ಬೆಂಗಳೂರು: ನಟ, ನಿರ್ದೇಶಕ ಪ್ರೇಮ್ ಹಾಗೂ ನಟಿ ರಕ್ಷಿತಾ ದಂಪತಿ ಒಟ್ಟಾಗಿ ಬಂದು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಮತಗಟ್ಟೆಯಲ್ಲಿದ ಜನರು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಮತದಾನದ ಬಳಿಕ ಮಾತನಾಡಿದ ನಿರ್ದೇಶಕ ಪ್ರೇಮ್, ದುಡ್ಡು ಪಡೆದುಕೊಂಡು ಯಾರೂ ಮತ ಹಾಕಬೇಡಿ. ಒಬ್ಬೊಬ್ಬರು ಮನೆ ಹತ್ತಿರ ವೋಟ್ ಹಾಕಿ ಎಂದು ಬರುತ್ತಾರೆ. ಇನ್ನು ಕೆಲವರು ಬಂದು ಇದು ನನ್ನ ಕೊನೆಯ ಚುನಾವಣೆ. ಹೀಗಾಗಿ ಮತ ಹಾಕಿ ಎನ್ನುತ್ತಾರೆ. ಆದರೆ ಯಾವುದೇ ಕಾರಣಕ್ಕೂ ನಿಮ್ಮ ಹಕ್ಕನ್ನು ಮಾರಿಕೊಳ್ಳಬೇಡಿ. ಒಳ್ಳೆಯ ವ್ಯಕ್ತಿ, ಕೆಲಸ ಮಾಡುವ ಅಭ್ಯರ್ಥಿಗೆ ಮತ ನೀಡಿ ಎಂದು ಹೇಳಿದರು. ಮತದಾನ ಪ್ರತಿಯೊಬ್ಬರ ಅಧಿಕಾರ ಆಗಿದ್ದು, ಪ್ರತಿಯೊಬ್ಬ ನಾಗರೀಕರೂ ಅವಕಾಶ ಬಳಸಿಕೊಳ್ಳಬೇಕು. ಯಾರು ಚೆನ್ನಾಗಿ ಕೆಲಸ ಮಾಡುತ್ತಾರೆ, ಒಳ್ಳೆಯ ಅಭಿವೃದ್ಧಿ ಮಾಡುವವರಿಗೆ ಮತ ನೀಡಿ ಎಂದು ನಟಿ ರಕ್ಷಿತಾ ಪ್ರೇಮ್ ಹೇಳಿದ್ದಾರೆ.
Browsing: Uncategorized
ಬೆಂಗಳೂರು: ವಿವಾಹಕ್ಕೂ ಮುನ್ನ ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸಿದ ಮದುಮಗ ಬಳಿಕ ಕಲ್ಯಾಣ ಮಂಟಪಕ್ಕೆ ತೆರಳಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಬಸವನಗುಡಿಯಲ್ಲಿ ಮತದಾನ ಮಾಡಿದ ಬಳಿಕ…
ಬೆಂಗಳೂರು: ರಾಜ್ಯದಲ್ಲಿ ಇಂದು ವಿಧಾನಸಭೆಗೆ ಚುನಾವಣೆ ಭರದಿಂದ ಸಾಗುತ್ತಿದ್ದು, ಮತದಾರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ. ಜನಸಾಮಾನ್ಯರಂತೆ ಸೆಲೆಬ್ರಿಟಿಗಳು ಮತಚಲಾಯಿಸಿದ್ದಾರೆ.ಅದರಂತೆ ಸರತಿ ಸಾಲಿನಲ್ಲಿ ನಿಂತು ಜೆಪಿ ನಗರ…
ಬೆಂಗಳೂರು: BTL ವಿದ್ಯಾವಾಹಿನಿ ಶಾಲೆಯ ಮತಗಟ್ಟೆಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಕ್ಯೂ ನಲ್ಲಿ ನಿಂತು ಮತ ಚಲಾವಣೆ ಮಾಡಿದ್ದಾರೆ. ಮತ ಚಲಾವಣೆ ಬಳಿಕ ನಟ/ಪ್ರಜಾಕೀಯ ಸಂಸ್ಥಾಪಕ ಉಪೇಂದ್ರ ಹೇಳಿಕೆ ನೀಡಿದ್ದು “ದೊಡ್ಡದಾಗಿ ಕರ್ನಾಟಕದ ಹಾಗೂ ದೇಶದ ಭವಿಷ್ಯ ಅನ್ನೋದಕ್ಕಿಂತ ಸರಳವಾಗಿ ಹೇಳೋಣ, ನಮ್ಮ ಭವಿಷ್ಯ ಇದು. ಎಲ್ಲರೂ ವೋಟ್ ಮಾಡಿ. ವೋಟ್ ಮಾಡದೆ ಇರುವ 30% ಎದ್ದು ಬಂದು ವೋಟ್ ಮಾಡಿದ್ರೆ ಅದು ನಿಜವಾದ ಪ್ರಜಾಪ್ರಭುತ್ವ ಸ್ಥಾಪನೆ ಆಗುತ್ತದೆ” ಎಂದಿದ್ದಾರೆ. ಬುದ್ಧಿವಂತಿಕೆಯಿಂದ ಮತ ಚಲಾಯಿಸುವಂತೆ ಕೈಸನ್ನೆ ಮೂಲಕ ಸೂಚನೆ ನೀಡಿದ್ದು ಕೆಲವೆಡೆ ವೋಟ್ ಡಿಲೇಟ್ ಆಗಿ ಕೆಲವರಿಗೆ ವೋಟ್ ಮಾಡಲು ಅವಕಾಶ ಸಿಗದೆ ಇರುವ ವಿಚಾರದ ಬಗ್ಗೆಯೂ ಅವರು “ಆ ಬಗ್ಗೆ ನನಗೆ ಮಾಹಿತಿ ಇಲ್ಲ” ಎಂದು ಹೇಳಿಕೆ ನೀಡಿದ್ದಾರೆ. ಮತಗಟ್ಟೆ 220ರಲ್ಲಿ ಉಪೇಂದ್ರ ಮತ ಚಲಾಯಿಸಿದ್ದು ನಂತರ ಅವರೊಂದಿಗೆ ಫೋಟೊ, ಸೆಲ್ಫಿ ತೆಗೆಸಿಕೊಳ್ಳಲು ಜನ ಮುಗಿಬಿದ್ದರು.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಬಸವನಗುಡಿ ಕ್ಷೇತ್ರದ ಮೇಘನಾ ದೂರದ ಅಮೆರಿಕಾದಿಂದ ಊರಿಗೆ ಆಗಮಿಸಿ ಮತ ಚಲಾಯಿಸಿದ್ದಾರೆ. ಕರ್ನಾಟಕ ವಿಧಾನ ಸಭೆಯ ಚುನಾವಣೆಯಲ್ಲಿ ಮತದಾನಕ್ಕೋಸ್ಕರ ದೂರದ ಅಮೆರಿಕಾದಿಂದ ಆಗಮಿಸಿದ…
ಬೆಂಗಳೂರು: ದುನಿಯಾ ವಿಜಯ್ ಕತ್ರಿಗುಪ್ಪೆಯ ಸರ್ಕಾರಿ ಶಾಲೆಗೆ ಆಗಮಿಸಿ ಮತ ಚಲಾಯಿಸಿದ್ದು ನಂತರ ಸಾರ್ವಜನಿಕರಿಗೆ ಸಂದೇಶ ನೀಡಿದ್ದಾರೆ. ಮತ ಚಲಾಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ನಟ ದುನಿಯಾ ವಿಜಯ್ “ಮತದಾನ ಮಾಡೋದು ನಮ್ಮ ಹಕ್ಕು. Video Player 00:00 01:23 ಯಾರು ಮನೆಯಲ್ಲಿ ಸುಮ್ನೆ ಕೂರಬೇಡಿ. ಮಿಸ್ ಮಾಡದೇ ಎಲ್ಲರೂ ವೋಟ್ ಮಾಡಿ. ಎಲೆಕ್ಷನ್ 5 ವರ್ಷಕ್ಕೊಮ್ಮೆ ಬರೋದು. ಅದರ ಪ್ರಯೋಜನ ನಮಗೆ ಇರೋದು. ಬೇರೆಯವರಿಗೆ ಅಲ್ಲ. ಹಾಗಾಗಿ ಮಸ್ಟ್ ವೋಟ್ ಅಂತೀನಿ ಅಷ್ಟೇ” ಎಂದಿದ್ದಾರೆ.
ಬಹುನಿರೀಕ್ಷಿತ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ. ರಾಜ್ಯದ 224 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ…
ಬೆಂಗಳೂರು: ಕಾಂಗ್ರೆಸ್ ಪ್ರಣಾಳಿಕೆಯು ಮೂರ್ಖತನಕ್ಕೆ ನಿದರ್ಶನವಾಗಿದೆ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಹೇಳಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ತಮ್ಮ…
ಬೆಂಗಳೂರು: ಮತದಾನ ಮಾಡುವುದು ನಮ್ಮ ಹಕ್ಕು ಸಹ ಆಗಿದ್ದು, ಕರ್ತವ್ಯವೂ ಆಗಿದೆ. ಹಾಗಾಗಿ ನಾಯಕರು, ನಟ, ನಟಿಯರು, ಸ್ವಾಮೀಜಿಗಳು ಮತದಾನ ಮಾಡುತ್ತಿದ್ದಾರೆ. ರಾಜ್ಯದ 224 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಇನ್ನೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ತಮ್ಮ ಪತ್ನಿ ಪರಿಮಳ ಜೊತೆಗೆ ಬಂದು ಮಲ್ಲೇಶ್ವರಂ ಎಂಇಎಸ್ ಕಾಲೇಜಿನಲ್ಲಿ ಮತದಾನ ಮಾಡಿದರು. ಇಂದು ಬೆಳಗ್ಗೆಯೇ ಮತಗಟ್ಟೆಗೆ ಆಗಮಿಸಿದ ಅವರು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಅನೇಕ ಜನರೊಂದಿಗೆ ಉಭಯ ಕುಶಲೋಪರಿ ಮಾತನಾಡಿದರು., ಈ ವೇಳೆ ಅವರು ಮಾಧ್ಯಮದವರ ಜೊತೆ ಮಾತನಾಡಿದ್ರು ಜೊತೆಗೆ ತಪ್ಪದೇ ಮತದಾನ ಮಾಡುವಂತೆ ಅವರು ಕೋರಿದ್ದಾರೆ.. ಬೆಂಗಳೂರಿನಲ್ಲಿ ಒಟ್ಟು 28 ಕ್ಷೇತ್ರಗಳಲ್ಲಿ, 389 ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದಾರೆ.
ಬೆಂಗಳೂರು: ಮತ ಚಲಾಯಿಸಲು ರಾಘವೇಂದ್ರ ರಾಜ್ ಕುಮಾರ್ ಆಗಮಿಸಿದ್ದು, ಸದಾಶಿವನಗರದ ಪೂರ್ಣಪ್ರಜ್ಞ ಸ್ಕೂಲ್ ನಲ್ಲಿರುವ ಮತಗಟ್ಟೆಗೆ ಬಂತು ಸರತಿ ಸಾಲಲ್ಲಿ ನಿಂತು ಮತ ಚಲಾಯಿಸಿದ್ದಾರೆ. ಈ ವೇಳೆ…