ಕಿತ್ತಳೆ ಚಳಿಗಾಲದ ಸಾಮಾನ್ಯ ಹಣ್ಣಾಗಿದ್ದು, ವಿಟಮಿನ್ ಸಿ ಯ ಪ್ರಯೋಜನಗಳನ್ನು ಹೊಂದಿದೆ. ಆದರೆ ಬಿಸಾಡುವ ಸಿಪ್ಪೆಯಲ್ಲಿಯೂ ಸಹ ಪೋಷಕಾಂಶಗಳಿವೆ ಮತ್ತು ತುಂಬಾ ಆರೋಗ್ಯಕರವಾಗಿದೆ. ಕಿತ್ತಳೆ ಸಿಪ್ಪೆಯ ಟೀ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ.
ಈಚಹಾವನ್ನು ತಯಾರಿಸುವುದು ಹೇಗೆ
ಬೇಕಾಗುವ ಸಾಮಗ್ರಿಗಳು: .
ಅರ್ಧ ಕಿತ್ತಳೆ ಸಿಪ್ಪೆ
ಒಂದೂವರೆ ಕಪ್ ನೀರು .
1/2 ಇಂಚು ದಾಲ್ಚಿನ್ನಿ
2-3 ಲವಂಗ
1-2 ಹಸಿರು ಏಲಕ್ಕಿ
1/2 ಟೇಬಲ್ ಸ್ಪೂನ್ ಬೆಲ್ಲ .
ತಯಾರಿಸುವುದುಹೇಗೆ?
ಒಂದು ಪಾತ್ರೆಗೆ ನೀರು ಹಾಕಿ ಮಧ್ಯಮ ಉರಿಯಲ್ಲಿ ಒಲೆಯ ಮೇಲೆ ಇಡಿ. ಈಗ ಅದಕ್ಕೆ ಕತ್ತರಿಸಿದ ಕಿತ್ತಳೆ ಸಿಪ್ಪೆ ಮತ್ತು ಇತರ ಮಸಾಲೆಗಳನ್ನು ಸೇರಿಸಿ. 2-3 ನಿಮಿಷ ಕುದಿಯಲು ಬಿಡಿ, ನಂತರ ಒಲೆ ಆಫ್ ಮಾಡಿ. ಒಂದು ಕಪ್ ನಲ್ಲಿ ಟೀ ಹಾಕಿ , ಬೆಲ್ಲವನ್ನು ಸೇರಿಸಿ, ಚೆನ್ನಾಗಿ ಕಲಕಿ. ಕಿತ್ತಳೆ ಸಿಪ್ಪೆಯ ಚಹಾ ಸಿದ್ಧವಾಗಿದೆ.
ಕಿತ್ತಳೆಸಿಪ್ಪೆಯಪ್ರಯೋಜನಗಳು: ಸಿಟ್ರಿಕ್ ಹಣ್ಣುಗಳ ಹೊರಚರ್ಮವು ಫ್ಲೇವನಾಯ್ಡ್ ಗಳ ಉಪಸ್ಥಿತಿಯಿಂದಾಗಿ ಕಹಿರುಚಿಯನ್ನು ಹೊಂದಿದ್ದು, ಇದು ಹಣ್ಣನ್ನು ಕೀಟಗಳಿಂದ ರಕ್ಷಿಸುತ್ತದೆ. ಇದು ಹಣ್ಣಿನ ಇತರ ಭಾಗಗಳಿಗಿಂತ ಹೆಚ್ಚಿನ ಫ್ಲೇವನಾಯ್ಡ್ ಗಳನ್ನು ಹೊಂದಿರುತ್ತದೆ.
ಹಣ್ಣುಗಳಂತೆಯೇ ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ನಾರಿನಾಂಶ, ವಿಟಮಿನ್ ಸಿ, ಪಾಲಿಫೆನಾಲ್ ನಂತಹ ಸಸ್ಯ ಸಂಯುಕ್ತಗಳೂ ಸೇರಿದಂತೆ ಹಲವಾರು ಪೋಷಕಾಂಶಗಳಿವೆ. ಇದರಲ್ಲಿ ಪ್ರೋವಿಟಮಿನ್ ಎ, ಫೋಲೇಟ್, ರೈಬೋಫ್ಲೇವಿನ್, ಥಿಯಾಮಿನ್, ವಿಟಮಿನ್ ಬಿ6 ಮತ್ತು ಕ್ಯಾಲ್ಸಿಯಂ ನಂತಹ ಇತರ ಆರೋಗ್ಯ ಸ್ನೇಹಿ ಪೋಷಕಾಂಶಗಳಿವೆ. ಕಿತ್ತಳೆ ಸಿಪ್ಪೆಯ ಚಹಾದ ಕೆಲವು ಅದ್ಭುತ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ.