ಬೆಂಗಳೂರು: ರಾಷ್ಟ್ರಪತಿ ಬಗ್ಗೆ ಸಿಎಂ ಸಿದ್ದರಾಮಯ್ಯ ಅಗೌರವದ ಹೇಳಿಕೆ ವಿಚಾರ ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ರಾಷ್ಟ್ರಪತಿ ಬಗ್ಗೆ ಅಗೌರವದ ಪದ ಬಳಕೆ ಮಾಡಿದ್ದಾರೆ ಶೋಷಿತ ವರ್ಗದ ಸಮಾವೇಶದಲ್ಲಿ ಈರೀತಿ ಹೇಳಿಕೆ ನೀಡಿದ್ದು ಖಂಡನೀಯ ಸಂವಿಧಾನ ತಜ್ಞ, ಅಹಿಂದ ಎಂದು ಹೇಳಿಕೊಳ್ಳುವ ವ್ಯಕ್ತಿ ಹೀಗೆ ಹೇಳಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಕುರಿ ಕಾಯುವ ಸಮುದಾಯದವರು, 14 ಬಜೆಟ್ ನೀಡಿದ್ದೇನೆಂದಿದ್ದಾರೆ ಈವರೆಗೆ ಎಷ್ಟು ಶೋಷಿತ ವರ್ಗಕ್ಕೆ ಬಜೆಟ್ ನೆರವಾಗಿದೆ ಎಂದು ಹೇಳಲಿ ರಾಷ್ಟ್ರಪತಿ ಬಗ್ಗೆ ಅಗೌರವ ತೋರಿ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ
ಗ್ರಾಮೀಣ ಸೊಗಡಿನಲ್ಲಿ ಹಾಗೆ ಮಾತಾಡಿದ್ದೇನೆ ಎಂದು ಹೇಳಿದ್ದಾರೆ ಈಗ ಅಚಾತುರ್ಯದಿಂದ ಆದ ಪ್ರಮಾದಕ್ಕೆ ವಿಷಾದ ಎಂದಿದ್ದೀರಿ ವಿಷಾದ ವ್ಯಕ್ತಪಡಿಸುವ ಸೌಜನ್ಯ ತೋರಿಸಿದ್ದೀರಿ, ಸಂತೋಷ -HDK ಆದರೆ ನಿಮ್ಮ ನಂಜಿನ ವಿಷ ರಾಜ್ಯ ಹಾಗೂ ದೇಶವನ್ನೆಲ್ಲಾ ವ್ಯಾಪಿಸಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.