ನವದೆಹಲಿ: ಬಹುನಿರೀಕ್ಷಿತ ಚಂದ್ರಯಾನ-3 ನೌಕೆಯ ವಿಕ್ರಮ್ ಲ್ಯಾಂಡರ್ ಚಂದ್ರನಲ್ಲಿ ಇಳಿಯಲು ಕ್ಷಣಗಣನೆ ಶುರುವಾಗಿದೆ. ಇಸ್ರೊದ ಚಂದ್ರಯಾನ-3 ನೌಕೆಯು ಆಗಸ್ಟ್ 23ರ ಸಂಜೆ 6.4ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿಇಳಿಯುವುದಕ್ಕೆ ಸನ್ನದ್ಧವಾಗಿದೆ. ನಾಳೆಯ ಈ ವಿದ್ಯಾಮಾನ ವೀಕ್ಷಿಸಲು ಇಸ್ರೋ ಲೈವ್ ವ್ಯವಸ್ಥೆ ಂಆಡಿದೆ. ‘ಚಂದ್ರಯಾನ -3 ರ ವಿಕ್ರಮ್ ಲ್ಯಾಂಡರ್ ಒಳಗೆ ಸಾಲ್ವೇಜ್ ಮೋಡ್ ಅನ್ನು ಹೊಂದಿದೆ.
ಇದು ಎಂತಹ ಪ್ರತಿಕೂಲ ವಾತಾವರಣ ಇದ್ದರೂ, ಪ್ರತಿಯೊಂದು ತಪ್ಪಾದರೂ ಕೂಡಾ ಇಳಿಯಲು ಸಹಾಯ ಮಾಡುತ್ತದೆ ಎಂದು ಏರೋಸ್ಪೇಸ್ ವಿಜ್ಞಾನಿಯೊಬ್ಬರು ವಿವರಿಸಿದರು. ಚಂದ್ರಯಾನ -2 ರ ವೈಫಲ್ಯದ ನಂತರ ಸಾಕಷ್ಟು ಸುಧಾರಣೆಗಳನ್ನು ಮಾಡಲಾಗಿದೆ. ಹಾಗಾಗಿ ಸುರಕ್ಷಿತವಾಗಿ ಇಳಿಯುವುದರಲ್ಲಿ ಸಂಶಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು