Browsing: ರಾಷ್ಟ್ರೀಯ

ನವದೆಹಲಿ: ಮಾನನಷ್ಟ ಮೊಕದ್ದಮೆಯಲ್ಲಿ (Defamation Case) ಶಿಕ್ಷೆಗೆ ತಡೆಯಾಜ್ಞೆ ಕೋರಿ ಸೂರತ್ ಸೆಷನ್ಸ್ ಕೋರ್ಟ್ ತನ್ನ ಮನವಿಯನ್ನು ತಿರಸ್ಕರಿಸಿದ ದಿನಗಳ ನಂತರ,  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಗುಜರಾತ್ ಹೈಕೋರ್ಟ್‌ಗೆ (Gujarat High Court) ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯದ ಏಪ್ರಿಲ್ 20 ರ ಆದೇಶದ ವಿರುದ್ಧ ರಾಹುಲ್ ಮೇಲ್ಮನವಿ ಸಲ್ಲಿಸಿದ್ದಾರೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ರಾಹುಲ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿತು ಮತ್ತು ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು. ಈ ತೀರ್ಪಿನಿಂದಾಗಿ ಅವರು ಲೋಕಸಭಾ ಸದಸ್ಯತ್ವವನ್ನು ಕಳೆದುಕೊಂಡರು. ಏಪ್ರಿಲ್ 22 ರಂದು ಲೋಕಸಭೆಯ ಸಚಿವಾಲಯದ ನೋಟಿಸ್‌ನ ಮೇರೆಗೆ ತಮ್ಮ ಅಧಿಕೃತ ಬಂಗಲೆಯನ್ನು ಖಾಲಿ ಮಾಡಿದ ರಾಹುಲ್, ತೀರ್ಪಿನ ವಿರುದ್ಧ ಸೂರತ್ ಸೆಷನ್ಸ್ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ ಶಿಕ್ಷೆಗೆ ತಡೆ ಕೋರಿದರು. ಒಂದು ವೇಳೆ ದೋಷಾರೋಪಣೆಗೆ ತಡೆ ನೀಡಿದರೆ, ನ್ಯಾಯಾಲಯದ ಅಂತಿಮ ತೀರ್ಪಿನವರೆಗೆ ಲೋಕಸಭಾ ಸಂಸದರಾಗಿ ಅವರ ಅನರ್ಹತೆಯನ್ನು ಹಿಂಪಡೆಯಲಾಗುತ್ತದೆ. ಈ ಕಾನೂನು ಹೋರಾಟ ನಡೆಸುತ್ತಿರುವ ಕಾಂಗ್ರೆಸ್‌ನ ಹಿರಿಯ ಸಂಸದ ಮತ್ತು ವಕೀಲ ಅಭಿಷೇಕ್ ಸಿಂಘ್ವಿ ಕಾನೂನು ಮೆಟ್ಟಿಲು ಇದೆ. ಕೆಲವರು ಸೂಚಿಸಿದಂತೆ ರಾಹುಲ್ ನೇರವಾಗಿ ಸುಪ್ರೀಂ ಕೋರ್ಟ್‌ಗೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.  ನಾವು ನೇರವಾಗಿ ಸುಪ್ರೀಂಕೋರ್ಟ್‌ಗೆ ಹೋದರೆ ಮತ್ತು ನ್ಯಾಯಾಧೀಶರು ನಮಗೆ ಮೊದಲು ಕೆಳ ನ್ಯಾಯಾಲಯಗಳಿಗೆ ಹೋಗಬೇಕಿತ್ತು ಎಂದು ಹೇಳಿದರೆ, ಇದನ್ನು ಸಲಹೆ ಮಾಡುವವರೇ ಮೊದಲು ನಮ್ಮನ್ನು ಟೀಕಿಸುತ್ತಾರೆ ಎಂದು ಸಿಂಘ್ವಿ ಹೇಳಿದ್ದಾರೆ. ಏಪ್ರಿಲ್ 3 ರಂದು, ರಾಹುಲ್ ಗಾಂಧಿಯವರು ಮ್ಯಾಜಿಸ್ಟ್ರೇಟ್ ತೀರ್ಪಿನ ವಿರುದ್ಧ ಸೆಷನ್ಸ್ ನ್ಯಾಯಾಲಯಕ್ಕೆ ತಮ್ಮ ಮನವಿಯನ್ನು ಸಲ್ಲಿಸಿದ್ದರು. ನಂತರ ಅವರ ಮನವಿ ಇತ್ಯರ್ಥವಾಗುವವರೆಗೆ ಅವರಿಗೆ ಜಾಮೀನು ನೀಡಲಾಯಿತು. ನನ್ನ ಅನರ್ಹತೆಯು ಸರಿಪಡಿಸಲಾಗದ ನಷ್ಟ ಮತ್ತು ಬದಲಾಯಿಸಲಾಗದ ಗಾಯ ಎಂದು ರಾಹುಲ್ ಗಾಂಧಿಯವರು ಸೆಷನ್ಸ್ ನ್ಯಾಯಾಲಯಕ್ಕೆ ತಿಳಿಸಿದರು.

ನವದೆಹಲಿ: ಪಂಜಾಬ್ ​ನ ಮಾಜಿ ಮುಖ್ಯಮಂತ್ರಿ, ಶಿರೋಮಣಿ ಅಕಾಲಿದಳದ (Shiromani Akali Dal) ಸಂಸ್ಥಾಪಕ ಪ್ರಕಾಶ್ ಸಿಂಗ್ ಬಾದಲ್ (Parkash Singh Badal) ಮಂಗಳವಾರ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ಉಸಿರಾಟದ ತೊಂದರೆಯಿಂದ…

ಭೋಪಾಲ್: ಅಣ್ಣ-ತಮ್ಮಂದಿರ, ಅಕ್ಕ-ತಂಗಿಯರ ನಡುವೆ ಹೊಡೆದಾಟ ಆಗಿಂದಾಗೆ ನಡೆಯುತ್ತಲೇ ಇರುತ್ತದೆ. ಕೆಲವೊಮ್ಮೆ ಇದು ಸಣ್ಣಪುಟ್ಟ ಜಗಳದಲ್ಲಿ ನಿಂತು ಹೋದರೆ, ಇನ್ನು ಕೆಲವೊಮ್ಮೆ ದೊಡ್ಡ ಅವಾಂತರಕ್ಕೂ ಕಾರಣವಾಗುತ್ತದೆ. ಇಲ್ಲಾಗಿದ್ದು ಅದೇ.…

ಮುಂಬೈ: ಒಂದೂವರೆ ವರ್ಷದ ಅಂಬೆಗಾಲಿಡುವ ಮಗುವನ್ನು ಕುದಿಯುವ ನೀರಿದ್ದ ಬಕೆಟ್‌ನಲ್ಲಿ ಮುಳುಗಿಸಿ ಕೊಂದ ಆರೋಪಿಯನ್ನು ಪುಣೆ (Pune) ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ವಿಕ್ರಮ್ ಕೋಲೇಕಾರ್ ಎಂದು ಗುರುತಿಸಲಾಗಿದೆ.…

ತಿರುವನಂತಪುರಂ: 8 ವರ್ಷದ ಬಾಲಕಿಯೊಬ್ಬಳು (Girl) ಮೊಬೈಲ್ (Mobile) ಬಳಸುತ್ತಿದ್ದ ಸಂದರ್ಭ ಅದು ಸ್ಫೋಟಗೊಂಡು (Explode) ಆಕೆ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಕೇರಳದಲ್ಲಿ (Kerala) ಸೋಮವಾರ ತಡರಾತ್ರಿ ನಡೆದಿದೆ.…

ತಿರುವನಂತಪುರಂ: ಕೇರಳದಲ್ಲಿ (Kerala)ಎರಡು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi), ಕೇಂದ್ರ ಸರ್ಕಾರ ಕೇಂದ್ರವು ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಒತ್ತು ನೀಡುತ್ತದೆ ಎಂದಿದ್ದಾರೆ. ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ವಿವಿಧ…

ನವದೆಹಲಿ: ಕರ್ನಾಟಕದಲ್ಲಿ ಮುಸ್ಲಿಮರ ಮೀಸಲಾತಿ (Karnataka Muslim Reservation) ರದ್ದುಗೊಳಿಸಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ (Supreme Court) ತಡೆಯಾಜ್ಞೆ ನೀಡಿದೆ. ಮೇ 9 ರವರೆಗೆ ಈ ಆದೇಶವನ್ನು ಜಾರಿಗೊಳಿಸದಂತೆ ಕರ್ನಾಟಕ…

ಪಾಟ್ನಾ: ಬಿಜೆಪಿ (BJP) ವಿರುದ್ಧ ಹೋರಾಡಲು ವಿರೋಧ ಪಕ್ಷಗಳು ಒಂದಾಗುವ ಅಗತ್ಯವಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ…

ಭೋಪಾಲ್: ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ (Kuno National Park) ಹೃದಯ-ಶ್ವಾಸಕೋಶ ವೈಫಲ್ಯದಿಂದ (Cardio Pulmonary Failure) 2ನೇ ಚೀತಾ ಸಾವನ್ನಪ್ಪಿದೆ ಎಂದು ವೈದ್ಯರು ಸ್ಪಷ್ಟನೆ ನೀಡಿದ್ದಾರೆ. ಕಳೆದ ಫೆಬ್ರವರಿಯಲ್ಲಿ…

ನವದೆಹಲಿ: ದೇಶದಲ್ಲಿ ಇಂದು ಕೊರೊನಾ ಸೋಂಕಿತರ (coronavirus) ಸಂಖ್ಯೆ ಪತ್ತೆ ಸಂಖ್ಯೆ ಕೊಂಚ ಕುಸಿತ ಕಂಡಿದೆ. ಕಳೆದ 24 ಗಂಟೆಯಲ್ಲಿ 6,660 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ…