ಬೆಂಗಳೂರು: ನನ್ನ ಹನಿಟ್ರ್ಯಾಪ್ ನಡೆದಿಲ್ಲ. ಗೌರವಯುತವಾಗಿ ಬದುಕುತ್ತಿರುವ ನನ್ನ ಪರಿಚಿತರಿಗೆ ಹನಿಟ್ರ್ಯಾಪ್ ಮಾಡಿ, ಬ್ಲಾಕ್ ಮೇಲ್ ಮಾಡಲಾಗುತ್ತಿತ್ತು ಎಂದು ಶಾಸಕ ಹರೀಶ್ ಗೌಡ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳು 2 ನಂಬರ್ಗಳಿಂದ ಕರೆ ಮಾಡ್ತಿದ್ರು. ಆ ನಂಬರ್ಗಳ ಮೂಲಕ ಟ್ರೇಸ್ ಮಾಡಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಕಾನೂನಾತ್ಮಕವಾಗಿ ಏನು ಆಗಬೇಕು ಅದು ಆಗುತ್ತದೆ. ಹಣಕ್ಕಾಗಿ ಬೇಡಿಕೆ ಇಟ್ಟು ಫೋಟೋ ಮನೆಗೆ ಕಳಿಸುವುದಾಗಿ ಬೆದರಿಸ್ತಿದ್ರು. ಈ ಜಾಲದಲ್ಲಿ ಯಾರಿದ್ದಾರೆ ಎಂಬುದನ್ನ ನೋಡಬೇಕು. ಉದ್ಯಮಿಗಳು, ಪ್ರೊಫೆಸರ್ಗಳಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ನನಗೆ ಆ ರೀತಿ ಮಾಡಿಲ್ಲ ಆದರೆ ನನ್ನ ಕ್ಷೇತ್ರದ ಕೆಲವರಿಗೆ ಹಾಗಾಗಗಿದೆ ಎಂದು ಅವರು ತಿಳಿಸಿದ್ದಾರೆ.
ಮೈಸೂರು, ಬೆಂಗಳೂರಿಗೆ ಬಂದಾಗ ಈ ರೀತಿ ಮಾಡುತ್ತಿದ್ದರು. ಈ ಸಂಬಂಧ ನಾನು ಅವರಿಂದ ಪೊಲೀಸ್ ಕಮಿಷನರ್ಗೆ, ಸಿಸಿಬಿ ಪೊಲೀಸರಿಗೆ ದೂರು ಕೊಡಿಸಿದ್ದೆ. ಬಂಧಿತರು ಮೈಸೂರಿನವರಾದ್ರೂ ನನಗೆ ಗೊತ್ತಿಲ್ಲ. ನನ್ನ ವಿರುದ್ದ ಯಾವುದೇ ರಾಜಕೀಯ ಷಡ್ಯಂತ್ರ ನಡೆದಿಲ್ಲ ಎಂದಿದ್ದಾರೆ.