ನಮ್ಮ ರೈತರಿಗೆ ನೀರಿಲ್ಲ ತಮಿಳನಾಡಿಗೆ ಎಲ್ಲಿಂದ ಬಿಡೋದು ಎಂದು ನಟಿ ರಾಗಿಣಿ ದ್ವಿವೇದಿ ಪ್ರಶ್ನಿಸಿದ್ದಾರೆ. ಮೊದಲ ನಮ್ಮ ರೈತರಿಗೆ ನೀರು ಬೇಕು. ರೈತರಿದ್ದರೆ ಬೆಳೆ, ಬೆಳೆ ಇದ್ದರೆ ನಾವು. ರೈತರು ಸಂಕಷ್ಟದಲ್ಲಿರುವಾಗ ಇಂಥ ಸಮಯದಲ್ಲಿ ತಮಿಳನಾಡಿಗೆ ನೀರು ಬಿಡುವುದು ಸರಿಯಲ್ಲ. ರೈತರ ಪರವಾಗಿ ನಾವು ಹೋರಾಟಕ್ಕೆ ಸದಾ ಸಿದ್ಧ ಎಂದಿದ್ದಾರೆ.
ನಮ್ಮ ರೈತರು ನೀರಿಲ್ಲದೆ ಸಂಕಷ್ಟದಲ್ಲಿದ್ದಾರೆ. ಇಂಥ ಸಮಯದಲ್ಲಿ ನಾವು ನೋಡಿಕೊಂಡು ಸುಮ್ಮನೆ ಕೂರಬೇಕಾ? ನಾವು ರೈತರ ಹೋರಾಟದಲ್ಲಿ ಭಾಗಿಯಾಗುತ್ತೇವೆ. ಕರ್ನಾಟಕ ನಮ್ಮ ಮನೆ, ನಮ್ಮ ರೈತರ ಹಿತ ಮುಖ್ಯ. ಕನ್ನಡ ಚಿತ್ರರಂಗ ಯಾವಾಗಲೂ ರೈತರ ಬೆಂಬಲಕ್ಕಿರುತ್ತದೆ ಎಂದಿರುವ ಅವರು, ಶುಕ್ರವಾರ ನಡೆಯಲಿರುವ ಬಂದ್ಗೆ ನಾನು ಖುದ್ದು ಹೋಗಿ ಬೆಂಬಲ ಕೊಡುತ್ತೇನೆ. ರೈತರೊಂದಿಗೆ ಹೋರಾಟಕ್ಕಿಳಿಯುತ್ತೇನೆ ಎಂದರು.