ಭಾರತದಲ್ಲಿ ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯ ಸ್ಥಾಪನೆಗೋಸ್ಕರ ಅವಿರತವಾಗಿ ಶ್ರಮಿಸಬೇಕೆಂದು ಅಂದಿನ ರಾಷ್ಟ್ರೀಯ ಕಾಂಗ್ರೆಸ್ 1929ರ ಜನವರಿ 26ರಂದು ಪ್ರತಿಜ್ಞೆ ಮಾಡಿತ್ತು. 1950ರ ಜನವರಿ 26ರಂದು ಈ ಕನಸು ನನಸಾಯಿತು. ಈ ದಿನ ಭಾರತವು ಗಣರಾಜ್ಯವಾಗಿ ತನ್ನ ಆಡಳಿತಾತ್ಮಕ ವ್ಯವಸ್ಥೆಯನ್ನು ರೂಪಿಸಿಕೊಂಡಿತು ಎಂದು ನಾಡಿನ ಸಮಸ್ತ ಜನತೆಗೆ 75ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನ ತಿಳಿಸಿದ ಸಿಎಂ ಸಿದ್ದರಾಮಯ್ಯ.