2022-23ನೇ ಸಾಲಿನ ಕರ್ನಾಟಕ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಚಿತ್ರದುರ್ಗ ಪ್ರಥಮ, ಮಂಡ್ಯ ದ್ವಿತೀಯ, ಹಾಸನ ತೃತೀಯ ಹಾಗೂ ಯಾದಗಿರಿ ಅಂತಿಮ ಸ್ಥಾನ ಗಳಿಸಿದೆ.
ಈ ಬಾರಿ 7 ಲಕ್ಷದ 619 ವಿದ್ಯಾರ್ಥಿಗಳು ಉತ್ತೀರ್ಣ
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಾಸಾದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ – 7,00,619.ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಾಸಾದ ಬಾಲಕರ ಸಂಖ್ಯೆ – 3,41,108.ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಾಸಾದ ಬಾಲಕಿಯರ ಸಂಖ್ಯೆ- 3,59,511.
625 ಕ್ಕೆ 625 ಅಂಕ ಪಡೆದ 4 ವಿದ್ಯಾರ್ಥಿಗಳು
ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶವನ್ನು ಇಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷ ರಾಮಚಂದ್ರ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶ ಹಾಗೂ ಗೋಪಾಲಕೃಷ್ಣ ಸೇರಿದಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನ ಪ್ರಕಟಿಸಿದ್ದಾರೆ. 2023ರಲ್ಲಿ ಶೇ.83.89. ಫಲಿತಾಂಶ ದಾಕಲಾಗಿದ್ದು, 4 ವಿದ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆಡಿದ್ದಾರೆ.
ಜಿಲ್ಲಾವಾರು ಫಲಿತಾಂಶ: ಚಿತ್ರದುರ್ಗ ಶೇ.96.8 ಮಂಡ್ಯ ಶೇ.96.74 ಹಾಸನ ಶೇ.96.68 ಬೆಂಗಳೂರು ಗ್ರಾಮಾಂತರ ಶೇ.96.78 ಚಿಕ್ಕಬಳ್ಳಾಪುರ ಶೇ.96.15 ಕೋಲಾರ ಶೇ.94.6 ಮೈಸೂರು ಜಿಲ್ಲೆ ಶೇ.89.75 ಬೆಂಗಳೂರು ಪಶ್ಚಿಮ ಶೇ.80.93 ಬೆಂಗಳೂರು ದಕ್ಷಿಣ ಶೇ.78.95 ಯಾದಗಿರಿಗೆ ಕೊನೆಯ ಸ್ಥಾನ- ಶೇ.75.49
ನಾಲ್ವರು ವಿದ್ಯಾರ್ಥಿಗಳು SSLC ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ, ಭೂಮಿಕಾ ಪೈ- ನ್ಯೂ ಮೆಕಾಲೆ ಶಾಲೆ, ಹೊಸೂರು ರಸ್ತೆ, ಬೆಂಗಳೂರು, ಯಶಸ್ಗೌಡ- ಬಿಜಿಎಸ್ ಶಾಲೆ, ಅಗಲಗುರ್ಕಿ, ಚಿಕ್ಕಬಳ್ಳಾಪುರ ಜಿಲ್ಲೆ , ಅನುಪಮಾ ಶ್ರೀಶೈಲ್ ಹಿರೆಹೋಳಿ- ಶ್ರೀಕುಮಾರೇಶ್ವರ ಶಾಲೆ, ಸವದತ್ತಿ, ಭೀಮನಗೌಡ ಪಾಟೀಲ್ವಿ-ಜಯಪುರ.