ಚಿತ್ರದುರ್ಗ:ಯೋಗ ಬಲ್ಲವನಿಗೆ ರೋಗ ಇಲ್ಲ. ವೈದ್ಯರು ನೀಡುವ ಔಶಧಿ ಗುಣ ಯೋಗದಲ್ಲಿದೆ ಎಂದು ಐಯುಡಿಪಿನಿಸರ್ಗ ಯೋಗ ಕೇಂದ್ರದ ಅಧ್ಯಕ್ಷರಾದ ರಾಮಣ್ಣ ತಿಳಿಸಿದರು. ಚಿತ್ರದುರ್ಗದ ಐಯುಡಿಪಿ ಬಡಾವಣೆಯ ಪ್ರಶಾಂತಿ ವಿದ್ಯಾಲಯದಲ್ಲಿ ನಡೆದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು,ನಮ್ಮ ಯೋಗ ಕೇಂದ್ರದ ಯೋಗಪಟುಗಳಾದ ಗೀತಮ್ಮ ಹಾಗು ವಾಸವಿಯವರು ಹರಿದ್ವಾರದಲ್ಲಿ ನಡೆದ ಶಿಕ್ಷಕ ತರಭೇತಿ ಶಿಭಿರದಲ್ಲಿ ಭಾಗವಹಿಸಿ ಯಶಸ್ವಿಯಾಗಿ ತರಭೇತಿಪಡೆದು ತವರಿಗೆ ಮರಳಿದ್ದಾರೆ.
ಇದು ನಮ್ಮ ಯೋಗ ಕೇಂದ್ರಕ್ಕೊಂದು ಹೆಮ್ಮೆಯ ಸಂಗತಿಯಾಗಿದೆ.ಅವರ ಸಾಧನೆ ಇಡೀ ಹೆಣ್ಣು ಸಂಕುಲಕ್ಕೆ ಮಾದರಿ ಎನಿಸಿದೆ. ಇಂದು ಹೆಣ್ಣು ಸಂಕುಲವು ಯಾವುದರಲ್ಲು ಕಡಿಮೆ ಇಲ್ಲ. ಇಡೀ ಜಗತ್ತಿಗೆ ಹೆಣ್ಣಿನಸಾಧನೆ ಮಾದರಿ ಎನಿಸಿದೆ.
ಹೆಣ್ಣು ಈಜಗತ್ತಿನ ಸೃಷ್ಟಿ ದೇವತೆ ಎನಿಸಿದ್ದಾರೆ. ಈ ಭೂಮಿ ಹೆಣ್ಣು,ನಾವು ನಿತ್ಯ ಖರ್ಚು ಮಾಡುವ ಲಕ್ಷ್ಮಿ ಹೆಣ್ಣು ಅಂತೆಯೇ ಕಲಿಯುವ ವಿದ್ಯೆ ಎನಿಸಿರುವ ಸರಸ್ವತಿಕೂಡ ಹೆಣ್ಣಾಗಿದ್ದು,ಎಲ್ಲಾಕ್ಷೇತ್ರಗಳಲ್ಲು ಹೆಣ್ಮಕ್ಕಳು ಸಾಧನೆಯಲ್ಲಿ ಮುಂದಿದ್ದಾರೆ.
ಹೀಗಾಗಿ ಹೆಣ್ಣುಮಕ್ಕಳು ಯಾವುದರಲ್ಲು ಕಡಿಮೆ ಇಲ್ಲ ಎನ್ನಿಸ್ತಿದೆ. ಒಂದು ಹೆಣ್ಣು ಮನಸು ಮಾಡಿದರೆ ಯಾವುದು ಕಷ್ಟಸಾದ್ಯ ಎನಿಸಿದ್ದು,ಮನೆಮಂದಿಯನ್ನು ಬಿಟ್ಟು ಯೋಗಸಾಧನೆಗಾಗಿ ಹರಿದ್ವಾರಕ್ಕೆ ತೆರಳಿ,ಅಲ್ಲಿಶಿಕ್ಷಕ ತರಭೇತಿ ಪಡೆದು ನಿಸ್ವಾರ್ಥದಿಂದ ಚಿತ್ರದುರ್ಗದಾದ್ಯಂತ ಯೋಗ ಸಂಘಟನೆಗೆ ಮುಂದಾಗಿರುವ ಇವರ ಕಾರ್ಯ ಶ್ಲಾಘನೀಯ ಎಂದರು.
ಈ ವೇಳೆ ಪ್ರಾಸ್ತಾವಿಕವಾಗಿ ಮಾತನಾಡಿದ ನಿಸರ್ಗ ಯೋಗ ಕೇಂದ್ರದ ಪ್ರಧಾನ ಕಾರ್ಯ ದರ್ಶಿ ಸಿದ್ದರಾಜು ಅವರು, ಯಾವುದೇ ಕ್ಷೇತ್ರದಲ್ಲಾಗಲಿ ಸಾಧಿಸಿದ ಸಾಧಕರನ್ನು ಗುರುತಿಸಿ,ಗೌರವಿಸಿದಾಗ ಅದು ಸಾಧಕರಿಗೆ ಸ್ಪೂರ್ತಿಯಾಗಲಿದೆ.ಹೀಗಾಗಿ ನಮ್ಮ ಸಂಘದವತಿಯಿಂದ ಹರಿದ್ವಾರಕ್ಕೆ ತೆರಳಿ ಯೋಗ ತರಭೇತಿ ಪಡೆದು ಮರಳಿರುವ ಸಾಧಕರಿಗೆ ಸನ್ಮಾನಿಸಿದ್ದು ಅರ್ಥಪೂರ್ಣ ಎನಿಸಿದೆ.
ಇಂತಹ ಕಾರ್ಯಗಳು ನಿರಂತರವಾಗಿರಬೇಕು.ಆಗ ಮತ್ತಷ್ಟು ಪ್ರತಿಭೆಗಳು ಹೊರಹೊಮ್ಮಲಿವೆ.ಹಾಗೆಯೇ ಸಾಧಕರಾದ ವಾಸವಿ,ಗೀತಮ್ಮ ಇಬ್ಬರುಸಹ ಉತ್ತಮಸ್ನೇಹಜೀವಿಗಳಾಗಿದ್ದಾರೆ.ಸಂಘಟನಾ ಚತುರರಾಗಿದ್ದಾರೆ.ಇಂತಹ ಸಾಧಕರು ಹರಿದ್ವಾರದಲ್ಲಿ ಯೋಗ ತರಭೇತಿ ಪಡೆದು ಮರಳಿರೋದುಚಿತ್ರದುರ್ಗ ಜಿಲ್ಲೆಗೊಂದು ಕೀರ್ತಿಯ ಕಳಶ ಎಂದರು.
ಬಳಿಕ ಮಾತನಾಡಿದ ಸನ್ಮಾನಿತರಾದ ಗೀತಮ್ಮಅವರು ಹರಿದ್ವಾರದಲ್ಲಿ ಯೋಗತರಭೇತಿ ಪಡೆದ ಕ್ಷಣಗಳನ್ನು ಸ್ಮರಿಸಿದರು.ನಾವು ನಿತ್ಯಯೋಗ, ಪ್ರಾಣಾಯಾಮ ಮಾಡಿದಷ್ಟು ನಮ್ಮ ದೇಹ ಕ್ಕೆ ಎನರ್ಜಿ ಸಿಗಲಿದೆ.ಪ್ರಾಣಯಾಮ ಮಾಡಿದಷ್ಟು ಆಯಸ್ಸು ಹೆಚ್ಚಾಗಲಿದೆ. ದೇಹ ನಿಧಾನವಾಗಿ ಶಕ್ತಿ ಪಡೆಯಲಿದೆ ಎಂದರು.ಜೊತೆಗೆ ದೈನಂದಿನ ಊಟೋಪಚಾರ ಪದ್ದತಿ ಅನುಸರಿಸಬೇಕು.ಆಹಾರ ಬಳಕೆಯಲ್ಲಿ ಹೆಚ್ಚು ದ್ವಿದಳ ಧಾನ್ಯ,ತರಕಾರಿ ಬಳಕೆ ಹಾಗು ಕಶಾಯ ಬಳಕೆಯಿಂದ ನಮ್ಮ ಆರೋಗ್ಯದ ಸ್ಥಿತಿಗತಿ ಸುಧಾರಣೆಯಾಗಲಿದೆ ಎಂದರು.
ಇದೇ ವೇಳೆ ಇನ್ನೋರ್ವಸಾಧಕಿ ವಾಸವಿ ಕೂಡ ಅವರ ಅನಿಸಿಕೆ ತಿಳಿಸಿದ್ದು,ಹರಿದ್ವಾರದಲ್ಲಿ ಶಿಸ್ತು,ಸಂಯಮ ಹಾಗು ಸಮಯ ಪಾಲನೆಯ ಮಹತ್ವ ತಿಳಿದೆವು.ಹರಿದ್ವಾರದಲ್ಲಿ ಗುರುಗಳು ಕಟ್ಟಿಸಿರುವ ಗೋಶಾಲೆ ಹಾಗು ಶಿಕ್ಷಣ ಸಂಸ್ಥೆಗಳನ್ನು ಕಂಡು ಪುಳಕಿತರಾದೆವು ಎಂದರು.
ಇನ್ನು ಇದೇ ವೇಳೆ ಸಾಧಕರರನ್ನು ಅಭಿನಂದಿಸಿದ ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರು ಹಾಗು ಯೋಗ ಕೇಂದ್ರದಉಪಾಧ್ಯಕ್ಷರಾದ ಅನುಸೂಯ ಅವರು ದೇಶ ಸುತ್ತಬೇಕು ಅಥವಾ ಕೋಶ ಓದಬೇಕೆಂಬಂತೆ ನಮ್ಮ ಯೋಗ ಕೇಂದ್ರದ ಗೀತಮ್ಮಮತ್ತುವಾಸವಿ ಹರಿದ್ವಾರಕ್ಕೆ ತೆರಳಿ ಯೋಗದ ತರಭೇತಿ ಪಡೆದಿರೋದು ಅಭಿನಂದನಾರ್ಹ.
ಅವರು ಹರಿದ್ವಾರಕ್ಕೆ ತೆರಳಿದ್ದು ಸಂತಸ ತಂದಿದೆ ಎಂದರು.ಬಳಿಕ ಬಸವೇಶ್ವರ ಆಸ್ಪತ್ರೆಯ ಮಂಜುಳ ಅವರು ಮಾತನಾಡಿದ್ದುಯೋಗ ಅಂದ್ರೆ ನಮಗೆಲ್ಲಾ ತುಂಭ ಇಷ್ಟ. ಆದರೆ ಆರಂಭದ ದಿನಗಳಲ್ಲಿ ಯೋಗದ ಮಹತ್ವ ಜನರಗೆ ತಿಳಿಯಲಿಲ್ಲ.ಯೋಗ ಇಂದು ಹೆಮ್ಮರವಾಗಿಬೆಳೆದಿದೆ.
ಅಂದು ಯಾವುದೇ ರೀತಿಯ ಯೋಗ ತರಭೇತಿಗಳಿರಲಿಲ್ಲ.ಈಗ ಯೋಗ ಕಲಿಸಲೆಂದೇ ಇಂತಹ ಶಿಕ್ಷಣ ತರಭೇತಿಯನ್ನು ನೀಡ್ತಿರೋದು ಸಂತೋಷದ ಸಂಗತಿಯಾಗಿದೆ.ನಾವು ನಿತ್ಯ ಯೋಗದ ವೇಳೆ ಪ್ರಾರ್ಥಿಸುವ ಮಂತ್ರ ನಮ್ಮ ಜೀವನಕ್ಕೆ ದಾರಿದೀಪವಾಗಲಿದೆ ಎಂದರು.ಇವರೊಂದಿಗೆ ಅನೇಕ ಜನ ಯೋಗಪಟುಗಳು ಅವರ ಅಭಿಪ್ರಾಯ ಹಂಚಿಕೊಡಿದ್ದು,ಯೋಗ ಶಿಕ್ಷಕಿ ಹಾಗು ಅಂಗನವಾಡಿ ಕಾರ್ಯಕರ್ತೆ ಮಂಜುಳ ಯೋಗಕೇಂದ್ರವೊಂದು ಕುಟುಂಬದಂತೆ.ನಾವೆಲ್ಲರು ಒಟ್ಟಾಗಿಯೋಗ ಮಾಡುವ ಮೂಲಕ ಶಿಸ್ತು ಕಲಿಯುತ್ತೇವೆ.
ಆರೋಗ್ಯ ಕಾಪಾಡಿಕೊಳ್ತೇವೆ.ಇಲ್ಲಿ ಯಾವ್ದೇ ದ್ವೇಷ,ಅಸೂಯೆ ಹಾಗು ಅಸಮಾನತೆ ಬೆಳೆಸಿಕೊಳ್ಳದೇನಿಸ್ವಾರ್ಥದಿಂದ ಯೋಗಾಭ್ಯಾಸ ಮಾಡಬೇಕು ಎಂದರು.ಈ ವೇಳೆ ಯೋಗ ಸಾಧಕರಾದ. ವಾಸವಿ ಹಾಗು ಗೀತಮ್ಮ ಅವರನ್ನು ಯೋಗ ಕೇಂದ್ರದ ಪಧಾಧಿಕಾರಿಗಳೆಲ್ಲರು ಸೇರಿ ಅಭಿನಂಧಿಸಿದರು.ಸಾಧಕರ ಮೇಲೆ ಹೂಮಳೆಸುರಿಸಿ ಸನ್ಮಾನಿಸಿದರು.ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಮಹಲಿಂಗಪ್ಪನಿರೂಪಿಸಿದರು.ಅನುಸೂಯ ಸ್ವಾಗತಿಸಿದರು.ಮಂಜುಳ ಪ್ರಾರ್ಥಿಸಿದರು. ಸಿದ್ದರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ವೇಳೆ ಯೋಗಟುಗಳಾದ ಜಯ್ಯಣ್ಣ,ಡಯಟ್ ಸುಪರಿಡೆಂಟ್ ಗೀತಾ,ಭದ್ರಾಮೇಲ್ದಂಡೆ ಕಚೇರಿಯ ಇಂಜಿನಿಯರ್ ದಿವ್ಯ, ಪುಷ್ಪ, ಪುಷ್ಪವತಿ, ಸಂಯಕ್ತ, ಸ್ವಾಮಿ, ಅಣ್ಣೇಶ್, ಶೇಖರಪ್ಪ, ಕೌಸಲ್ಯ, ಶಿಕ್ಷಕರಾದ ಅನಿತ, ಲೀಲಾವತಿ, ಸ್ವಾಮಿ,ಲತಾ,ರಂಗಮ್ಮ ಸೇರಿದಂತೆ ಮಹಿಳಾಯೋಗಕೇಂದ್ರದ ಯೋಗಪಟುಗಳು ಇತರರು ಇದ್ದರು.