ಬೆಂಗಳೂರು: ಬೆಂಗಳೂರಿನ ವಸಂತನಗರದ ಅರಸು ಭವನದಲ್ಲಿ ಆಯೋಜಿಸಿರುವ ಸಾಹಿತಿಗಳು, ಲೇಖಕರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದರು.
ರಾಜ್ಯದಲ್ಲಿ ಸಾರ್ವಜನಿಕ ಹೂಡಿಕೆ ಪ್ರಮಾಣ ಕಡಿಮೆ ಆಗ್ತಿದೆ? ಈ ಬಗ್ಗೆ ರಾಜ್ಯ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂಬ ಪ್ರಶ್ನೆಗೆ, ಸಾರ್ವಜನಿಕ ಹೂಡಿಕೆ ಜಾಸ್ತಿಯಾದ್ರೆ ಕೈಗಾರಿಕೆಗಳು ಬೆಳೆಯುತ್ತವೆ. ಆಗ ಜಿಡಿಪಿ ಸಹ ಹೆಚ್ಚಾಗುತ್ತೆ, ನಾಡಿನ ಅಭಿವೃದ್ಧಿ ಸಹ ಆಗಲಿದೆ.
ಯಾವ ದೇಶದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಇರುತ್ತೋ, ಅಂತಹ ದೇಶದಲ್ಲಿ ಹೂಡಿಕೆ ಜಾಸ್ತಿ ಆಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.