ಸಿಗರೇಟ್ ಸೇದೋದ್ರಿಂದ ಗಂಟಲಿನ ಕ್ಯಾನ್ಸರ್ ಬರುತ್ತೆ, ಶ್ವಾಸಕೋಶಕ್ಕೆ ತೊಂದ್ರೆ ಅನ್ನೋದು ಗೊತ್ತೇ ಇದೆ. ‘ಸಿಗರೇಟ್ ಆರೋಗ್ಯಕ್ಕೆ ಹಾನಿಕರ’ ಅಂತ ಗೊತ್ತಿದ್ರೂ ಜನ ಸಿಗರೇಟ್ ಸೇದೋದು ಬಿಡಲ್ಲ! ಈಗೀಗ ಗಂಡುಮಕ್ಕಳಿಗಿಂತ ಹೆಣ್ಣು ಮಕ್ಕಳು ಸಿಗರೇಟ್ ಸೇದೋದು ಜಾಸ್ತಿಯಾಗಿದೆ.
ನಿಮ್ಗೆ ಗೊತ್ತಾ ಸಿಗರೇಟ್ ಸೇದೋದ್ರಿಂದ ಹುಡುಗರಿಗಿಂತ ಹುಡುಗಿಯರಿಗೇ ತೊಂದ್ರೆ ಹೆಚ್ಚು. ದಂ ಹೊಡೆಯೋ ಹೆಣ್ಣು ಮಕ್ಕಳು ಪೀರಿಯಡ್ ಟೈಮ್ನಲ್ಲಿ ತುಂಬಾನೇ ನೋವು ಅನುಭವಿಸಬೇಕಾಗುತ್ತೆ. ಪೀರಿಯಡ್ ಸರಿಯಾಗಿ ಆಗಲ್ಲ.
ಇನ್ನೊಂದು ಇಂಪಾರ್ಟೆಂಟ್ ವಿಷ್ಯ ಅಂದ್ರೆ, ಸಿಗರೇಟ್ ಸೇದೋ ಹುಡ್ಗೀರು ಗಳಿಗೆಗೆ ಒಂದೊಂದು ರೀತಿ ಬದಲಾಗ್ತಾ ಇರ್ತಾರೆ. ಕ್ಷಣ ಕ್ಷಣಕ್ಕೂ ಅವರ ಮೂಡ್ ಚೇಂಜ್ ಆಗ್ತಾ ಇರುತ್ತೆ.
ಈ ಎಲ್ಲಕ್ಕಿಂತ ಮುಖ್ಯವಾಗಿ ಗರ್ಭಕೋಶದ ಸಮಸ್ಯೆ ಎದುರಾಗೋ ಸಾಧ್ಯತೆ ಕೂಡ ಇದೆ. ಇಷ್ಟೇ ಅಲ್ದೆ ಮಕ್ಕಳಾಗೋದು ಕೂಡ ಕಷ್ಟ! ಹೀಗಾಗಿ ಸಿಗರೇಟ್ ಸೇದೋ ಹುಡ್ಗೀರೇ ಹುಷಾರ್..!