ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜೈಲೂಟ ಇಡಿಸದೇ ದಿನೇ ದಿನೇ ತೂಕ ಕಳೆದುಕೊಳ್ಳುತ್ತಿದ್ದಾರೆ. ಹೀಗೊಂದು ವಿಚಾರ ಸೊಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಜೂನ್ 25ರ ರಾತ್ರಿ ದರ್ಶನ್ ಬೇಗನೇ ಮಲಗಿದ್ದಾರೆ. ಇಂದು (ಜೂನ್ 26) ಬೆಳಿಗ್ಗೆ 5.30ರ ಸುಮಾರಿಗೆ ಎದ್ದಿದ್ದಾರೆ. ಜೈಲಿನ ಸಿಬ್ಬಂದಿ ಬಳಿ ಬಿಸಿ ನೀರನ್ನು ಕೇಳಿ ದರ್ಶನ್ ಪಡೆದಿದ್ದಾರೆ. ಬಳಿಕ ಕೆಲ ಹೊತ್ತು ಬ್ಯಾರಾಕ್ನಲ್ಲಿಯೇ ನಟ ದರ್ಶನ್ ವಾಕಿಂಗ್ ಮಾಡಿದ್ದಾರೆ. ಜೂನ್ 25ರಂದು ದರ್ಶನ್ ಅವರು ಪತ್ನಿ, ಮಗನ ಭೇಟಿ ಮಾಡಿದ್ದಾರೆ. ಆ ಬಳಿಕ ದರ್ಶನ್ ಸ್ವಲ್ಪ ರಿಲ್ಯಾಕ್ಸ್ ಮೂಡ್ನಲ್ಲಿ ಇದ್ದಾರೆ.
ದರ್ಶನ್ಗೆ ಜೈಲೂಟ ಒಗ್ಗುತ್ತಿಲ್ಲ. ಆದಾಗ್ಯೂ ಅನಿವಾರ್ಯವಾಗಿ ಇದನ್ನು ಸೇವಿಸಬೇಕಾದ ಸ್ಥಿತಿ ಬಂದೊದಗಿದೆ