ಬೆಂಗಳೂರು: ಕರ್ನಾಟಕದ ಹಣಕಾಸು ಸಚಿವರಾಗಿ ದಾಖಲೆಯ 14ನೇ ಬಜೆಟ್ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯರ ಬಜೆಟ್ನ ದಿಕ್ಕುದಿಸೆಗಳ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದು, ಹಲವು ಜನಪರ ಕಾರ್ಯಕ್ರಮದ ಜತೆಗೆ ರಾಜ್ಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಬಜೆಟ್ನ್ನು ಮುಖ್ಯಮಂತ್ರಿಗಳು ಮಡಿಸವರು ಎಂಬ ನಿರೀಕ್ಷೆಗಳಿವೆ.
2023-24ನೇ ಸಾಲಿನ ಬಜೆಟ್ (Karnataka Budget 2023) ಗಾತ್ರ 3.35ಲಕ್ಷ ಕೋಟಿ ರೂಪಾಯಿ ದಾಟುವ ಅಂದಾಜು ಮಾಡಲಾಗಿದೆ. ಸಿದ್ದರಾಮಯ್ಯನವರ ಗ್ಯಾರಂಟಿ ಬಜೆಟ್ನಲ್ಲಿ ಏನೆಲ್ಲ ಕೊಡುಗೆಗಳನ್ನು ಘೋಷಣೆ ಮಾಡಲಿದ್ದಾರೆ ಎನ್ನುವುದನ್ನು ನೋಡಿ.