ಬೀಜಿಂಗ್: ಚೀನಾ ಸರ್ಕಾರವು ಮಹಿಳಾ ಮಾಡೆಲ್ಗಳು ಆನ್ಲೈನ್ನಲ್ಲಿ ಒಳ ಉಡುಪು ಪ್ರದರ್ಶಿಸುವುದನ್ನ ನಿಷೇಧಿಸಿದೆ. ಹೀಗಾಗಿ ದೇಶದ ಲೈವ್ಸ್ಟ್ರೀಮ್ ಫ್ಯಾಶನ್ ಕಂಪನಿಗಳು ಇದೀಗ ಒಳ ಉಡುಪುಗಳ ರಾಯಭಾರಿಯನ್ನಾಗಿ ಪುರುಷರನ್ನ ನಿಯೋಜಿಸುತ್ತಿವೆ.
ಬ್ರಾ ದಿಂದ ಹಿಡಿದು ನೈಟ್ಗೌನ್ ವರೆಗಿನ ಎಲ್ಲ ರೀತಿಯ ಒಳ ಉಡುಪುಗಳ ಜಾಹೀರಾತಿಗೆ ಪುರುಷರನ್ನ ನಿಯೋಜನೆ ಮಾಡಲಾಗುತ್ತಿದೆ. ಮಹಿಳೆಯರ ಒಳ ಉಡುಪುಗಳನ್ನ ಧರಿಸಿರುವ ಚೀನಿ ಪುರುಷರ ಚಿತ್ರಗಳು, ಫ್ಯಾಷನ್ ಕಂಪನಿಗಳ ಲೈವ್ಸ್ಟ್ರೀಮ್ ಪ್ರಸಾರದ ವೀಡಿಯೋಗಳು ಜಾಲತಾಣದಲ್ಲಿ ಸದ್ದು ಮಾಡ್ತಿವೆ. ಕೆಲ ಪುರುಷ ಮಾಡೆಲ್ಗಳು ಕ್ಯಾಟ್ ಇಯರ್ ಹೆಡ್ಬ್ಯಾಂಡ್ನೊಂದಿಗೆ ಕಾಣಿಸಿಕೊಂಡಿದ್ದಾರೆ.
ಪುರುಷ ಮಾಡೆಲ್ಗಳಿಂದ ಮಹಿಳೆಯರ ಒಳ ಉಡುಪು ಪ್ರದರ್ಶಿಸುವ ಮೂಲಕ ಚೀನಾ ಸರ್ಕಾರ ಟೀಕೆಗೆ ಗುರಿಯಾಗಿದೆ. ಕೆಲವರು ಇದಕ್ಕೆ ಬೆಂಬಲ ಸಹ ವ್ಯಕ್ತಪಡಿಸಿದ್ದಾರೆ. ಫ್ಯಾಶನ್ ಕಂಪನಿಗಳ ಪ್ರಯತ್ನಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.