ಜಿಲ್ಲೆಯ ಹನೂರು ತಾಲೂಕಿನ ಆಂಡಿಪಾಳ್ಯ ಗ್ರಾಮದಲ್ಲಿ ಚಿರತೆ ದಾಳಿಯಿಂದ ಮೇಕೆ ಸಾವನ್ನಪ್ಪಿದ ಘಟನೆ ಜರುಗಿದೆ.
ಹನೂರು ತಾಲ್ಲೂಕಿನ ಲೊಕ್ಕನಹಳ್ಳಿ ಸಮೀಪದ ಅಂಡಿಪಾಳ್ಯಗ್ರಾಮದ ಮಲ್ಲೆಶ್ ಎಂಬುವವರು ತಮ್ಮ ಜಮೀನಿನಲ್ಲಿ ಮೇಕೆ, ಕಟ್ಟಿದ್ದರು. ಚಿರತೆ ಶನಿವಾರ ರಾತ್ರಿ ವೇಳೆ ಧಾಳಿನೆಡೆಸಿ ಕೊಂದು ತಿಂದು ಹಾಕಿದೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರೈತ ಮಲ್ಲೇಶ್ ಮಾತನಾಡಿ, ಕಳೆದ ದಿನಗಳಿಂದ ನಿರಂತರವಾಗಿ ಚಿರತೆಗಳು ದಾಳಿ ಮಾಡಿ ರೈತರ ಸಾಕು ಪ್ರಾಣಿಗಳನ್ನು ಬಲಿ ಪಡೆಯುತ್ತಿವೆ. ಇದ್ದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದ್ದು, ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಸೆರೆ ಹಿಡಿಯಲು ಕಾರ್ಯವನ್ನು ಚುರುಕುಗೊಳಿಸಬೇಕು ಅಲ್ಲದೇ ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.