ಬೆಂಗಳೂರು: ನಿರೂಪಕಿ, ಬಿಗ್ ಬಾಸ್ ಕನ್ನಡ 7 ಕಾರ್ಯಕ್ರಮದ ಸ್ಪರ್ಧಿ ಚೈತ್ರಾ ವಾಸುದೇವನ್. ಇತ್ತೀಚೆಗಷ್ಟೇ ಚೈತ್ರಾ ವಾಸುದೇವನ್ ತಮ್ಮ ಜೀವನದ ಮಹತ್ವದ ನಿರ್ಧಾರವೊಂದನ್ನ ಬಹಿರಂಗ ಪಡಿಸಿದ್ದರು. ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿರುವುದಾಗಿ ಚೈತ್ರಾ ವಾಸುದೇವನ್ ತಿಳಿಸಿದ್ದರು.
ಇದೇ ವಿಚಾರವಾಗಿ ಖಾಸಗಿ ಮಾಧ್ಯಮದಲ್ಲಿ ಮಾತನಾಡುವಾಗ ಿದರ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಹೊರಹಾಕಿದರು. ಏನಾಪ್ಪಾ ಅಂದರೆ ’ಹೆಚ್ಚಿನ ಜನರು ಯೋಚಿಸುವಂತೆ ನಾನು ಮತ್ತು ನನ್ನ ಪತಿ ಅಹಂಕಾರದ ಸಮಸ್ಯೆಗಳಿಂದ ಬೇರೆಯಾಗಲಿಲ್ಲ. ಸತ್ಯ ಮತ್ತು ನಾನು 2017ರಲ್ಲಿ ವಿವಾಹವಾದೆವು. ಅನ್ಯೋನ್ಯವಾಗಿ ಬಾಳಲು ಸುಮಾರು 5 ವರ್ಷಗಳ ಕಾಲ ತುಂಬಾ ಪ್ರಯತ್ನಪಟ್ವಿ. ಆದರೆ ಅದು ಸಾಧ್ಯವಾಗಲಿಲ್ಲ. ಹೀಗಾಗಿ ನಾವು ಬೇರೆ ಬೇರೆಯಾಗಲು ನಿರ್ಧಾರ ಮಾಡಿದ್ವಿ. ಕೆಲವು ತಿಂಗಳ ಹಿಂದೆ ನಾವು ವಿಚ್ಛೇದನ ಪಡೆದ್ವಿ’’ ಎಂದು ಚೈತ್ರಾ ವಾಸುದೇವನ್ ಹೇಳಿದ್ದಾರೆ.
2017ರಲ್ಲಿ ಸತ್ಯ ನಾಯ್ಡು ಎಂಬುವರನ್ನ ಚೈತ್ರಾ ವಾಸುದೇವನ್ ಮದುವೆಯಾಗಿದ್ದರು. ಈಗ ಪತಿಯಿಂದ ದೂರಾಗಿರುವುದಾಗಿ, ವಿಚ್ಛೇದನ ಪಡೆದಿರುವುದಾಗಿ ಚೈತ್ರಾ ವಾಸುದೇವನ್ ತಿಳಿಸಿದ್ದಾರೆ.