ಬೆಂಗಳೂರು:- ಗೋಬಿ ಮಂಚೂರಿಗೆ ಹಾಕುವ ರಾಸಾಯನಿಕ ಕೆಮಿಕಲ್ ನಿಂದ ಕಾನ್ಸರ್ ಹರಡುತ್ತಿದೆ ಎನ್ನುವುದು ಸ್ಪಷ್ಟವಾಗಿರುವ ಹಿನ್ನೆಲೆ ಆಹಾರ ಇಲಾಖೆ ಗೋಬಿ ಮಂಚೂರಿಗೆ ಹಾಕುವ ಕೆಮಿಕಲ್ ಬ್ಯಾನ್ ಮಾಡಿದೆ. ಸಧ್ಯ ಕೆಮಿಕಲ್ ಬ್ಯಾನ್ ಮಾಡಿ ಒಂದು ವಾರ ಕಳೆದಿದ್ದು, ಒಂದು ವಾರದಿಂದ ಗೋಬಿ ವ್ಯಾಪಾರಸ್ಥರ ವ್ಯಾಪಾರ ವಹಿವಾಟು 80% ರಷ್ಟು ಕುಸಿತವಾಗಿದೆ. ಗೋಬಿ ತಿನ್ನಲು ಗ್ರಾಹಕರು ಸಹ ಆಸಕ್ತಿ ಕಳೆದು ಕೊಂಡಿದ್ದಾರೆ.
ಹೀಗಾಗಿ ಮೆಜೆಸ್ಟಿಕ್, ಮಲ್ಲೇಶ್ವರಂ, ಜೆಪಿ ನಗರ, ರಾಜಾಜಿನಗರ, ವಿಜಯನಗರದ , ವಿಲ್ಸನ್ ಗಾರ್ಡಾನ್ ಸೇರಿದಂತೆ ವಿವಿಧೆಡೆ ಗೋಬಿ ಮಂಚೂರಿ ವ್ಯಾಪಾರ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಪಾನಿಪೂರಿ, ಬೇಲ್ಪೂರಿ, ಸೇವ್ ಪೂರಿಗಳತ್ತ ಹೆಚ್ಚು ಜನರು ಮುಖ ಮಾಡ್ತಿದ್ದಾರೆ.
ಬಣ್ಣ ವಿಲ್ಲದ ಗೋಬಿಗಳನ್ನ ಮಾಡಿದ್ರು ಗ್ರಾಹಕರು ತೆಗೆದುಕೊಳ್ಳತ್ತಿಲ್ಲ. ವ್ಯಾಪಾರ ಮಾಡಿ ಜೀವನ ನಡೆಸೋದೆ ದೊಡ್ಡ ಸವಾಲಾಗಿ ಹೋಗಿದೆ. ಈ ಹಿಂದೆ ಪ್ರತಿದಿನ 10 ಸಾವಿರದಷ್ಟು ವ್ಯಾಪಾರ ಮಾಡ್ತಿದ್ವಿ. ಆದ್ರೀಗಾ 5 ಸಾವಿರ ರೂ ವ್ಯಾಪಾರ ಮಾಡುವುದು ಕೂಡ ಕಷ್ಟವಾಗಿ ಹೋಗಿದೆ. ಹಾಕಿದ ಬಂಡವಾಳ ಕೂಡ ಬರ್ತಿಲ್ಲ. ಸಧ್ಯ ಯಾವುದೇ ಬಣ್ಣ ಬಳಕೆ ಮಾಡದೇ ನಾಚುರಲ್ ಗೋಬಿ ತಾಯಾರಿಸುತ್ತಿದ್ದೀವಿ. ಆದ್ರೂ ಕೂಡ ಜನರು ಬರ್ತಿಲ್ಲ. ಹೀಗೆ ಆದ್ರೆ ಮುಂದೆ ವ್ಯಾಪಾರದ ಮೇಲೆ ಭಾರಿ ಹೊಡೆತ ಬೀಳುತ್ತೆ ಅಂತ ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ.