Browsing: ಅಂತರಾಷ್ಟ್ರೀಯ

ಬೀಜಿಂಗ್‌: ದೇಶದಲ್ಲಿ ದಿನೇ ದಿನೇ ಜನಸಂಖ್ಯೆ ಪ್ರಮಾಣ ಇಳಿಕೆ ಹಾದಿಯಲ್ಲಿ ಸಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಚೀನಾ ಸರ್ಕಾರ, ಇದೀಗ ಅವಿವಾಹಿತ ಮಹಿಳೆಯರಿಗೂ ಕಾನೂನು ಬದ್ಧವಾಗಿ ಮಕ್ಕಳನ್ನು ಹೊಂದಲು ಅವಕಾಶ ನೀಡುವ ಸಂಬಂಧ ಚಿಂತನೆ ನಡೆಸಿದೆ. ಸದ್ಯ ಸಿಚುವಾನ್‌ ಪ್ರಾಂತ್ಯದಲ್ಲಿ ಅವಿವಾಹಿತ ಮಹಿಳೆಯರು ಪ್ರನಾಳ ಶಿಶು (ಐವಿಎಫ್‌) ತಂತ್ರಜ್ಞಾನ ಮೂಲಕ ಮಕ್ಕಳನ್ನು ಹೊಂದಲು ಅವಕಾಶ ಮಾಡಿಕೊಡಲಾಗಿದೆ. ಇದನ್ನು ದೇಶವ್ಯಾಪಿ ವಿಸ್ತರಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ವರದಿಗಳು ತಿಳಿಸಿವೆ. ಹಾಲಿ ವಿಶ್ವದಲ್ಲಿ ಪ್ರನಾಳ ಶಿಶು ಮಾದರಿಯಲ್ಲಿ ಮಕ್ಕಳನ್ನು ಹೆರುವವರ ಪ್ರಮಾಣ ವಾರ್ಷಿಕ 15 ಲಕ್ಷದಷ್ಟಿದೆ. ಇದರಲ್ಲಿ ಚೀನಾ ಪಾಲೇ 10 ಲಕ್ಷ ಇದೆ. ಒಂದು ವೇಳೆ ಸರ್ಕಾರ ಅವಿವಾಹಿತ ಮಹಿಳೆಯರಿಗೂ ಅವಕಾಶ ಕೊಟ್ಟರೆ ಈ ಪ್ರಮಾಣ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ. ಇತ್ತೀಚೆಗಷ್ಟೇ ಭಾರತ 142.86 ಕೋಟಿ ಜನಸಂಖ್ಯೆಯೊಂದಿಗೆ ಈವರೆಗೆ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದ ಚೀನಾ (142.57 ಕೋಟಿ) ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದೆ. 6 ದಶಕಗಳಲ್ಲಿ ಮೊದಲ ಬಾರಿ ಚೀನಾ ಜನಸಂಕ್ಯೆಯ ಕುಸಿತವಾಗಿದ್ದು, ಮತ್ತು ಈಗಿನ ಜನಸಂಖ್ಯೆಯ ಪೈಕಿ ವಯಸ್ಸಾದ ಜನರೇ ಹೆಚ್ಚಿದ್ದಾರೆ. ಈ ಹಿನ್ನೆಲೆ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ ಸರ್ಕಾರದ ರಾಜಕೀಯ ಸಲಹೆಗಾರರು ಮಾರ್ಚ್‌ನಲ್ಲಿ ಒಂಟಿ ಮತ್ತು ಅವಿವಾಹಿತ ಮಹಿಳೆಯರು ಇತರ ಸೇವೆಗಳ ಜೊತೆಗೆ ಮೊಟ್ಟೆಯ ಘನೀಕರಣ ಮತ್ತು IVF ಚಿಕಿತ್ಸೆಗೆ ಪ್ರವೇಶವನ್ನು ಹೊಂದಿರಬೇಕು ಎಂದು ಪ್ರಸ್ತಾಪಿಸಿದರು. ಆದರೆ, ಈ ಶಿಫಾರಸುಗಳ ಬಗಗೆ ಚೀನಾದ ನಾಯಕರು ಇನ್ನೂ ಸಾರ್ವಜನಿಕವಾಘಿ ಪ್ರತಿಕ್ರಿಯೆ ನೀಡಿಲ್ಲ. ಇನ್ನು, IVF ಅನ್ನು ರಾಷ್ಟ್ರವ್ಯಾಪಿಯಾಗಿ ಉದಾರಗೊಳಿಸುವುದರಿಂದ ಈಗಾಗಲೇ ಪ್ರಪಂಚದ ಅತಿದೊಡ್ಡ ಮಾರುಕಟ್ಟೆಯಾಗಿರುವ ಫಲವಂತಿಕೆಯ ಚಿಕಿತ್ಸೆಗೆ ಹೆಚ್ಚಿನ ಬೇಡಿಕೆಯನ್ನು ಸಡಿಲಿಸಬಹುದು, ಸೀಮಿತ ಫಲವತ್ತತೆ ಸೇವೆಗಳನ್ನು ತಗ್ಗಿಸಬಹುದು ಎನ್ನಲಾಗಿದೆ. ಇನ್ನು, ಈ ಉದ್ಯಮದಲ್ಲಿ ಕೆಲವು ಹೂಡಿಕೆದಾರರು ವಿಸ್ತರಿಸಲು ಅವಕಾಶವನ್ನು ನೋಡುತ್ತಾರೆ. “ಒಂಟಿ ಮಹಿಳೆಯರಿಗೆ ಮಕ್ಕಳನ್ನು ಹೊಂದಲು ಚೀನಾ ತನ್ನ ನೀತಿಯನ್ನು ಬದಲಾಯಿಸಿದರೆ, ಇದು IVF ಬೇಡಿಕೆಯ ಹೆಚ್ಚಳಕ್ಕೆ ಕಾರಣವಾಗಬಹುದು” ಎಂದು INVO ಬಯೋಸೈನ್ಸ್‌ನಲ್ಲಿ ಏಷ್ಯಾ ಪೆಸಿಫಿಕ್‌ನ ವ್ಯಾಪಾರ ಅಭಿವೃದ್ಧಿ ನಿರ್ದೇಶಕ ವೈವ್ ಲಿಪ್ಪೆನ್ಸ್ ಹೇಳಿದ್ದಾರೆ. ಕಳೆದ ವರ್ಷ ಗುವಾಂಗ್‌ಝೌ ಮೂಲದ ಒನ್‌ಸ್ಕಿ ಹೋಲ್ಡಿಂಗ್ಸ್‌ನೊಂದಿಗೆ ವಿತರಣಾ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಚೀನಾದಲ್ಲಿ ತನ್ನ IVF ತಂತ್ರಜ್ಞಾನವನ್ನು ಪ್ರಾರಂಭಿಸಲು ನಿಯಂತ್ರಕ ಅನುಮೋದನೆಗಾಗಿ ಕಾಯುತ್ತಿದೆ. ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗವು (NHC) IVF ಪ್ರವೇಶವನ್ನು ಉದಾರಗೊಳಿಸುವ ಕುರಿತು ಈವರೆಗೆ ಪ್ರತಿಕ್ರಿಯೆ ನೀಡಿಲ್ಲ. ಆದರೂ ಅನೇಕ ಯುವತಿಯರು ಮದುವೆಯಾಗಲು ಮತ್ತು ಮಕ್ಕಳನ್ನು ಹೊಂದಲು ಯೋಜನೆಗಳನ್ನು ವಿಳಂಬ ಮಾಡುತ್ತಿದ್ದಾರೆ ಎಂದು ಹಿಂದೆ ಒಪ್ಪಿಕೊಂಡಿದೆ, ಆದರೆ, ಮದುವೆ ಪ್ರಮಾಣಗಳು ಕಡಿಮೆಯಾಗಲು ಹೆಚ್ಚಿನ ಶಿಕ್ಷಣ ಮತ್ತು ಮಕ್ಕಳ ಪೋಷಣೆಯ ವೆಚ್ಚಗಳು ಕೊಡುಗೆ ನೀಡಿವೆ ಎಂದು ತಿಳಿದುಬಂದಿದೆ.ಶಾಂಘೈ ಮತ್ತು ದಕ್ಷಿಣ ಗುವಾಂಗ್‌ಡಾಂಗ್ ಪ್ರಾಂತ್ಯಗಳು ಅವಿವಾಹಿತ ಮಹಿಳೆಯರಿಗೆ ತಮ್ಮ ಮಕ್ಕಳನ್ನು ನೋಂದಾಯಿಸಲು ಅನುಮತಿ ನೀಡಿವೆ. ಆದರೆ ಒಂಟಿ ಮಹಿಳೆಯರಿಗೆ IVF ಸೇವೆಗಳನ್ನು ನಿಷೇಧಿಸಲಾಗಿದೆ.

ನ್ಯೂಯಾರ್ಕ್: ಭಾರತೀಯ ಮೂಲದ ವ್ಯಕ್ತಿಯೋರ್ವ ಕಂಠಪೂರ್ತಿ ಕುಡಿದು ಟ್ರಕ್ ಚಲಾಯಿಸಿ ಪರಿಣಾಮ ಕಾರಿಗೆ ಟ್ರಕ್ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಇಬ್ಬರು ಬಾಲಕರು ಮೃತಪಟ್ಟ ಘಟನೆ ನ್ಯೂಯಾರ್ಕ್‌ನ ಲಾಂಗ್‌…

ರುವಾಂಡಾ : ಉತ್ತರ ಮತ್ತು ಪಶ್ಚಿಮ ರುವಾಂಡಾದಲ್ಲಿ ಸಂಭವಿಸಿದ ಭೀಕರವ ಪ್ರವಾಹಕ್ಕೆ ಕನಿಷ್ಠ 129 ಜನರು ಸಾವನ್ನಪ್ಪಿದ್ದು ಸಾಕಷ್ಟು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.…

ಪಾಕಿಸ್ತಾನ್: ಖೈಬರ್ ಪಖ್ತುಂಖ್ವಾದ ಪರ್ಚಿನಾರ್ ಶಾಲೆಯಲ್ಲಿ ನಡೆದ ಭಾರೀ ಗುಂಡಿನ ದಾಳಿಯಲ್ಲಿ ಏಳು ಶಿಕ್ಷಕರು ಮೃತಪಟ್ಟಿದ್ದಾರೆ. ಶಾಲೆಗೆ ನುಗ್ಗಿದ ಕೆಲ ಶಸ್ತ್ರಸಜ್ಜಿತ ವ್ಯಕ್ತಿಗಳು ಸಿಬ್ಬಂದಿಯ ಮೇಲೆ ಮನ…

ರಷ್ಯಾ(Russia) ಮತ್ತು ಉಕ್ರೇನ್(Ukraine) ನಡುವಿನ ಯುದ್ಧ ಮತ್ತೊಂದು ಅಪಾಯಕಾರಿ ಹಂತಕ್ಕೆ ತಲುಪಿದೆ. ಉಕ್ರೇನ್ -ಹಾಗೂ ರಷ್ಯಾ ಪರಸ್ಪರ ದಾಳಿ ನಡೆಸಿದೆ. ರಷ್ಯಾ ಅಧ್ಯಕ್ಷ ವಾಸವಿದ್ದ ಕಟ್ಟಡದ ಮೇಲೆ…

ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕ ನಿವಾಸಿ​ ಅಜಯ್​ ಬಂಗಾ ವಿಶ್ವ ಬ್ಯಾಂಕ್​ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅಜಯ್ ಬಂಗಾ ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ನಾಮನಿರ್ದೇಶನ ಮಾಡಿದ್ದಾರೆ.…

ಇದೇ ಮೇ 6ರಂದು ಬ್ರಿಟನ್ ನ ಮುಂದಿನ ರಾಜನಾಗಿ ಕಿಂಗ್ ಚಾರ್ಲ್ಸ್ III ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಏಳು ದಶಕಗಳ ಕಾಲ ಬ್ರಿಟನ್ನನು ಆಳಿದ ರಾಣಿ ಎಲಿಜಬೆತ್-2 ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ನಿಧನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇದೀಗ ಬ್ರಿಟನ್‌ನ ಮುಂದಿನ ರಾಜನಾಗಿ ಚಾರ್ಲ್ಸ್ -3 ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ. ಅಧಿಕೃತವಾಗಿ ರಾಜನ ಜವಾಬ್ದಾರಿಯನ್ನ ವಹಿಸಿಕೊಂಡಿದ್ದರೂ, ಮೇ 6…

ಅಮೆರಿಕದಲ್ಲಿ ಬಂದೂಕು ಸಂಸ್ಕೃತಿಯ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ. ಬಂದೂಕು ಹೊಂದಿರುವ ವ್ಯಕ್ತಿಗಳು ಎಲ್ಲೆಂದರಲ್ಲಿ ಶೂಟ್ ಮಾಡಿ ಅದೆಷ್ಟೋ ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿದ್ದಾರೆ. ಹೀಗಾಗಿ ಇದೀಗ…

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನಾಲ್ಕು ದಿನಗಳ ಅಧಿಕೃತ ಭೇಟಿಗಾಗಿ ಮಂಗಳವಾರ ದಕ್ಷಿಣ ಕೊರಿಯಾ ತಲುಪಿದ್ದಾರೆ. ಇಂಚಿಯಾನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸೀತಾರಾಮನ್ ಅವರನ್ನು ಕೊರಿಯಾ…

ಹೊಸದಿಲ್ಲಿ: ಸೇನೆ ಹಾಗೂ ಅರೆಸೇನೆ ನಡುವೆ ಸುಡಾನ್ ನಲ್ಲಿ ನಡೆಯುತ್ತಿರುವ ಯುದ್ಧ ಇಂದಿಗೂ ಮುಂದುವರೆದಿದೆ. ಸುಡಾನ್ ನಲ್ಲಿ ಸಿಲುಕಿರುವ ಸಾಕಷ್ಟು ಭಾರತೀಯರನ್ನು ಅಪರೇಷನ್ ಕಾವೇರಿ ಅಡಿಯಲ್ಲಿ ಕರೆತರಲಾಗುತ್ತಿದ್ದು…