ಗಡಿ ಜಿಲ್ಲೆ ಚಾಮರಾಜನಗರದ ಪ್ರಸಿದ್ದ ಯಾತ್ರಾ ಸ್ಥಳ ಪವಾಡ ಮಲೈಮಹದೇಶ್ವರಬೆಟ್ಟದಲ್ಲಿ ಐದು ದಿನಗಳ ಕಾಲ ನಡೆಯುತ್ತಿರುವ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ನಾಡಿನ ನಾನಾ ಭಾಗಗಳಿಂದ ಮಾದಪ್ಪನ ಭಕ್ತರು ಸಾಗರೋಪಾದಿಯಲ್ಲಿ ಹರಿದುಬಂದರು.
ವಿವಿಧ ಹರಕೆಗಳನ್ನು ಹೊತ್ತ. ಭಕ್ತರು ಉಘೇಉಘೇ ಮಾದಪ್ಪ ಎಂದು ಝೇಂಕರಿಸುತ್ತಾ ಮಾದಪ್ಪನ ಸನ್ನಿದಿಯಲ್ಲಿ ಭಕ್ತಿ ಪರಾಕಾಷ್ಟಯಲ್ಲಿ ಮಿಂದೆದ್ದರು.
ದೀಪಾವಳಿ ಜಾತ್ರೆಯ ಪ್ರಯುಕ್ತ ಹಾಲರವೆ ಉತ್ಸವವು ಬಹಳ ವಿಜೃಂಬಣೆಯಿಂದ ಜರುಗಿತು. ನೂರ ಒಂದು ಬಾಲಕಿಯರು ಉಪವಾಸವಿದ್ದು ಮಾದಪ್ಪನ ಬೆಡ್ಟದ 7 ಕಿಲೊಮೀಟರ್ ದೂರದಿಂದ ಹಳ್ಳಕ್ಕೆ ತೆರಳಿ ಮಡಿ ಮಾಡಿ ಹಾಲು ಹಳ್ಳ ಗಂಗೆಯನ್ನು ಹೊತ್ತು ಕಾಲ್ನಡಿಯೆಲ್ಲಿ ಸಾಗಿ ಪವಾಡ ಪುರುಷನ ಸನ್ನಿದಿಗೆ ಆಗಮಿಸಿ ವಿಶೇಷ ಪೂಜೆಯಲ್ಲಿ ತೊಡಗಿದರು. ನಂತರ ಮಾದಪ್ಪನ ಚಿನ್ನದ ತೇರು ಉತ್ಚವವು ಕಣ್ಮನ ಸೆಳೆಯಿತು.