ಬೆಂಗಳೂರು: ರಾಜ್ಯದಲ್ಲಿ ಮೂರು ಕ್ಷೇತ್ರಗಳ ಉಪ ಕದನ ರಂಗೇರಿದೆ. ಚನ್ನಪಟ್ಟಣ ಗೆದ್ದು ಮೊದಲ ಬಾರಿಗೆ ಶಾಸಕನಾಗಲು ಹಂಬಲಿಸುತ್ತಿರುವ NDA ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ವಿಧಾನ ಪರಿಷತ್ ಸದಸ್ಯರಾದ ಟಿ.ಎ ಶರವಣ ಅವರು ಮತಯಾಚನೆ ಮಾಡಿದ್ದಾರೆ. ಹೌದು ಉಪ ಕದನದ ಅಖಾಡ ರಂಗೇರಿದೆ. ಅಭ್ಯರ್ಥಿಗಳು ಕಣಕ್ಕಿಳಿದಾಗಿದೆ..
ಗೆಲುವಿನ ಲೆಕ್ಕಾಚಾರವೂ ಜೋರಾಗಿದೆ. ಮೂರು ದಿಕ್ಕು, ಮೂರು ಕ್ಷೇತ್ರದ ಉಪ ಕದನ.. ಕಾಂಗ್ರೆಸ್ಗೆ ಅಗ್ನಿಪರೀಕ್ಷೆ, ಬಿಜೆಪಿಗೆ ಪ್ರತಿಷ್ಠೆ, ದಳಕ್ಕೆ ಅಸ್ತಿತ್ವದ ಹೋರಾಟ. ಈ ಮಧ್ಯೆ ವಿಧಾನ ಪರಿಷತ್ ಸದಸ್ಯರಾದ ಟಿ.ಎ ಶರವಣ ಅವರು ಕ್ರಿಶ್ಚಿಯನ್ ಸಮುದಾಯ ಮುಖಂಡರ ಜೊತೆ ಮತಯಾಚನೆ ಮಾಡಿದ್ದಾರೆ.
ಈ ವೇಳೆ ಮಾತನಾಡಿದ ಟಿ.ಎ ಶರವಣ ಅವರು, ಬಿಜೆಪಿ, ಜೆಡಿಎಸ್ ನಾಯಕರು ಒಂದಾಗಿ ನಿಖಿಲ್ ರವರಿಗೆ NDA ಟಿಕೆಟ್ ನೀಡಿದ್ದೇವೆ. ನಿಖಿಲ್ ರವರನ್ನು ಗೆಲ್ಲಿಸುವ ಮೂಲಕ ಕುಮಾರಸ್ವಾಮಿರವರ ಕೈ ಬಲಪಡಿಸಬೇಕಾಗಿದೆ. ಚನ್ನಪಟ್ಟಣ ಕ್ಷೇತ್ರಕ್ಕೆ ನಿಖಿಲ್ ಒಳ್ಳೆಯ ಅಭ್ಯರ್ಥಿಯಾಗಿದ್ದಾರೆ. ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಟಿ.ಎ ಶರವಣ ಅವರು ಕ್ರಿಶ್ಚಿಯನ್ ಸಮುದಾಯದ ಜನರಿಗೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯ ಶಾಸಕರು, ದೋಸ್ತಿ ಮುಖಂಡರು, ಹಾಗೂ ಕ್ರಿಶ್ಚಿಯನ್ ಸಮುದಾಯ ಮುಖಂಡರ ಸಾಥ್ ನೀಡಿದ್ದಾರೆ. ಇನ್ನೂ ಈ 3 ವಿಧಾನಸಭಾ ಉಪ ಚುನಾವಣೆ ಪ್ರತಿಷ್ಠೆ, ಅಸ್ತಿತ್ವದ ಹೋರಾಟಕ್ಕೆ ಸಾಕ್ಷಿ ಆಗಲಿದೆ. ಒಟ್ಟಾರೆ ಮಿನಿ ಚುನಾವಣಾ ಯುದ್ಧದಲ್ಲಿ ಜಿದ್ದಾಜಿದ್ದಿ ಶುರುವಾಗಿದ್ದು ಯಾರ ಕೈ ಮೇಲಾಗುತ್ತೆ ಅನ್ನೋದು ನವೆಂಬರ್ 23ಕ್ಕೆ ಗೊತ್ತಾಗಲಿದೆ.