ಹಾಸನ: ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಮುಗಿಸಬೇಕೆಂದು ಹಲವು ತಂತ್ರಗಾರಿಕೆ ನಡೆಸುತ್ತಿವೆ. ಆದರೆ ಚೆನ್ನಕೇಶವನಾ ಆಶೀರ್ವಾದ ಮತ್ತು ದೇವೇಗೌಡರು ಇರುವ ತನಕ ಯಾರು ಏನು ಮಾಡಲು ಸಾಧ್ಯವಿಲ್ಲ. ಮೊದಲು ನಮ್ಮ ಪ್ರಚಾರಕ್ಕೆ ಜಾಹೀರಾತು ನೀಡಬೇಕಿತ್ತು. ಆದರೆ, ಈಗ ಪ್ರತಿನಿತ್ಯ ನಮ್ಮದೇ ಎಲ್ಲಾ ಚಾನೆಲ್ನಲ್ಲೂ ಬೆಳಗ್ಗೆಯಿಂದ ಸಂಜೆ ತನಕ ಪ್ರಚಾರ ಕೊಡ್ತಾ ಇದ್ದೀರಿ ನಿಮ್ಮ ಟಿವಿ ಮಾಧ್ಯಮದ ಮಾಲೀಕರಿಗೆ ಒಳ್ಳೆಯದಾಗಲಿ ಅಂತ ಮಾಧ್ಯಮವನ್ನು ಇದೇ ವೇಳೆ ಟೀಕಿಸಿದವರು.
ಶಾಸಕ ಲಿಂಗೇಶ್ ಪಾಪದ ಮನುಷ್ಯ
ಬೇಲೂರಿನ ಶಾಸಕ ಕೆ ಎಸ್ ಲಿಂಗೇಶ್ 750 ಕೋಟಿ ಹಣವನ್ನು ಲೂಟಿ ಹೊಡೆದಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಎಚ್ ಡಿ ರೇವಣ್ಣ, “ಲಿಂಗೇಶ್ ಒಬ್ಬ ಪಾಪದ ಮನುಷ್ಯ. ಎರಡು ರಾಷ್ಟ್ರೀಯ ಪಕ್ಷಗಳು ಸಂಚು ರೂಪಿಸಿ ಶಾಸಕನನ್ನ ರಾಜಕೀಯವಾಗಿ ಮುಗಿಸಲು ನೋಡುತ್ತಿದ್ದಾರೆ. ಬೇಲೂರಿಗೆ ಶಾಸಕರಾಗಿ ಬಂದ ಬಳಿಕ ಶಾಸಕರು ಏನೆಲ್ಲಾ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂಬುದನ್ನು ಕಡತ ತೆಗೆದು ನೋಡಲಿ.
ದೇವೇಗೌಡರಿಗೆ ಮೋಸ ಮಾಡಿದವರಿಗೆ ಚನ್ನಕೇಶವ ಶಿಕ್ಷೆ ಕೊಡ್ತಾನೆ
ದೇವೇಗೌಡರಿಗೆ ಮೋಸ ಮಾಡಿ, ಹೋಗಿದ್ದಾರಲ್ಲ ಅವರಿಗೆ ಚೆನ್ನಕೇಶವ ದೇವರೇ ಒಂದಲ್ಲ ಒಂದು ದಿನ ಶಿಕ್ಷೆ ಕೊಡುತ್ತಾನೆ. ಅರಸೀಕೆರೆ ಶಾಸಕನನ್ನ ಗಿಣಿ ಸಾಕಿದ ಹಾಗೆ ಸಾಕಿದೆ. ಆತ ಮೋಸ ಮಾಡಿ ಹೋಗಿದ್ದಾನೆ. ಈಗ ಶಿರಸಿವರೆಗೆ ಹೋಗಿ ರಾಜೀನಾಮೆ ಕೊಡಕ್ಕೆ ಹೋಗಿದ್ದಾನೆ. ಕೊಡುವುದಾದರೆ ಎರಡು ವರ್ಷದ ಮೊದಲೇ ರಾಜಿನಾಮೆ ಕೊಡಬೇಕಿತ್ತು ಎಂದು ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡ ವಿರುದ್ಧ ಹರಿಹಾಯ್ದರು.