ಚಿತ್ರದುರ್ಗ: ಕೇಂದ್ರ ಬಜೆಟ್ನಲ್ಲಿ ಚಿತ್ರದುರ್ಗ ಜಿಲ್ಲೆಗೆ ಅನ್ಯಾಯವಾಗಿದೆ ಎಂದು ಚಿತ್ರದುರ್ಗದಲ್ಲಿ ಸಾಂಖಿಕ ಯೋಜನಾ ಸಚಿವ ಡಿ.ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆಗೆ ನೀಡಿದ ಹಣವನ್ನು ಜನನಬಿಡುಗಡೆ ಮಾಡಿಲ್ಲ.ರಾಜ್ಯಕ್ಕೂ ಯಾವುದೇ ಕೊಡುಗೆ ಕೊಟಿಲ್ಲ ಕೇಂದ್ರ ಸರಕಾರವು ರಾಜ್ಯಕ್ಕೆ ಮಲತಾಯಿ ಧೋರಣೆ ತೋರುತಿದೆ.
ಬಿಜೆಪಿ ಸುಳ್ಳುಪ್ರಚಾರ ಮಾಡಿ ಅಧಿಕಾರಕ್ಕೆ ಬಂದಿದೆ ಕಳೆದ ಹತ್ತು ವರ್ಷದಿಂದ ಅಧಿಕಾರ ಹಿಡಿದಿದೆ.ಬಿಜೆಪಿಯವರಿಗೆ ಕೆಲಸ ಇಲ್ಲ ಅದಕ್ಕೆ ಪಾದಯಾತ್ರೆ ಮಾಡುತಿದ್ದಾರೆ, ಮುಡಾ ಹಗರಣವನ್ನು ನಿವೃತ್ತ ನ್ಯಾಯಮೂರ್ತಿ ಗಳಿಂದ ಮಾಡಲಿಸಲು ಸರಕಾರ ಆದೇಶಿಸಿದೆ ಆಯೋಗದ ಮುಂದೆ ತಮ್ಮ ಅನಿಸಿಕೆ ದೂರನ್ನು ನೀಡಬಹುದು ಪಾದಯಾತ್ರೆ ಅವಶ್ಯಕತೆ ಇಲ್ಲ ಕಾಲವೇ ಎಲ್ಲಾವುದಕ್ಕೆ ಉತ್ತರ ನೀಡಲಿದೆ. ಯಾವ ಯೋಜನೆ ನಿಂತಿಲ್ಲ ಕೆಲವೊಂದು ತಾಂತ್ರಿಕ ಕಾರಣದಿಂದ ನಿಧಾನವಾಗಿದೆ ಎಂದರು.