ನೊಯ್ಡಾ:- ಕೇಂದ್ರದ ಪಡಿತರ ಹಂಚಿಕೆ ಮುಂದಿನ 5 ವರ್ಷಗಳವರೆಗೆ ಮುಂದುವರಿಯುತ್ತೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಮುಂದುವರಿಯಲಿದೆ. ಪ್ರತಿ ಮನೆಗೆ 5 ಕೆಜಿ ಧಾನ್ಯವನ್ನು ಉಚಿತವಾಗಿ ನೀಡಲಾಗುತ್ತದೆ. ಇದರಿಂದ ದೇಶಾದ್ಯಂತ 80 ಕೋಟಿ ಜನರಿಗೆ ಪ್ರಯೋಜನವಾಗಲಿದೆ ಎಂದು ಎಂದು ಅವರು ತಿಳಿಸಿದ್ದಾರೆ.
ನಾವು 80 ಕೋಟಿ ಜನರಿಗೆ ಪ್ರತಿ ತಿಂಗಳು 5 ಕೆಜಿಗಳಷ್ಟು ಧಾನ್ಯವನ್ನು ನೀಡುತ್ತೇವೆ. ನರೇಂದ್ರ ಮೋದಿ ಅವರು ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಹಿಂದಿನ ಸರ್ಕಾರವು ‘ಗರೀಬಿ ಹಟಾವೋ’ ಮತ್ತು ‘ರೋಟಿ ಕಪ್ಡಾ ಮಕಾನ್’ ಎಂಬ ಘೋಷಣೆಗಳನ್ನು ಹೊಂದಿತ್ತು. ಆದರೆ ಈ ದೇಶದಲ್ಲಿ ಈಗಲೂ ಪ್ರತಿಯೊಬ್ಬ ವ್ಯಕ್ತಿಯು 5 ಕೆಜಿಗಳಷ್ಟು ಧಾನ್ಯವನ್ನು ಪಡೆಯುತ್ತಿದ್ದಾನೆ. ಮೋದಿ ಸರ್ಕಾರ ಕೈಗೊಂಡ ಐತಿಹಾಸಿಕ ನಿರ್ಧಾರದಿಂದಾಗಿ ದೇಶಾದ್ಯಂತ 13.5 ಕೋಟಿ ಜನರು ಬಡತನದಿಂದ ಹೊರಬರಲು ಸಾಧ್ಯವಾಗಿದೆ” ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.