Browsing: ಜಿಲ್ಲೆ

ಹುಬ್ಬಳ್ಳಿ: ಕರ್ನಾಟಕದಲ್ಲಿ ಸ್ಪಷ್ಟ ಬಹುಮತದ ಬಿಜೆಪಿ ಸರ್ಕಾರ ಬರುತ್ತೆ ನಮಗೆ ಸಮೀಕ್ಷೆಗಳ ಬಗ್ಗೆ ವಿಶ್ವಾಸವಿಲ್ಲ. ನಾನು ಸಿಎಮ್ ಅಭ್ಯರ್ಥಿಯಲ್ಲ, ಮಂತ್ರಿ ಆಕಾಂಕ್ಷಿಯಲ್ಲ. ಪಕ್ಷ ಯಾರನ್ನೇ ಮುಖ್ಯಮಂತ್ರಿ ಮಾಡಲಿ, ಪಕ್ಷದ…

ತುಮಕೂರು: ಜಿಲ್ಲೆಯ ತುರುವೆರೆಗೆ ಕೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ (Congress Candidate) ಬೆಮೆಲ್ ಕಾಂತರಾಜು ಪರ ರಾಹುಲ್ ಗಾಂಧಿ (Rahul Gandhi) ಅಬ್ಬರದ ಪ್ರಚಾರ ನಡೆಸಿದರು. ಬಳಿಕ ಇಲ್ಲಿನ ಗುರುಭವನ…

ಬಾಗಲಕೋಟೆ: ಮೋದಿ (Narendra Modi) ಭಾಷಣ ಎಲ್ಲಾ ಸಂತೆ ಭಾಷಣ. ಯಾವುದೂ ಜಾರಿಗೆ ತರಲು ಗೊತ್ತಿಲ್ಲ. ಬರೀ ಬುರುಡೆ ಭಾಷಣ ಮಾಡಿ ಹೋಗುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ…

ಮಡಿಕೇರಿ: ಪ್ರತಾಪ್ ಸಿಂಹ (Prathap Simha) ಮುಂದೆ ಯಾವ ಸ್ಟಾರ್ ಪ್ರಚಾರಕರೂ ಇಲ್ಲ. ವರುಣಾ (Varuna) ಕ್ಷೇತ್ರಕ್ಕೆ ರಮ್ಯಾ ಮತ್ತು ದುನಿಯಾ ವಿಜಿ ಬರಲಿ. ನಾನು ಬರುತ್ತೇನೆ.…

ಧಾರವಾಡ: ಇಷ್ಟು ದಿನ ಬಿಜೆಪಿ ಶಾಸಕರನ್ನೇ ಬೈದಾಡಿಕೊಂಡು ಅಡ್ಡಾಡಿದ ಬಸವರಾಜ ಕೊರವರ ಇಂದು ಅದೇ ಪಕ್ಷಕ್ಕೆ ಬೆಂಬಲ ನೀಡಿ ನನ್ನನ್ನು ಬೈಯುವ ಕೆಲಸ ಮಾಡಿದ್ದನ್ನು ನೋಡಿದರೆ ಅವರು ಹಣಕ್ಕೆ…

ಮಂಡ್ಯ :- ಸಮಾಜ ಸೇವೆ ಜೊತೆಗೆ‌ ರಾಜಕೀಯ ಶಕ್ತಿಯನ್ನು ನೀಡಿದರೆ ನಿಮ್ಮ ಮನೆಯ ಸೇವಕನಾಗಿ ದುಡಿಯುತ್ತೇನೆ ಎಂದು ಮದ್ದೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಪಿ.ಸ್ವಾಮಿ ಹೇಳಿದರು.…

ಕೋಲಾರ: ಕಳೆದ ಚುನಾವಣೆಯಲ್ಲಿ ಮುಳಬಾಗಿಲು ಕ್ಷೇತ್ರದಲ್ಲಿ 7 ದಿನದಲ್ಲಿ‌ ಕ್ಷೇತ್ರದ ಬಗ್ಗೆ ಅರಿವೇ ಇಲ್ಲದ  ಅಭ್ಯರ್ಥಿಯನ್ನು ಗೆಲ್ಲಿಸಿ‌ ಶಾಸಕರನ್ನಾಗಿ ಮಾಡಿ ಇಡೀ ರಾಜ್ಯದ ಗಮನ ಸೆಳೆದಿದ್ದ ಕೊತ್ತೂರು ಮಂಜುನಾಥ್…

ರಾಣೇಬೆನ್ನೂರ ಎನ್ ಸಿ ಪಿ ಅಭ್ಯರ್ಥಿ ಆರ್ ಶಂಕರ ಇಂದು ರಾಣೇಬೆನ್ನೂರು ತಾಲೂಕಿನ ಎಣ್ಣಿಹೊಸಳ್ಳಿ,ಚಳಗೇರಿ,ತೆರದಹಳ್ಳಿ,ಮಣಕೂರ,ನಂದಿಹಳ್ಳಿ,ಅಂತರವಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಅಬ್ಬರದ ಪ್ರಚಾರ ನಡಸಿದರು‌. ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ…

ಮೈಸೂರು: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 11 ಕ್ಷೇತ್ರದಿಂದ 26,55,988 ಮತದಾರರು ಮತದಾನ ಮಾಡಲಿದ್ದಾರೆ. ಇವರಲ್ಲಿ 1,66,633 ಮತದಾರರು ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಲಿದ್ದಾರೆ. 2018ರ…

ಶಿಡ್ಲಘಟ್ಟ: ನಮ್ಮ ತಾತನ ಕಾಲದಿಂದಲೂ ಕಾಂಗ್ರೆಸ್ ಪಕ್ಷ ಬಡವರ ಪಕ್ಷ ಅಂತ ನಂಬಿದ್ದೆವು, ಆದರೆ ಕಾಂಗ್ರೆಸ್ ಹಣವಂತರ ಪಕ್ಷ ಎಂದು ಗೊತ್ತಾಗಿದೆ.  ಹಂಬಲದಿಂದ ಚುನಾವಣೆ ಗೆಲ್ಲಲು ಸಾದ್ಯವಿಲ್ಲ, ಮತದಾರರ ಪ್ರೀತಿಯಿಂದ ಮಾತ್ರ ಮತ ಪಡೆಯಲು ಸಾದ್ಯ, ಪ್ರಾಮಾಣಿಕವಾಗಿ ನಿಮ್ಮ ಸೇವೆ ಮಾಡಲು ಒಂದು ಅವಕಾಶ ಕೊಡಿ ಎಂದು ಸ್ವತಂತ್ರ ಅಭ್ಯರ್ಥಿ ಆಂಜಿನಪ್ಪ (ಪುಟ್ಟು) ಮನವಿ ಮಾಡಿದರು.  ತಾಲೂಕಿನ ಹಿತ್ತಲಹಳ್ಳಿ ಗೇಟ್ ಬಳಿ ಆಯೋಜಿಸಿದ್ದ ಸ್ವಾಭಿಮಾನಿ ಜನತಾ ಸಮಾವೇಶ ಕಾರ್ಯಕ್ರಮದಲ್ಲಿ ಸಾವಿರಾರು ಜನ ಮತದಾರರು ಹಾಗು ಆಂಜಿನಪ್ಪ ನವರ ಅಭಿಮಾನಿಗಳು ಸಮಾವೇಶ ಗೊಂಡಿದ್ದರು. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ಟಿಕೆಟ್ ಕೈ ತಪ್ಪಿದ್ದರಿಂದ ಸ್ವತಂತ್ರ ವಾಗಿ ಸ್ಪರ್ಧಿಸಿದ್ದು, ಕ್ಷೇತ್ರದಾದ್ಯಂತ ಅಪಾರ ಜನ ಬೆಂಬಲ ವ್ಯಕ್ತವಾಗಿದೆ. ವೇದಿಕೆಯಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು ನಾನು ಚುನಾವಣೆಗಾಗಿ ಎಲ್ಲಿಂದಲೋ ಬಂದವನಲ್ಲ, ಇಲ್ಲೇ ಇದ್ದು ಹತ್ತು ವರ್ಷಗಳಿಂದ ನಿಮ್ಮ ಸೇವೆ ಮಾಡಿಕೊಂಡು ಬಂದವನು. ಕಳೆದ ಬಾರಿ ಸ್ಪರ್ದಿಸಿದ್ದಾಗ ಮುಂದಿನ ಚುನಾವಣೆಯಲ್ಲಿ ಗೆಲ್ಲಿಸುವ ಭರವಸೆ ಕೊಟ್ಟಿದ್ದಿರಿ, ಕಳೆದ ಹತ್ತು ವರ್ಷಗಳಲ್ಲಿ ನಾನು ನಿಮ್ಮ ಪ್ರೀತಿ, ವಿಶ್ವಾಸ ಗಳಿಸಿದ್ದರೆ ಈಗ ನನಗೆ ಮತ ಕೊಟ್ಟು, ಆ ಮೂಲಕ ನಿಮ್ಮ ಮಾತು ಉಳಿಸಿಕೊಳ್ಳಿ ಎಂದರು. ಪ್ರಾಮಾಣಿಕ ಸೇವೆ ಮಾಡಿರುವ ನನ್ನನ್ನು ಉಳಿಸಿಕೊಳ್ಳುವುದು ಬಿಡುವುದು ನಿಮ್ಮ ಕೈಯಲ್ಲಿದೆ ಯೋಚಿಸಿ ನಿರ್ದಾರ ತೆಗೆದುಕೊಳ್ಳಿ, ಕ್ಷೇತ್ರವು ಅಭಿವೃದ್ದಿ ಯಲ್ಲಿ 30 ವರ್ಷಗಳಷ್ಟು ಹಿಂದೆ ಬಿದ್ದದ್ದು, ಸರ್ಕಾರಿ ಶಾಲೆಗಳು, ಆಸ್ಪತ್ರೆಗಳಲ್ಲಿ ಉತ್ತಮ ಶಿಕ್ಷಣ ಹಾಗು ಆರೋಗ್ಯ ಸಿಗುವುದಾದರು ಯಾವಾಗ? ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಬಡವರ ಹಾಗು ರೈತರ ಕೆಲಸಗಳು ಸಕಾಲಕ್ಕೆ ಆಗಿವಿಯೇ ಎಂದು ಪ್ರಶ್ನಿಸಿದರು. ಶಾಸಕರಿಗೆ ಇಚ್ಛಾಶಕ್ತಿ ಇಲ್ಲದ ಕಾರಣ ಕ್ಷೇತ್ರವು ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ, ಅಧಿಕಾರ ಇಲ್ಲದಿದ್ದರೂ ನಿಮ್ಮ ಸೇವೆ ಮಾಡುವ ಹಾಗು ಅಭಿವೃದ್ಧಿ ಬೆಂಬಲಿಸುವ ನನಗೆ ಮತ ಕೊಡಿ ಎಂದು ಮಾತನಾಡುತ್ತಾ ಭಾವೋದ್ವೇಗಕ್ಕೆ ಒಳಗಾದರು. ಈ ಸಂದರ್ಭದಲ್ಲಿ ಗ್ರಾ ಪಂ ಸದಸ್ಯ ಬೆಳ್ಳೂಟಿ ಸಂತೋಷ್, ಅಶ್ವಥ್ ನಾರಾಯಣರೆಡ್ಡಿ ಇನ್ನಿತರರು  ಉಪಸ್ಥಿತರಿದ್ದರು.