ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕ್ ಆಗಿರುವ ಎಚ್ಡಿಎಫ್ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ಗೆ ಸಂಬಂಧಿಸಿದಂತೆ ಶುಲ್ಕಗಳು ಮತ್ತು ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಈ ಎಲ್ಲಾ ಹೊಸ ಶುಲ್ಕ ಮತ್ತು ನಿಯಮಗಳು ಇದೇ ಆಗಸ್ಟ್ 1ರಿಂದ ಜಾರಿಗೆ ಬರಲಿವೆ.
ಎಚ್ಡಿಎಫ್ಸಿ ಬ್ಯಾಂಕ್ನ ಕ್ರೆಡಿಟ್ ಕಾರ್ಡ್ ಮೂಲಕ ನೀವು ಬಾಡಿಗೆ ಹಣವನ್ನು ಪಾವತಿ ಮಾಡುತ್ತಿದ್ದರೆ, ಇನ್ನು ಮುಂದೆ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ.
ಕ್ರೆಡ್, ಪೇಟಿಎಂ, ಚೆಕ್, ಮೊಬಿಕ್ವಿಕ್, ಫ್ರೀಚಾರ್ಜ್ ಮತ್ತು ಇತರೆ ಸೇವೆಗಳ ಮೂಲಕ ಪಾವತಿಸುವ ವಹಿವಾಟಿನ ಮೊತ್ತದ ಮೇಲೆ ಶೇ. 1ರಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ. ಪ್ರತಿ ವಹಿವಾಟಿಗೆ ಗರಿಷ್ಠ 3000 ರೂ. ಶುಲ್ಕ ವಿಧಿಸಲಾಗುತ್ತದೆ.
ಇಂಧನದ ಮೇಲೆ ಪ್ರತಿ ವಹಿವಾಟಿಗೆ 15,000 ರೂ.ಗಿಂತ ಕಡಿಮೆ ಖರ್ಚು ಮಾಡಿದರೆ, ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ. ಆದರೆ, ಒಂದೊಮ್ಮೆ ನೀವು ಇಂಧನಕ್ಕಾಗಿ ಒಂದೇ ವಹಿವಾಟಿನಲ್ಲಿ 15,000 ರೂ.ಗಿಂತ ಹೆಚ್ಚು ಖರ್ಚು ಮಾಡಿದರೆ ಸಂಪೂರ್ಣ ಮೊತ್ತದ ಮೇಲೆ ಶೇ. 1ರಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ. ಇಲ್ಲೂ ಪ್ರತಿ ವಹಿವಾಟಿಗೆ ಗರಿಷ್ಠ 3000 ರೂ. ಶುಲ್ಕ ವಿಧಿಸಲಾಗುತ್ತದೆ.
ಕಾಲೇಜು/ಶಾಲಾ ವೆಬ್ಸೈಟ್ಗಳು ಅಥವಾ ಅವರ ಪಿಒಎಸ್ ಯಂತ್ರಗಳ ಮೂಲಕ ಕಾಲೇಜ್ ಶುಲ್ಕಗಳನ್ನು ಪಾವತಿ ಮಾಡಿದರೆ, ಯಾವುದೇ ಶುಲ್ಕವಿರುವುದಿಲ್ಲ. ಅಂತಾರಾಷ್ಟ್ರೀಯ ಶಿಕ್ಷಣ ಪಾವತಿಗಳನ್ನೂ ಈ ಶುಲ್ಕದಿಂದ ಹೊರಗಿಡಲಾಗಿದೆ. ಆದರೆ ಒಂದೊಮ್ಮೆ ಕ್ರೆಡ್, ಪೇಟಿಎಂ, ಚೆಕ್, ಮೊಬಿಕ್ವಿಕ್ ಮತ್ತು ಇತರ ಥರ್ಡ್-ಪಾರ್ಟಿ ಅಪ್ಲಿಕೇಶನ್ಗಳ ಮೂಲಕ ಶಿಕ್ಷಣ ಶುಲ್ಕಗಳನ್ನು ಪಾವತಿ ಮಾಡಿದರೆ, ಪಾವತಿ ಮೊತ್ತದ ಮೇಲೆ ಶೇ. 1ರಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ. ಮತ್ತು ಪ್ರತಿ ವಹಿವಾಟಿಗೆ ಗರಿಷ್ಠ 3,000 ರೂ. ಶುಲ್ಕವನ್ನು ವಿಧಿಸಲಾಗುತ್ತದೆ.