ಬೆಂಗಳೂರು ನಗರದ ಅನೇಕ ಪ್ರದೇಶಗಳಿಗೆ ಶನಿವಾರ ಕಾವೇರಿ ನೀರು ಪೂರೈಕೆ ಸ್ಥಗಿತವಾಗಲಿದೆ. ಹೀಗಾಗಿ ಆಯಾ ಪ್ರದೇಶಗಳ ಜನರು ಈಗಲೇ ನೀರು ಸಂಗ್ರಹಿಸಿ ಇಟ್ಟುಕೊಳ್ಳುವುದು ಒಳಿತು. ಯಾವೆಲ್ಲ ಪ್ರದೇಶಗಳಿಗೆ ಕಾವೇರಿ ನೀರು ಪೂರೈಕೆ ಇರುವುದಿಲ್ಲ? ಕಾರಣವೇನು ಎಂಬುದನ್ನು ಬೆಂಗಳೂರು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಕಾವೇರಿ 5ನೇ ಹಂತದ ಯೋಜನೆಯ ಕಾಮಗಾರಿ ಭರದಿಂದ ಸಾಗುತ್ತಿದ್ದು, ಆದಷ್ಟು ಬೇಗ ಬೆಂಗಳೂರಿನ ಮತ್ತಷ್ಟು ಪ್ರದೇಶಗಳಿಗೆ ನೀರು ಪೂರೈಕೆ ಮಾಡಬೇಕೆಂಬ ತರಾತುರಿಯಲ್ಲಿ ಜಲಮಂಡಳಿ ಇದೆ. ಈ ಮಧ್ಯೆ, 5ನೇ ಹಂತದ ಯೋಜನೆಯ ಕೊಳವೆಯನ್ನು ಹೆಗ್ಗನಹಳ್ಳಿಯ ನೆಲಮಟ್ಟದ ಸಂಗ್ರಹಗಾರಕ್ಕೆ ಜೋಡಿಸುವ ಕಾಮಗಾರಿ ಕೈಗೊಂಡಿರುವ ಕಾರಣ ಸೆಪ್ಟೆಂಬರ್ 21ರಂದು ಬೆಂಗಳೂರಿನ ಬಹುತೇಕ ಪ್ರದೇಶಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಸುಬ್ರಹ್ಮಣ್ಯನಗರ, ಗಾಯತ್ರಿನಗರ, ಪ್ರಕಾಶನಗರ, ನಂದಿನಿ ಲೇಔಟ್, ಗೊರಗುಂಟೆಗುಂಟೆ ಪಾಳ್ಯ, ಕೃಷ್ಣಾನಂದನಗರ, ಶಂಕರ ನಗರ, ಕಂಠೀರವನಗರ, ಮಹಾಲಕ್ಷ್ಮಿ ಲೇಔಟ್, ಸರಸ್ವತಿನಗರ, ಗಣೇಶ ಬ್ಲಾಕ್, ರಾಜಾಜಿನಗರದ ಎಲ್ಲಾ ಪ್ರದೇಶಗಳು, ರಾಜಗೋಪಾಲನಗರ, ಜಿಕೆಡಬ್ಲ್ಯೂ ಲೇಔಟ್, ಲಕ್ಷ್ಮಿ ದೇವಿನಗರ, ಚಾಮುಂಡಿ ಪುರ, ಪಾರ್ವತಿನಗರ, ಪೀಣ್ಯ ಕೈಗಾರಿಕಾ ಪ್ರದೇಶ, ಚೊಕ್ಕಸಂದ್ರ, ಎಚ್ ಎಂಟಿ ಲೇಔಟ್, ಗೃಹಲಕ್ಷ್ಮಿ ಲೇಔಟ್, ಪೀಣ್ಯ ಮೊದಲನೇ ಹಂತ, ಪೀಣ್ಯ ವಿಲೇಜ್, ಲೇಔಟ್, ಬಾಗಲಗುಂಟೆ, ಮಲ್ಲಸಂದ್ರ, ದಾಸರಹಳ್ಳಿ, ರಾಮಯ್ಯ ಲೇಔಟ್, ಪ್ರಶಾಂತನಗರ, ಕಮ್ಮಗೊಂಡನ ಹಳ್ಳಿ ಭುವನೇಶ್ವರಿನಗರ, ಹೆಗ್ಗನಹಳ್ಳಿ, ಹೇರೋಹಳ್ಳಿ, ಸುಂಕದಕಟ್ಟೆ, ಪೈಪ್ಪೈನ್ ರಸ್ತೆ,
ಶ್ರೀನಿವಾಸನಗರ, ಹೋಯಳನಗರ, ಸಂಜೀವಿನಿನಗರ, ಲಕ್ಷ್ಮಣನಗರ, ಶ್ರೀ ಗಂಧನಗರ, ಮಯೂರನಗರ, ಶಿವಾನಂದ ನಗರ, ಫ್ರೆಂಡ್ಸ್ ಸರ್ಕಲ್, ಎಜಿಪಿ ಲೇಔಟ್, ಚಿಕ್ಕಸಂದ್ರ, ಕಿರ್ಲೋಸ್ಕರ್ ಲೇಔಟ್, ಸೌಂದರ್ಯ ಲೇಔಟ್, ಸಿದ್ದೇಶ್ವರ ಲೇಔಟ್, ಕೆ.ಪಿ.ಅಗ್ರಹಾರ. ಚೆನ್ನಪ್ಪ ಗಾರ್ಡನ್, ಗಾಣಪ್ಪ ಲೇಔಟ್, ಮಂಜುನಾಥನಗರ, ಚೌಡರಪಾಳ, ವಿದ್ಯಾರಣ್ಯನಗರ ಮಾರೇನಹಳ್ಳಿ 20ನೇ ಮೇನ್, ಕೆಎಚ್ಬಿ ಕ್ವಾರ್ಟರ್ಸ್, ಹೌಸಿಂಗ್ ಬೋರ್ಡ್ ಕಾರ್ಪೋರೇಷನ್ ಕಾಲೋನಿ, ತಿಮ್ಮನಹಳ್ಳಿ, ಎಂ.ಸಿ.ಲೇಔಟ್, ಮೂಡಲಪಾಳ್ಯ, ನಾಗಾಪುರ, ಅಗ್ರಹಾರ ದಾಸರಹಳ್ಳಿ ರಾಜಾಜಿನಗರ 6ನೇ ಬ್ಲಾಕ್, ವೆಸ್ಟ್ ಆಫ್ ಕಾರ್ಡ್ ರೋಡ್, ಇಂದಿರ ನಗರ ಕೊಳಗೇರಿ, ಕೆಎಚ್ ಬಿ ಕಾಲೋನಿ, ಮಹಾಗಣಪತಿನಗರ, ಶಿವನಹಳ್ಳಿ ಪ್ರದೇಶಗಳಲ್ಲಿ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ.