ಚಿಕ್ಕಬಳ್ಳಾಪುರ:- ಚಿಕ್ಕಬಳ್ಳಾಪುರ ಯೋಗ ಶಿಕ್ಷಕಿ ಅಪರಣ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರ ತನಿಖೆಯಲ್ಲಿ ಹಲವು ವಿಚಾರ ಬಹಿರಂಗವಾಗಿದೆ.
ಶಿಕ್ಷಕಿಯನ್ನು ಅಪಹರಿಸಿ, ಜೀವಂತ ಸಮಾಧಿ ಮಾಡಿದ್ದ ಆರೋಪಿ ಸಂತೋಷನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪತಿ ಸಂತೋಷ ಕುಮಾರ್ ಪತ್ನಿ ಬಿಂದು ಹಾಗೂ ಮಕ್ಕಳ ಕಡೆ ತಲೆ ಹಾಕುತ್ತಿರುಲಿಲ್ಲ. ಯೋಗ ಶಿಕ್ಷಕಿಯೊಂದಿಗೆ ಇರುತ್ತಿದ್ದರು. ಇದರಿಂದ ಬೇಸರಗೊಂಡ ಬಿಂದು, ಶಿಕ್ಷಕಿಯ ಕತ್ತಲ್ಲಿ ಇದ್ದ ಮಾಂಗಲ್ಯ ಸರ ಕಿತ್ತು ಹಾಕಲು ಮತ್ತು ಶಿಕ್ಷಕಿ ಕಥೆ ಮುಗಿಸಲು ಸತೀಶರೆಡ್ಡಿಗೆ ನಾಲ್ಕು ಲಕ್ಷ ರೂಪಾಯಿಗೆ ಸುಪಾರಿ ನೀಡಿದ್ದಳು.
ಸುಪಾರಿ ಪಡೆದ ಸತೀಶ್ ರೆಡ್ಡಿ ಯೋಗ ಶಿಕ್ಷಕಿಯನ್ನು ಮುಗಿಸಲು ಕಳೆದ ಮೂರು ತಿಂಗಳುಗಳಿಂದ ಸ್ಕೇಚ್ ಹಾಕಿದ್ದನು. ಶಿಕ್ಷಕಿಯನ್ನು ಮುಗಿಸಲೆಂದೇ ಸತೀಶ್ ರೆಡ್ಡಿ ಯೋಗ ತರಗತಿಗೆ ಸೇರಿಕೊಂಡಿದ್ದನು. ಮೂರು ತಿಂಗಳುಗಳಲ್ಲಿ ಶಿಕ್ಷಕಿಯ ಜೊತೆ ಸ್ನೇಹ ಬೆಳಸಿ, ವಿಶ್ವಾಸ ಗಳಿಸಿದ್ದನು. ಅಲ್ಲದೇ, ಪಾರ್ಟನರ್ ಶಿಪ್ನಲ್ಲಿ ಜಮೀನು ಖರೀದಿಸೋಣ ಎಂದು ಹೇಳಿದ್ದನು.
ನಂತರ, ಅ.23 ರಂದು ಯೋಗ ಶಿಕ್ಷಕಿಯನ್ನು ಅಪಹರಿಸಲು ಪ್ಲಾನ್ ನಿರ್ಧರಿಸಿ, ಸತೀಶ್ ರೆಡ್ಡಿ ಮತ್ತು ಆತನ ಗ್ಯಾಂಗ್ ಫಿಲ್ಡ್ಗೆ ಇಳಿದಿದೆ. ನಾಗರಿಕ ಗನ್ ಟ್ರೈನಿಂಗ್ ಕೊಡಿಸುತ್ತೇವೆ ಅಂತ ಕಾರಿನಲ್ಲಿ ಯೋಗ ಶಿಕ್ಷಿಯನ್ನು ಶಿಡ್ಲಘಟ್ಟ ತಾಲೂಕಿನ ಗೌಡನಹಳ್ಳಿ ಬಳಿಯ ಕಾಲುವೆ ಹತ್ತಿರ ಕರೆದುಕೊಂಡು ಹೋಗಿದ್ದಾರೆ.
ಅಲ್ಲಿ, ಯೋಗ ಶಿಕ್ಷಿಯ ಕೊರಳಲ್ಲಿದ್ದ 60 ಗ್ರಾಂ ತೂಕದ ಮಾಗಲ್ಯ ಸರ, ಕಿವಿಯೋಲೆ, ಉಂಗುರ ದೋಚಿದ್ದಾರೆ. ಬಳಿಕ, ಯೋಗ ಶಿಕ್ಷಕಿಯನ್ನು ಅರೆ ಬೆತ್ತಲೆಗೊಳಿಸಿ ಗುಂಡಿಗೆ ನೂಕಿದ್ದಾರೆ. ನಂತರ, ಮಣ್ಣು ಮತ್ತು ಮರದ ಟೊಂಗೆಗಳನ್ನು ಹಾಕಿ ಮುಚ್ಚಲಾಗಿತ್ತು.
ಇನ್ನು, ಆರೋಪಿ ಸತೀಶ್ ರೆಡ್ಡಿ ಈ ಹಿಂದೆ ಗಂಡ-ಹೆಂಡತಿ ಸಮಸ್ಯೆಗಳನ್ನು ಬಳಸಿಕೊಂಡು ಬ್ಲಾಕ್ ಮೇಲ್, ಲೈಂಗಿಕ ದೌರ್ಜನ್ಯ ನೀಡಿದ್ದಾನೆ ಎಂದು ಪೊಲೀಸರು ಮಾಹಿತಿ ಕೊಟ್ಟಿದ್ದಾರೆ.