ಗದಗ: ಕೇಂದ್ರ– ರಾಜ್ಯ ಸರ್ಕಾರಗಳ ಅಕ್ಕಿ ಜಟಾಪಟಿ ವಿಚಾರವಾಗಿ ಮಾತನಾಡಿದ ಸಚಿವ ಹೆಚ್ಕೆ ಪಾಟೀಲ್(HK Patil), ಇದು ಜನ ದ್ರೋಹ ನಿಲುವು ಎಂದರು. ಬಡವರಿಗೆ ಅಕ್ಕಿ ವಿತರಣೆ ಮಾಡುವವರಿಗೆ ಕೊಡಲ್ಲ ಅಂತಾರೆ. ಈ ರೀತಿ ರಾಜ್ಯ ಸರ್ಕಾರಗಳಿಗೆ ತಾರತಮ್ಯ ಮಾಡುವಂತಿಲ್ಲ. ಕೇಂದ್ರ ಸರ್ಕಾರ ಈ ಜನ ದ್ರೋಹಿ ನಿಲುವು ಬದಲಿಸಿಕೊಳ್ಳಬೇಕು.
ಇಲ್ಲವೆಂದರೆ ಜನರು ಆಕ್ರೋಶಕ್ಕೆ ಕಾರಣವಾಗುತ್ತೀರಿ. ರಾಜ್ಯ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಕೇಂದ್ರ ಮಾಡುತ್ತಿದೆ. ಈ ಇಕ್ಕಟ್ಟಿನಿಂದ ಹೇಗೆ ಜನರ ಆಶೀರ್ವಾದದಿಂದ ಪಾರಾಗಬೇಕು ಅಂತ ನಮಗೆ ಗೋತ್ತು. ಯೋಜನೆ ಜಾರಿ ಮಾಡೇ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ಅಕ್ಕಿ ಪಡೆಯಲು ಎಲ್ಲ ಪ್ರಯತ್ನ ನಡೆಸಿದ್ದಾರೆ. ಅಧಿಕಾರಿಗಳು ಕೂಡ ಕೆಲಸ ಮಾಡುತ್ತಿದ್ದಾರೆ ಎಂದರು.