ನರ್ಸ್ ಗಳ ಸೋಗಿನಲ್ಲಿ ಬಂದು ಪೋಷಕರನ್ನ ಪುಸಲಾಯಿಸಿ ಮಗು ಕಳವು ಮಾಡಿದ ಘಟನೆ ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ..ಸೈಯದ್ ಚಿಂಚೋಳಿ ಗ್ರಾಮದಿಂದ ಬಂದಿದ್ದ ಕಸ್ತೂರಿ ತನ್ನ ಗಂಡುಮಖುವನ್ನ ಚಿಕ್ಕಮ್ಮಳಿಗೆ ನೀಡಿ ರಕ್ತಪರೀಕ್ಷೆಗೆ ಕರೆದುಕೊಂಡು ಹೋಗಲು ತಿಳಿಸಿದ್ದಾಳೆ.
ಇದೇವೇಳೆ ಲ್ಯಾಬ್ ಬಳಿ ಎಂಟ್ರಿ ಕೊಟ್ಟ ನಕಲಿ ನರ್ಸ್ ಮಗುವಿನ ರಿಪೋರ್ಡ್ ತರಲು ಹೇಳಿ ಮಗುವನ್ನ ಪಡೆದಿದ್ದಾಳೆ.
ಚಿಕ್ಕಮ್ಮ ಚಂದ್ರಕಲಾ ಮರಳಿ ಬರುವಷ್ಟರಲ್ಲಿ ಕೈಯಲ್ಲಿ ಅಪ್ರಾನ್ ಹಿಡಿದು ಬುರ್ಕಾ ಧರಿಸಿದ್ದ ನಕಲಿ ನರ್ಸ್ ಎಸ್ಕೇಪ್ ಆಗಿದ್ದಾಳೆ..ಈ ಎಲ್ಲ ಕೃತ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ಈ ಕುರಿತು ಬ್ರಹ್ಮಪುರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.. ಇದೇವೇಳೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಚಿವ ಶರಣಪ್ರಕಾಶ ಪಾಟೀಲ್ ಪೋಷಕರ ಜೊತೆ ಮಾತಾಡಿ ಮಗು ಪತ್ತೆ ಹಚ್ಚುವುದಾಗಿ ಭರವಸೆ ಮೂಡಿಸಿದ್ದಾರೆ..