ಬೆಂಗಳೂರು: ಚಿಕ್ಕಪೇಟೆಯಲ್ಲಿ ನೆದರ್ ಲ್ಯಾಂಡ್ ಪ್ರಜೆ ಪೆಡ್ರೋ ಮೊಟಾ ಯೂಟ್ಯೂಬರ್ ಮೇಲೆ ಕಿರುಕುಳ ಪ್ರಕರಣ ಆರೋಪಿ ನವಾಬ್ ನನ್ನು ಚಿಕ್ಕಪೇಟೆ ಪೊಲೀಸರು ಸುಮೋಟೋ ಕೇಸ್ ನಡಿ ಬಂಧಿಸಿದ್ದಾರೆ.
ನವಾಬ್ ಹಯಾತ್ ಶರೀಫ್ ಬಂಧಿತ ಆರೋಪಿ. ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಬೆಂಗಳೂರು ಪೊಲೀಸ್, ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ವಿದೇಶಿ ಪ್ರವಾಸಿಗರೊಂದಿಗೆ ಇಂತಹ ಅನುಚಿತ ವರ್ತನೆಯನ್ನು ಸಹಿಸುವುದಿಲ್ಲ ಎಂದು ಹೇಳಿದೆ.
ದರ್ಲ್ಯಾಂಡ್ ಮೂಲದ ಮ್ಯಾಡ್ಲಿ ರೋವರ್ (Madly Rover) ಬೆಂಗಳೂರಿನ ಚಿಕ್ಕಪೇಟೆಯಲ್ಲಿ ವೀಡಿಯೋ ಮಾಡುತ್ತಾ ಸುತ್ತುತ್ತಿದ್ದರು. ಸಂಡೇ ಬಜಾರ್ನಲ್ಲಿ ಸೆಲ್ಫಿ ವಿಡಿಯೋ ಮಾಡುತ್ತಿದ್ದಾಗ ನವಾಬ್ ಹಯಾತ್ ಶರೀಫ್ ವಿಡಿಯೋ ಮಾಡದಂತೆ ಹಲ್ಲೆಗೆ ಯತ್ನಿಸಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ (Social Meida) ವೀಡಿಯೋ ಹರಿದಾಡುತ್ತಿದ್ದಂತೆ ಬಹಳ ಟೀಕೆ ವ್ಯಕ್ತವಾಗಿತ್ತು. ನೆಟ್ಟಿಗರು ಖಂಡನೆ ವ್ಯಕ್ತಪಡಿಸಿ ಬೆಂಗಳೂರು ಪೊಲೀಸರಿಗೆ (Bengaluru Police) ಟ್ಯಾಗ್ ಮಾಡಿ ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಟ್ವೀಟ್ ಮಾಡಿದ್ದರು.