ಚಿಕ್ಕಬಳ್ಳಾಪುರ:-ಹಳ್ಳಕ್ಕೆ ಬಿದ್ದ ಕಾರಲ್ಲಿ ಬೆಂಕಿ ಹೊತ್ತಿಕೊಂಡ ಹಿನ್ನೆಲೆ ಕಾರಿನ ಸಮೇತ ಚಾಲಕ ಸುಟ್ಟು ಭಸ್ಮವಾದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗೊಲಪಲ್ಲಿ ಗ್ರಾಮದಲ್ಲಿ ಜರುಗಿದೆ.
ಚಾಲಕನನ್ನು 48 ವರ್ಷದ ಇಬ್ರಾಹಿಂ ಎಂದು ಗುರುತಿಸಲಾಗಿದೆ. ಈತ ವ್ಯಾಪಾರ ಮುಗಿಸಿಕೊಂಡು ಒಮಿನಿ ಕಾರಿನಲ್ಲಿ ವಾಪಸ್ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಕಾರು ಹಳ್ಳಕ್ಕೆ ಬಿದ್ದು ಬೆಂಕಿ ಹೊತ್ತಿಕೊಂಡಿದ್ದು, ಕಾರಿನ ಸಮೇತ ಚಾಲಕ ಸುಟ್ಟು ಹೋಗಿದ್ದಾನೆ. ಮೃತ ದೇಹವನ್ನು ಚಿಂತಾಮಣಿ ಶವಾಗಾರಕ್ಕೆ ರವಾನೆ ಮಾಡಲಾಗಿದೆ.
ಸ್ಥಳೀಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.