Browsing: ರಾಷ್ಟ್ರೀಯ

ತಿರುವನಂತಪುರಂ: ಮೂರನೇ ಅವಧಿಗೆ ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶವು ‘ದುಸ್ತರವಾದ ಅಪಾಯ’ಕ್ಕೆ ಸಿಲುಕಲಿದೆ. ಅದರ ಬಳಿಕ ಪಶ್ಚಾತ್ತಾಪ ಪಡುವುದರಲ್ಲಿ ಯಾವ ಅರ್ಥವೂ ಇರುವುದಿಲ್ಲ ಎಂದು ಕೇರಳ ಸಿಎಂ ಪಿಣರಾಯಿ…

ನವದೆಹಲಿ: ಮಿಜೋರಾಂ, ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ ಈ ಐದು ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳ (Assembly Election) ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗವು (ECI)…

ಡೆಹ್ರಾಡೂನ್: ಉತ್ತರಪ್ರದೇಶ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಮೂರು ದಿನಗಳ ಕಾಲ ಉತ್ತರಾಖಂಡ (Uttarakhand) ಪ್ರವಾಸ ಕೈಗೊಂಡಿದ್ದು, ಕೊನೆಯ ದಿನವಾದ ಕೇದಾರನಾಥ…

ಡೆಹ್ರಾಡೂನ್: ಹರಿಯಾಣದಿಂದ (Haryana) ಬರುತ್ತಿದ್ದ ಬಸ್ (Bus) ನೈನಿತಾಲ್ (Nainital) ಜಿಲ್ಲೆಯಲ್ಲಿ ಕಂದಕಕ್ಕೆ ಉರುಳಿದ ಪರಿಣಾಮ ಐವರು ಮಹಿಳೆಯರು, ಒಬ್ಬ ಪುರುಷ ಮತ್ತು ಒಂದು ಮಗು ಸೇರಿದಂತೆ…

ಮುಂಬೈ: ಭಾರತ್ ಜೋಡೋ ಯಾತ್ರೆಯ ಬಳಿಕ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದಿರುವ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್, ಮುಂದೊಂದು ದಿನ ರಾಹುಲ್ ಗಾಂಧಿ ದೇಶವನ್ನು ಮುನ್ನಡೆಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇಂಡಿಯಾ ಟುಡೆ ಕಾಂಕ್ಲೇವ್‌ನಲ್ಲಿ ಮಾತನಾಡಿದ ಶರದ್ ಪವಾರ್, ಸಾಮಾಜಿಕ ಮಾಧ್ಯಮ ಟ್ರೋಲ್‌ಗಳು ಹಾಗೂ ಇತರೆ ಟೀಕಾಕಾರರ ಗುರಿಯಾಗುತ್ತಿದ್ದ ರಾಹುಲ್ ಗಾಂಧಿ ಅವರನ್ನು ಈಗ ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು. “ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಬಳಿಕ ಅವರನ್ನು ಗಂಭೀರವಾಗಿ ನೋಡಲಾಗುತ್ತಿದೆ. ಅವರು ದೇಶಕ್ಕೆ ಮುಂದೆ ಒಂದು ದಿನ ನಾಯಕತ್ವ ಒದಗಿಸಲಿದ್ದಾರೆ” ಎಂದು ಪವಾರ್ ಹೇಳಿದರು. ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಪುನರುಚ್ಚರಿಸಿದ ಶರದ್ ಪವಾರ್, ಅಣ್ಣನ ಮಗ ಅಜಿತ್ ಪವಾರ್ ನೇತೃತ್ವದ ಬಂಡಾಯ ಬಣದ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆಗಳನ್ನು ನಿರಾಕರಿಸಿದರು.…

ಚೆನ್ನೈ: ರಸ್ತೆಗಳಲ್ಲಿ ಬೈಕ್‌ನಲ್ಲಿ ವೀಲಿಂಗ್‌ ಮಾಡುವವರ ಬೈಕ್‌ಗಳನ್ನು (Bike) ಸುಟ್ಟು ಹಾಕಬೇಕು ಎಂದು ಮದ್ರಾಸ್ ಹೈಕೋರ್ಟ್ (Madras High Court) ಖಾರವಾಗಿ ಅಭಿಪ್ರಾಯಪಟ್ಟಿದೆ. ವೀಲಿಂಗ್ ಮಾಡಿ ಬಂಧಿತನಾಗಿರುವ ವ್ಯಕ್ತಿ…

ತಿಗಣೆಗಳು ಒಮ್ಮೆ ನಿಮ್ಮ ಮನೆಗೆ ಎಂಟ್ರಿ ಕೊಟ್ಟರೆ ಅದನ್ನು ಓಡಿಸುವುದು ಬಹು ಕಷ್ಟದ ಕೆಲಸ. ಇನ್ನು, ತಿಗಣೆಗಳು ಒಂದು ಕೋಣೆಯ ಮೂಲೆಯನ್ನು ಪ್ರವೇಶಿಸಿದರೂ ಸಾಕು ಅವುಗಳು ಕ್ರಮೇಣವಾಗಿ…

ನವದೆಹಲಿ: ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ರಾವಣನಂತೆ (Ravan) ಬಿಂಬಿಸಿ, ನವಯುಗದ ರಾವಣ ಎಂದು ಬಿಜೆಪಿ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ.…

ನವದೆಹಲಿ: 2000 ರೂ. ಮುಖಬೆಲೆಯ ನೋಟುಗಳ ಅಮಾನ್ಯೀಕರಣವನ್ನು ಆರ್‌ಬಿಐ (Reserve Bank of India) ಘೋಷಿಸಿದ ನಾಲ್ಕು ತಿಂಗಳ ಬಳಿಕ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಅವಧಿ ಇಂದು ಕೊನೆಯಾಗಿದೆ.…

ಹೈದರಾಬಾದ್ : ತೆಲಂಗಾಣದಲ್ಲಿ (Telangana) ವಿದ್ಯುತ್, ರೈಲು ಸಂಪರ್ಕ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಒತ್ತು ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ (Narendra Modi) ಹಲವಾರು ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದರು. ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಬಿಆರ್‌ಎಸ್ ನಾಯಕ, ತೆಲಂಗಾಣ ಸಿಎಂ ಕೆಸಿ ರಾವ್ (KCR) ಎನ್‌ಡಿಎ ಸೇರಲು ಬಯಸಿದ್ದರು ಆದರೆ ನಾವು ಅವಕಾಶ ನೀಡಲಿಲ್ಲ ಎಂದು ಹೇಳಿದ್ದಾರೆ. ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆದ್ದಾಗ ಕೆಸಿಆರ್‌ಗೆ ಬೆಂಬಲ ಬೇಕಿತ್ತು. ಈ ಚುನಾವಣೆಗೂ ಮುನ್ನ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸುತ್ತಿದ್ದರು, ಆದರೆ ನಂತರ ದಿಢೀರ್ ಅದನ್ನು ನಿಲ್ಲಿಸಿದರು. ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯ ನಂತರ ಕೆಸಿಆರ್ ನನ್ನನ್ನು ಭೇಟಿ ಮಾಡಿದ್ದು ಅವರು ಎನ್‌ಡಿಎ ಸೇರಲು ಬಯಸಿದ್ದಾರೆ ಎಂದು ಹೇಳಿದರು. ಅವರಿಗೆ ಬೆಂಬಲ ನೀಡುವಂತೆ ಅವರು ನನ್ನನ್ನು ಕೇಳಿದರು. ನೀವು ಮಾಡಿದ ಕೆಲಸಗಳಿಂದಾಗಿ ನಿಮಗೆ ಮೋದಿಅವರೊಂದಿಗೆ ಸಂಬಂಧ ಹೊಂದಲು ಸಾಧ್ಯವಿಲ್ಲ ಎಂದು ಹೇಳಿದೆ ಎಂದು ಮೋದಿ ಹೇಳಿದ್ದಾರೆ.