ಬೆಂಗಳೂರು: ಮರದ ಬುಡದಲ್ಲಿ ಹಣದಿಂದ ತುಂಬಿದ್ದ ಬ್ಯಾಗ್ ಪತ್ತೆಯಾಗಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ(The capital is Bangalore) ನಡೆದಿದೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಚಿಕ್ಕಲ್ಲಸಂದ್ರದಲ್ಲಿ (South Assembly Constituency Chikkalasandra) ಘಟನೆ ಜರುಗಿದೆ. ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಆರ್.ಕೆ. ರಮೇಶ್ ಅವರ ಕಾರ್ಯಕರ್ತರು ಮನೆಮನೆಗೆ ತೆರಳಿ ಹಣ ಹಂಚುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಆಗಿರುವ ಎಂ.ಕೃಷ್ಣಪ್ಪ ಅವರ ಬೆಂಬಲಿಗರು ಆರೋಪಿಸಿದ್ದರು. ಇದೇ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಕೈ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಘಟನೆಯಿಂದ ಉಂಟಾದ ಬಿಗುವಿನ ಸ್ಥಿತಿ ತಿಳಿಗೊಳಿಸಲು ಸ್ಥಳಕ್ಕೆ ಬಂದ ಸುಬ್ರಹ್ಮಣ್ಯಪುರ ಪೊಲೀಸರು ಕಾಂಗ್ರೆಸ್ ಮುಖಂಡೆ ಶೋಭಾ ಗೌಡ ಮನೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ನಿಂದ ಪರಿಶೀಲನೆ ನಡೆಸಿದ್ದಾರೆ. ರಸ್ತೆ ಪಕ್ಕದಲ್ಲೆಲ್ಲ ತಡಕಾಡಿದ ಪೊಲೀಸರಿಗೆ ಈ ವೇಳೆ ಮರದ ಬುಡದಲ್ಲಿ ಗರಿ ಗರಿ ನೋಟುಗಳಿಂದ ತುಂಬಿದ ಬ್ಯಾಗ್ ಸಿಕ್ಕಿತು. ಅದರಲ್ಲಿ ಮೂರು ಲಕ್ಷದಷ್ಟು ಹಣವಿತ್ತು. ಹಣ ಸೀಜ್ ಮಾಡಿರುವ ಪೊಲೀಸರು, ಕೆಲ ಕಾಂಗ್ರೆಸ್, ಕಮಲ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.