ನವದೆಹಲಿ: ಅಬಕಾರಿ ಹಗರಣ ಸಂಬಂಧ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಂಧನ ಬಳಿಕ ‘ಮುಂದಿನ ಸಿಎಂ’ ಯಾರಾಗುತ್ತಾರೆ ಎಂಬ ಪ್ರಶ್ನೆ ಆಪ್ ಪಕ್ಷದ ವಲಯದಲ್ಲಿ ಭಾರಿ ಚರ್ಚೆ ಗ್ರಾಸವಾಗಿದೆ. ಉನ್ನತ ಮೂಲಗಳ ಪ್ರಕಾರ ಅರವಿಂದ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಅವರು ಸರಕಾರದ ಸಾರಥ್ಯ ವಹಿಸಿಕೊಳ್ಳಬಹುದು ಎನ್ನಲಾಗಿದೆ. ಜೈಲಿನಿಂದಲೇ ಸರಕಾರ ನಡೆಸುವುದಾಗಿ ಕೇಜ್ರಿವಾಲ್ ಘೋಷಣೆ ಮಾಡಿದ್ದರೂ,
ಕಾನೂನು ಪಂಡಿತರ ಪ್ರಕಾರ ಕಾರಾಗೃಹದಲ್ಲಿದ್ದುಕೊಂಡು ಆಡಳಿತ ನಡೆಸುವುದು ಚುನಾವಣೆ ಸಂದರ್ಭದಲ್ಲಿ ಸುಲಭವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇದನ್ನು ಅರಿತ ಕೇಜ್ರಿವಾಲ್ ಇಡಿ ಕ್ರಮ ರದ್ದುಗೊಳಿಸಿ, ಬಿಡುಗಡೆ ಮಾಡುವಂತೆ ದಿಲ್ಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಬೇಸಿಗೆ ಸಮೀಪಿಸುತ್ತಿದ್ದಂತೆ ಕೊರತೆ ಎದುರಿಸುತ್ತಿರುವ ಪ್ರದೇಶಗಳಲ್ಲಿ ಹೆಚ್ಚುವರಿ ನೀರಿನ ಟ್ಯಾಂಕರ್ಗಳನ್ನು ನಿಯೋಜಿಸುವಂತೆ ಕೇಜ್ರಿವಾಲ್ ನಿರ್ದೇಶನ ನೀಡಿದರು. ಮುಖ್ಯ ಕಾರ್ಯದರ್ಶಿಯನ್ನು ಒಳಗೊಳ್ಳಲು ಮತ್ತು ಅಗತ್ಯವಿದ್ದರೆ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರ ಸಹಾಯವನ್ನು ಪಡೆಯಲು ಕೇಜ್ರಿವಾಲ್ ಅವರ ನಿರ್ದೇಶನಗಳನ್ನು ಅತಿಶಿ ಉಲ್ಲೇಖಿಸಿದ್ದಾರೆ.
ಜೈಲು ಪಾಲಾಗಿರುವ ಮುಖ್ಯಮಂತ್ರಿ ರಾಜೀನಾಮೆ ನೀಡದಿದ್ದರೆ ಇಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬಹುದು. ಯಾವುದೇ ರಾಜ್ಯದ ಪ್ರಧಾನಿಯಾಗಲಿ, ಮುಖ್ಯಮಂತ್ರಿಯಾಗಲಿ ಜೈಲಿನಲ್ಲಿದ್ದುಕೊಂಡು ಸರ್ಕಾರ ನಡೆಸಿದ್ದು ಹಿಂದೆಂದೂ ಕಂಡಿಲ್ಲ. ರಾಜ್ಯಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಯೋಗೇಂದ್ರ ನಾರಾಯಣ್ ಪ್ರಕಾರ, ಅರವಿಂದ್ ಕೇಜ್ರಿವಾಲ್ ಅವರನ್ನು ಇಡಿ ಬಂಧಿಸಿದೆ.