗಳಲ್ಲಿ ಉಂಟಾಗುತ್ತಿರುವ ಏರಿಳಿತ ಹಾಗೂ ಇನ್ನೂ ಮುಂದುವರೆದಿರುವ ಭೌಗೋಳಿಕ–ರಾಜಕೀಯ ಅಸ್ಥಿರತೆಗಳಿಂದಾಗಿ ದೇಶದ ಆರ್ಥಿಕಾಭಿವೃದ್ಧಿಯ ವೇಗ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೂ ಭಾರತವು ಈ ವರ್ಷ ಜಗತ್ತಿನ ಬೇರೆಲ್ಲಾ ದೇಶಗಳಿಗಿಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿರಲಿದೆ ಎಂದು ಆರ್‌ಬಿಐ ಹೇಳಿದೆ. ಇಎಂಐ ಎಷ್ಟು ಹೆಚ್ಚಾಗುತ್ತೆ?: 2022ರ ಮಾರ್ಚ್‌ನಲ್ಲಿ 20 ವರ್ಷ ಅವಧಿಗೆ 30 ಲಕ್ಷ ರು. ಪಡೆದಿದ್ದಿರಿ ಎಂದಿಟ್ಟುಕೊಳ್ಳಿ. ಆಗ ಬಡ್ಡಿ ದರ 7% ಇತ್ತು. ಅದರಂತೆ 23,258 ರು. ಇಎಂಐ ಪಾವತಿಸಿದರೆ ಸಾಕಿತ್ತು. ಕಳೆದ 10 ತಿಂಗಳಲ್ಲಿ ಬಡ್ಡಿ ದರ 2.25%ರಷ್ಟು ಹೆಚ್ಚಾಗಿ 9.25%ಕ್ಕೆ ತಲುಪಿದೆ. ಹೀಗಾಗಿ ಇಎಂಐ ಮೊತ್ತ 27,387 ರು.ಗೆ ಏರಲಿದೆ. ಇದರಿಂದ 10 ತಿಂಗಳಲ್ಲಿ ಇಎಂಐ 4129 ರು.ನಷ್ಟು ದುಬಾರಿಯಾದಂತೆ.  

Continue Reading

Year in Search 2022: ಗೂಗಲ್ ನಲ್ಲಿ ಭಾರತೀಯರು ಅತಿ ಹೆಚ್ಚು ಸರ್ಚ್ ಮಾಡಿದ್ದೇನು ಗೊತ್ತೇ..?

ಗೂಗಲ್ ಸರ್ಚ್ 2022 ರಲ್ಲಿ ಗೂಗಲ್ ವರ್ಷದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಂದರೆ, ಈ ವರ್ಷ ಗೂಗಲ್‌ನಲ್ಲಿ ಹೆಚ್ಚು ಹುಡುಕಲಾಗಿದೆ ಎಂಬ ಮಾಹಿತಿಯನ್ನು ಕಂಪನಿ ನೀಡಿದೆ. ಗೂಗಲ್ ಇಯರ್ ಇನ್ ಸರ್ಚ್ 2022 ರಲ್ಲಿ, ಐಪಿಎಲ್ ಅನ್ನು ಹೆಚ್ಚು ಹುಡುಕಲಾಗಿದೆ. ಇದಾದ ನಂತರ ಜನರು ಕರೋನಾ ಕುರಿತು ಮಾಡಿದ ಕೋವಿನ್‌ ಎಂಬ ಸೈಟ್ ಅನ್ನು ಹುಡುಕಿದರು. ಭಾರತದ ಜನರು ಫಿಫಾ ವಿಶ್ವಕಪ್ ಮತ್ತು ಏಷ್ಯಾ ಕಪ್‌ಗಾಗಿ ತೀವ್ರವಾಗಿ ಹುಡುಕಾಟ ಮಾಡಿದ್ದಾರೆ. ‘ವಾಟ್ ಇಸ್’ ವಿಭಾಗದಲ್ಲಿ ಅಗ್ನಿಪಥ್ ಸ್ಕೀಮ್ […]

Continue Reading

ವಿಶ್ವದ ಪ್ರಬಲ ಪಾಸ್ ಪೋರ್ಟ್ ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ..? ಇಲ್ಲಿದೆ ನೋಡಿ

ಪ್ರತಿ ವರ್ಷ ಉನ್ನತ ಪಾಸ್‌ಪೋರ್ಟ್ ನೀಡುವ ರಾಷ್ಟ್ರಗಳ ಪಟ್ಟಿಯನ್ನು ಸಾರ್ವಜನಿಕಗೊಳಿಸಲಾಗುತ್ತದೆ. ಅಂತೆಯೇ 2022 ರ ಪಾಸ್‌ಪೋರ್ಟ್‌ಗಳ ರೇಟಿಂಗ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಪ್ರತಿ ವರ್ಷ ಲಂಡನ್ ಮೂಲದ ವಲಸೆ ಸಲಹಾ ಸಂಸ್ಥೆ ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್ 2022 ವಿಶ್ವದ ಪ್ರಬಲ ಮತ್ತು ದುರ್ಬಲ ಪಾಸ್‌ಪೋರ್ಟ್‌ಗಳ ಶ್ರೇಯಾಂಕವನ್ನು ಪ್ರಕಟಿಸುತ್ತದೆ. ಪಾಸ್‌ಪೋರ್ಟ್ ಶ್ರೇಯಾಂಕಗಳು ವೀಸಾವನ್ನು ಪಡೆದುಕೊಳ್ಳದೆ ನೀವು ಎಷ್ಟು ದೇಶಗಳನ್ನು ಪ್ರವೇಶಿಸಬಹುದು ಎಂಬುದನ್ನು ತಿಳಿಸುತ್ತದೆ. ಇದು ದೇಶದಿಂದ ದೇಶಕ್ಕೆ ಬದಲಾಗುತ್ತದೆ ಮತ್ತು ಹಲವಾರು ಆರ್ಥಿಕ ಮತ್ತು ಇತರ ಅಂಶಗಳನ್ನು ನೋಡಿ […]

Continue Reading

10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ 2521 ಉದ್ಯೋಗಾವಕಾಶ..! ಇಂದೇ ಅರ್ಜಿ ಸಲ್ಲಿಸಿ

ಭಾರತೀಯ ರೈಲ್ವೇಯಲ್ಲಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಇಲ್ಲಿದೆ ಸುವರ್ಣಾವಕಾಶ. ಭಾರತೀಯ ರೈಲ್ವೆಯು ಪಶ್ಚಿಮ ಕೇಂದ್ರ ರೈಲ್ವೇ ಅಡಿಯಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿಗಳನ್ನು ಕೋರಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್ wcr.indianrailways.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ. ಹುದ್ದೆಗಳ ವಿವರಗಳು: ಒಟ್ಟು ಹುದ್ದೆಗಳ ಸಂಖ್ಯೆ- 2521 JBP ವಿಭಾಗ- 884 ಹುದ್ದೆಗಳು BPL […]

Continue Reading

ನೌಕಾಪಡೆಯಲ್ಲಿ ನಾವಿಕರಾಗಬೇಕೆ..? 1500 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ – ಇಂದೇ ಅರ್ಜಿ ಸಲ್ಲಿಸಿ

ಭಾರತೀಯ ನೌಕಾಪಡೆಯು  ಶೀಘ್ರದಲ್ಲೇ ಸೀನಿಯರ್ ಸೆಕೆಂಡರಿ ರಿಕ್ರೂಟ್ , ಮೆಟ್ರಿಕ್ ನೇಮಕಾತಿ ಮೂಲಕ ಅಗ್ನಿವೀರರ ನೇಮಕಾತಿಗಾಗಿ ಅಧಿಸೂಚನೆಯನ್ನ ಹೊರಡಿಸುತ್ತದೆ. ವಿಶ್ವಸನೀಯ ಮೂಲಗಳ ಪ್ರಕಾರ ಈ ವಾರದೊಳಗೆ ಅಧಿಸೂಚನೆ ಹೊರಬೀಳಲಿದೆ. ಡಿಸೆಂಬರ್ 8ರಿಂದ ಅರ್ಜಿ ಸಲ್ಲಿಕೆ ಆರಂಭವಾಗುವ ಸಾಧ್ಯತೆ ಇದೆ. ಅರ್ಹ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ವೆಬ್ಸೈಟ್ www.joinindiannavy.gov.in ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 17 ಆಗಿದೆ ಎನ್ನಲಾಗ್ತಿದೆ. ಒಟ್ಟು ಹುದ್ದೆಗಳ ಸಂಖ್ಯೆ.! ನೇವಿ ಅಗ್ನಿವೀರರ ನೇಮಕಾತಿ ಮೂಲಕ ಒಟ್ಟು 1500 ಹುದ್ದೆಗಳನ್ನ ಭರ್ತಿ ಮಾಡಲಾಗುತ್ತದೆ. ಈ ಭಾರತೀಯ […]

Continue Reading

ಮೂರು ರಾಜ್ಯಗಳಲ್ಲಿ ವೇತನಕ್ಕಿಂತ ಪಿಂಚಣಿ ವೆಚ್ಚವೇ ಹಲವು ಪಟ್ಟು ಹೆಚ್ಚು..!

ನವದೆಹಲಿ: ಕೇಂದ್ರ ಸರ್ಕಾರ ಮತ್ತು ಗುಜರಾತ್ ಸೇರಿದಂತೆ ಮೂರು ರಾಜ್ಯಗಳು 2019-20ರಲ್ಲಿ ಉದ್ಯೋಗಿಗಳಿಗೆ ವೇತನ ನೀಡಲು ವ್ಯಯಿಸಿರುವ ವೆಚ್ಚಕ್ಕಿಂತಲೂ ಪಿಂಚಣಿ ನೀಡಲು ಮಾಡಿರುವ ವೆಚ್ಚ ಹೆಚ್ಚಾಗಿದೆ ಎಂಬುದು ಸಿಎಜಿ ವರದಿಯಿಂದ ತಿಳಿದುಬಂದಿದೆ. ಅಧಿಕಾರಕ್ಕೆ ಬಂದರೆ ಹಳೆಯ ಪಿಂಚಣಿ ವ್ಯವಸ್ಥೆ ಜಾರಿ ಮಾಡುವುದಾಗಿ ರಾಜಕೀಯ ಪಕ್ಷಗಳು ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆ ಚುನಾವಣೆಗಳಲ್ಲಿ ಭರವಸೆ ನೀಡಿರುವ ಬೆನ್ನಲ್ಲೇ ಈ ವರದಿ ಬಹಿರಂಗವಾಗಿದೆ. ಕಾಂಗ್ರೆಸ್ ಆಡಳಿತ ಇರುವ ರಾಜಸ್ಥಾನ ಮತ್ತು ಛತ್ತೀಸ್​ಗಡ ರಾಜ್ಯಗಳು ಈಗಾಗಲೇ ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಿವೆ. […]

Continue Reading

ಮನೆಯಲ್ಲಿ ಕುಳಿತು Ration Card ಪಡೆಯಿರಿ, ಆನ್‌ಲೈನ್‌ನಲ್ಲೇ ಸರಳವಾಗಿ ಅರ್ಜಿ ಸಲ್ಲಿಸಿ!

ಪ್ರತಿಯೊಬ್ಬರಿಗೂ ಪಡಿತರ ಚೀಟಿ  ಬಹಳ ಮುಖ್ಯ. ನಿಮಗೆ ಉಚಿತ ಪಡಿತರ ಚೀಟಿ ಬೇಕಾದರೆ, ನೀವು ಇನ್ನೂ ಪಡಿತರ ಚೀಟಿ ಮಾಡದಿದ್ದರೆ ನೀವು ಮನೆಯಲ್ಲಿಯೇ  ಕುಳಿತು ಈ ಕೆಲಸವನ್ನು ಮಾಡಬಹುದು. ಇದಕ್ಕಾಗಿ ನೀವು ಸರ್ಕಾರಿ ಕಚೇರಿಗಳಿಗೆ  ಅಲೆಯಬೇಕಿಲ್ಲ. ಏರುತ್ತಿರುವ ಹಣದುಬ್ಬರದ ಮಧ್ಯೆ ದೇಶದ ಅನೇಕ ಜನರಿಗೆ ಉಚಿತ ಪಡಿತರವು ಬಹಳ ಮುಖ್ಯವಾಗಿದೆ. ಇದನ್ನು ಮನೆಯಲ್ಲಿಯೇ ಕುಳಿತು ಹೇಗೆ ತಯಾರಿಸಬಹುದು ಎಂಬುದನ್ನು ನಾವು ಇಲ್ಲಿ ಹೇಳುತ್ತಿದ್ದೇವೆ. ಪಡಿತರ ಚೀಟಿಯಲ್ಲಿರುವ ಮಾಹಿತಿಯು ಆಧಾರ್ ಕಾರ್ಡ್ನಂತೆ ನಾಗರಿಕರ ಗುರುತು ಮತ್ತು ನಿವಾಸದ ಪ್ರಮುಖ […]

Continue Reading

Gold ATM launched.. ಚಿನ್ನವನ್ನು ಡ್ರಾ ಮಾಡುವ ATM ನೋಡಿದ್ದೀರಾ..? ಇಲ್ಲಿದೆ ನೋಡಿ

ಎಟಿಎಂಗಳಲ್ಲಿ ಹಣ ಡ್ರಾ ಮಾಡಿದ್ದೀರಾ. ಆದರೆ ಚಿನ್ನವನ್ನು ಡ್ರಾ ಮಾಡುವುದನ್ನು ನೋಡಿದ್ದೀರಾ? ಹೌದು, ಹೈದರಾಬಾದ್‌ನ ಬೇಗಂ ಪೇಟೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಚಿನ್ನದ ಎಟಿಎಂ ಉದ್ಘಾಟಿಸಲಾಗಿದೆ. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ನೀವು ಬಯಸಿದ ಚಿನ್ನವನ್ನು ಡ್ರಾ ಮಾಡಬಹುದು. ಹೈದರಾಬಾದ್‌ನ ಬೇಗಂಪೇಟೆಯಲ್ಲಿರುವ ಗೋಲ್ಡ್ ಸಿಕ್ಕಾ ಕಂಪನಿಯ ಕಚೇರಿಯಲ್ಲಿ ತೆಲಂಗಾಣ ಮಹಿಳಾ ಆಯೋಗದ ಅಧ್ಯಕ್ಷೆ ಸುನಿತಾ ಲಕ್ಷ್ಮಾ ರೆಡ್ಡಿ ಅವರು ನೂತನ ಚಿನ್ನದ ಎಟಿಎಂ ಅನ್ನು ಉದ್ಘಾಟಿಸಿದ್ದಾರೆ. ಶೇ.99.99ರಷ್ಟು ಶುದ್ಧತೆಯ 0.5, 1, 2, 5, 10, […]

Continue Reading

Oyo Layoffs.. 600 ಉದ್ಯೋಗಿಗಳನ್ನು ಕಂಪೆನಿಯಿಂದ ವಜಾಗೊಳಿಸಿದ ಓಯೋ

ನವದೆಹಲಿ : ಕಂಪನಿಗಳಿಂದ ವಜಾ ಪ್ರಕ್ರಿಯೆ ಮುಂದುವರೆದಿದ್ದು, ಟ್ವಿಟರ್, ಅಮೆಜಾನ್, ಪೇಸ್ ಬುಕ್ ಸಾಲಿಗೆ ಈಗ ಓಯೊ ಸೇರಿದೆ. ಹೌದು, ಓಯೋ ಕಂಪನಿಯು ಹೇಳಿಕೆಯನ್ನ ನೀಡುವಾಗ ಈ ಮಾಹಿತಿ ನೀಡಿದೆ. ನಮ್ಮ ಒಟ್ಟು 3,700 ಉದ್ಯೋಗಿಗಳಲ್ಲಿ ಅನೇಕರನ್ನ ನಾವು ವಜಾಗೊಳಿಸುತ್ತೇವೆ ಎಂದಿದೆ. ಅದ್ರಂತೆ, ತಂತ್ರಜ್ಞಾನ ಮತ್ತು ಕಾರ್ಪೊರೇಟ್ ವಲಯದಲ್ಲಿ 600 ಉದ್ಯೋಗಗಳು ಕಡಿಮೆಯಾಗಲಿವೆ ಎಂದು ತಿಳಿಸಿದೆ. ಹೇಳಿಕೆಯ ಪ್ರಕಾರ, ಪಾಲುದಾರರ ಸಂಬಂಧ ನಿರ್ವಹಣೆ ಮತ್ತು ವ್ಯಾಪಾರ ಅಭಿವೃದ್ಧಿ ತಂಡಗಳಿಗೆ ಜನರನ್ನ ಸೇರಿಸುವಾಗ ನಾವು ನಮ್ಮ ಉತ್ಪನ್ನ ಮತ್ತು ಎಂಜಿನಿಯರಿಂಗ್, ಕಾರ್ಪೊರೇಟ್ ಪ್ರಧಾನ […]

Continue Reading

Twitter Bans Accounts.. ಭಾರತದಲ್ಲಿ 44 ಸಾವಿರ ಖಾತೆಗಳನ್ನು ನಿಷೇಧಿಸಿದ ಟ್ವಿಟರ್

ನವದೆಹಲಿ: ಸೆಪ್ಟೆಂಬರ್ 26 ಮತ್ತು ಅಕ್ಟೋಬರ್ 25ರ ನಡುವೆ ಭಾರತದಲ್ಲಿ ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಮತ್ತು ಒಪ್ಪಿಗೆ ಯಿಲ್ಲದ ನಗ್ನತೆಯನ್ನು ಉತ್ತೇಜಿಸುವ 44,611 ಖಾತೆಗಳನ್ನು ಟ್ವಿಟರ್ ನಿಷೇಧಿಸಿದೆ. ಆಗಸ್ಟ್ 26 ಮತ್ತು ಸೆಪ್ಟೆಂಬರ್ 25 ರ ನಡುವಿನ ಹಿಂದಿನ ಅವಧಿಯಲ್ಲಿ ಕಂಪನಿಯು ಭಾರತದಲ್ಲಿ ಇಂತಹ 52,141 ಖಾತೆಗಳನ್ನು ನಿಷೇಧಿಸಿತ್ತು. ಎಲಾನ್ ಮಸ್ಕ್ ನೇತೃತ್ವದಲ್ಲಿ ಟ್ವಿಟರ್ ಈ ಕ್ರಮವನ್ನು ಕೈಗೊಂಡಿದ್ದು, ದೇಶದಲ್ಲಿ ತನ್ನ ವೇದಿಕೆಯಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುತ್ತಿದ್ದ 4,014 ಖಾತೆಗಳನ್ನು ತೆಗೆದುಹಾಕಿದೆ. 2021ರ ಹೊಸ ಐಟಿ ನಿಯಮಗಳಿಗೆ ಅನುಸಾರವಾಗಿ ಟ್ವಿಟರ್ […]

Continue Reading