ಬೆಂಗಳೂರು;- ಉದ್ಯಮಿಯಿಂದ ಕೋಟಿ ಕೋಟಿ ಪಡೆದು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ಸಲ್ಲಿಕೆಗೆ ಸಿಸಿಬಿ ಸಿದ್ದತೆ ನಡೆದಿದೆ
ಪ್ರಕರಣದ ತನಿಖೆ ಪೂರ್ಣಗೊಳಿಸಿದೆ. ಎಂಎಲ್ಎ ಟಿಕೆಟ್ ಡೀಲ್ ಸಂಬಂಧ ಸಿಸಿಬಿ ಪೊಲೀಸರು 68 ಸಾಕ್ಷ್ಯಗಳನ್ನ ಕಲೆ ಹಾಕಿದ್ದಾರೆ. ತನಿಖೆ ಪೂರ್ಣಗೊಳಿಸಿ ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ದತೆ ನಡೆಸಿದ್ದು, ಚೈತ್ರಾ ಆಂಡ್ ಗ್ಯಾಂಗ್ ವಿರುದ್ಧ ದೋಷಾರೋಪಣೆ ಪಟ್ಟಿ ಸಿದ್ದ ಮಾಡಿದೆ. ಮುಂದಿನ ವಾರ ಸಿಸಿಬಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಿದೆ
ಎಂಎಲ್ಎ ಡೀಲ್ ಬಗ್ಗೆ ಸಿಸಿಬಿ ಪೊಲೀಸರು 68 ಸಾಕ್ಷಿಗಳ ಹೇಳಿಕೆ ಪಡೆದಿದ್ದು, ಎಲ್ಲಾ ಸಾಕ್ಷಿಗಳ ಹೇಳಿಕೆ ಪಡೆದು ಚಾರ್ಜ್ ಶೀಟ್ ಗೆ ಸಿದ್ದತೆ ನಡೆಸಿದೆ. ಚೈತ್ರಾ ವಂಚನೆ ಪ್ರಕರಣದಲ್ಲಿ ಸಿಸಿಬಿ ಅಧಿಕಾರಿಗಳು 4 ಕೋಟಿ 11 ಲಕ್ಷ ರಿಕವರಿ ಮಾಡಿದ್ದು, ವಂಚನೆ ಪ್ರಕರಣದಲ್ಲಿ ದೊಡ್ಡಮಟ್ಟದ ರಿಕವರಿ ಆಗಿದ್ದರಿಂದ ಚೈತ್ರಾ ಗ್ಯಾಂಗ್ ಗೆ ಸಂಕಷ್ಟ ಎದುರಾಗಿದೆ. ಪ್ರಕರಣದಲ್ಲಿ 7 ಮಂದಿ ವಿರುದ್ದ ಸಿಸಿಬಿ ಚಾರ್ಜ್ ಶೀಟ್ ಸಿದ್ದಪಡಿಸಿದೆ. ಪ್ರಮುಖ ಆರೋಪಿ ಚೈತ್ರಾ, ಶ್ರೀಕಾಂತ್, ಗಗನ್ ಕಡೂರ್, ಹಾಲಶ್ರೀ, ಧನರಾಜ್ ಸೇರಿದಂತೆ 7 ಮಂದಿ ವಿರುದ್ಧ ಚಾರ್ಜ್ ಶೀಟ್ ಗೆ ತಯಾರಿ ನಡೆದಿದೆ.
ಸಿಸಿಬಿ ಪೊಲೀಸರು ದೂರುದಾರ ಗೋವಿಂದ ಬಾಬು ಪೂಜಾರಿ ಬಳಿ ಎಲ್ಲಾ ಆಡಿಯೋ, ವಿಡಿಯೋ ಪಡೆದಿದ್ದು, ಆಡಿಯೋ, ವಿಡಿಯೋಗಳ ಬಗ್ಗೆ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ. ಗೋವಿಂದ ಪೂಜಾರಿ ಬಳಿಯೇ ಡೀಲ್ ಸಂಬಂಧ ಸಿಸಿಬಿ 10 ವಿಡಿಯೋ ಪಡೆದಿದೆ. ಆರೋಪಿಗಳ ಮೊಬೈಲ್ ಗಳ ಡೇಟಾ ರಿಟ್ರೀವ್ ವರದಿ ಕೂಡ ಉಲ್ಲೇಖಿಸಲಾಗಿದೆ