ಟಿ20 ವಿಶ್ವಕಪ್ ಕ್ರಿಕೆಟ್ (T20 World Cup) ಚಾಂಪಿಯನ್ ಟೀಂ ಇಂಡಿಯಾ (Team India) ಇಂದು ಬೆಳಗ್ಗೆ ತಾಯ್ನಾಡಿಗೆ ಆಗಮಿಸಿದೆ. ವೆಸ್ಟ್ಇಂಡೀಸ್ನ ಬಾರ್ಬಡೋಸ್ನಿಂದ ಹೊರಟಿದ್ದ ವಿಶೇಷ ವಿಮಾನ ದೆಹಲಿಯಲ್ಲಿರುವ (Delhi) ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.
ಜೂ. 1ರಂದು ಬಾರ್ಬಡೋಸ್ಗೆ ಭೀಕರ ಬೆರಿಲ್ ಚಂಡಮಾರುತ ಅಪ್ಪಳಿಸಿದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಭಾರತಕ್ಕೆ ಬರಲು ಆಗಿರಲಿಲ್ಲ. ಈಗ ವಿಶೇಷ ವಿಮಾನದ ಮೂಲಕ T20 ವಿಶ್ವಕಪ್ ಟ್ರೋಫಿಯೊಂದಿಗೆ ಆಟಗಾರರೆಲ್ಲ ಆಗಮಿಸಿದರು.
ಪದಕ ಧರಿಸಿ ಇಳಿದ ಆಟಗಾರರಿಗೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಸದ್ಯ ಆಟಗಾರರು ದೆಹಲಿಯಲ್ಲಿರುವ ಐಟಿಸಿ ಮೌರ್ಯ ಹೋಟೆಲಿನಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಳಿಕ ಬೆಳಗ್ಗೆ 10 ಗಂಟೆಯ ವೇಳೆ ಪ್ರಧಾನಿ ಮೋದಿ (PM Narendra Modi) ಅವರ ನಿವಾಸಕ್ಕೆ ತೆರಳಲಿದ್ದಾರೆ.
ಮೋದಿ ಭೇಟಿಯ ಬಳಿಕ ವಿಶೇಷ ವಿಮಾನದಲ್ಲಿ ಮುಂಬೈಗೆ ಆಟಗಾರರು ಆಗಮಿಸಲಿದ್ದಾರೆ. ಸಂಜೆ 4 ಗಂಟೆಗೆ ಮುಂಬೈ ಮರೀನ್ ಡ್ರೈವ್ನಿಂದ ತೆರೆದ ವಾಹನದಲ್ಲಿ ವಾಂಖೆಡೆ ಸ್ಟೇಡಿಯಂವರೆಗೆ 2 ಕಿ.ಮೀ ರೋಡ್ ಶೋ (Road Show) ನಡೆಯಲಿದೆ.
ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಾಯಕ ರೋಹಿತ್ ಶರ್ಮಾ (Rohit Sharma) ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah) ಅವರಿಗೆ ಟಿ 20 ವಿಶ್ವಕಪ್ ಟ್ರೋಫಿಯನ್ನು ಹಸ್ತಾಂತರಿಸಲಿದ್ದಾರೆ.