ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವ್ಯವಸ್ಥಿತವಾಗಿ ಜಾರಿಗೆ ತಂದು ಕಠಿಣಗೊಳಿಸಬೇಕಂತ ರಾಜ್ಯ ಸರ್ಕಾರ ಮುಂದಾಗಿದೆ.. ಸರ್ಕಾರ ಬಂದು 8 ತಿಂಗಳ ಬಳಿಕ ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆ ಇಂದು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ವಾರ್ಷಿಕ ಸಮಾವೇಶ ಸಭೆ ನಡೆಸಿದ್ರು.. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಠಿಣ ಕ್ರಮ ಜಾರಿಗೊಳಿಸೋದರ ಜೊತೆಗೆ ಪೊಲೀಸರಿಗೆ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಿ ಖಡಕ್ ಸೂಚನೆಯನ್ನ ರವಾನಿಸಿದ್ರು ಸಿಎಂ.. ಹಾಗಾದ್ರೆ ಇವತ್ತಿನ ಪೊಲಿಸ್ ಹಿರಿಯ ಅಧಿಕಾರಿಗಳೊಂದಿಗೆ ಯಾವೆಲ್ಲಾ ವಿಚಾರಗಳನ್ನ ಚರ್ಚೆ ಮಾಡಲಾಯ್ತು .. ಅಧಿಕಾರಿಗಳಿಗೆ ಕೊಟ್ಟ ಖಡಕ್ ಸೂಚನೆ ಏನು ಅಂತೀರಾ ಈ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್
ಎಸ್… ರಾಜ್ಯದಲ್ಲಿ ಇತ್ತೀಚಿಗೆ ನಡೆದ ಘಟನೆಗಳು ಸೇರಿದಂತೆ ಕಾನೂನು ಸುವ್ಯವಸ್ಥೆ ಬಗ್ಗೆ ಚರ್ಚೆ ನಡೆಸ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿಚ ಪರಮೇಶ್ವರ್ ನೇತೃತ್ವದಲ್ಲಿ ಇಂದು ಸಭೆ ನಡೆಸಲಾಯ್ತು..ನೃಪತುಂಗ ರಸ್ತೆ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಡಿಜಿಪಿ, ಎಡಿಜಿಪಿಗಳು, ಐಜಿಗಳು, ಡಿಐಜಿಗಳು, ಎಲ್ಲಾ ಎಸ್ ಪಿ,ಡಿಸಿಪಿಗಳು ಭಾಗಿಯಾಗಿದ್ರು.. ಕರ್ನಾಟಕ ರಾಜ್ಯ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಷ ಸಭೆ ನಡೆಸೋದಕ್ಕು ಮೊದಲು ವಾರ್ಷಿಕ ಸಮಾವೇಶ ಸಭೆಯಲ್ಲಿ ರಾಜ್ಯದ ತನಿಖಾ ವಿಶೇಷತೆಗಳ ಪ್ರದರ್ಶನ ಮಾಡಲಾಯ್ತು.. ರಾಜ್ಯದ ಬಾಂಬ್ ನಿಷ್ಕ್ರಿಯ ದಳ , ಗರುಡ ಪಡೆ, ಎಫ್ ಎಸ್ ಎಲ್ ಹಾಗೂ ಮೊಬೈಲ್ ಕಮಾಂಡ್ ಕಂಟ್ರೋ್ ಸೆಂಟರ್ ಪ್ರದರ್ಶನ,ಅದೇ ರೀತಿ ಪೊಲೀಸರು ವಶಕ್ಕೆ ಪಡೆದಿರುವ ಹಲವು ಮಾದರಿಯ ಮಾದಕ ವಸ್ತುಗಳ ಪ್ರದರ್ಶನ ಡ್ರಗ್ ಮುಕ್ತ ಕರ್ನಾಟಕ ಜಾಗೃತಿ ಕಾರ್ಯಕ್ರಮದ ಬಗ್ಗೆ ಪ್ರದರ್ಶನವನ್ನ ಸಿಎಂ ಸಿದ್ದರಾಮಯ್ಯ ವೀಕ್ಷಣೆ ಮಾಡಿದ್ರು..
ಕಾರ್ಯಕ್ರಮದಲ್ಲಿ ವಿವಿಧ ಆಪ್ ಗಳಿಗೆ ಸಿಎಂ ಚಾಲನೆ ನೀಡಿದ್ರು.. ಐಟಿಪಿಎ ಸರಳ್ ,ಪೊಲೀಸ್ ಮಿತ್ರ ಚಾಟ್ ಬಾಕ್ಸ್, ಪೊಲೀಸ್ ಕುಟಂಬಗಳಿಗೆ ಅನುಕಂಪ ಅಧಾರದ ನೇಮಕಾತಿ ಪೋರ್ಟಲ್ , ksp.ai ಪೋರ್ಟಲ್ , ಫೈನಾನ್ಸಿಯಲ್ ವಿಶ್ಲೇಷಣೆ ಅಪ್ಲಿಕೇಶನ್, ಡೇಟಾತಾನ್ 24, ಸಿಐಡಿ ಕೋಡ್ ಹ್ಯಾಕಥಾನ್ ಲೋಕಾರ್ಪಣೆ ಮಾಡಲಾಯ್ತು .. ಇದೇ ವೇಳೆ ಸಂಕ್ಷಿಪ್ತ ಸೈಬರ್ ತನಿಖಾ ಕೈಪಿಡಿ ಕನ್ನಡದಲ್ಲಿ ಅಭಿವೃದ್ದಿ ಪಡಿಸಲಾದ ಪುಸ್ತಕ ಬಿಡುಗಡೆ ಮಾಡಿದ್ರು ಸಿಎಂ ಸಿದ್ದರಾಮಯ್ಯ
ಎಸ್ ..ರಾಜ್ಯದಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 8 ತಿಂಗಳು ತುಂಬುತ್ತಿರುವ ಹಿನ್ನೆಲೆ ಸಿಎಂ ಇಂದು ರಾಜ್ಯಾದ ಎಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಒಂದಿಷ್ಟು ಖಡಕ್ ಎಚ್ಚರಿಕೆಗಳನ್ನ ರವಾನಿಸಿದ್ರು. ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ಪ್ರಕರಣಗಳಿಗೆ ಸಂಪೂರ್ಣ ಕಡಿವಾಣ ಹಾಕಿ ಶೋಷಣೆಗೆ ಒಳಗಾದವರಿಗೆ ವ್ಯವಸ್ಥೆ ಮೇಲೆ ನಂಬಿಕೆ ಬರಬೇಕಾದರೆ ದೌರ್ಜನ್ಯ ಪ್ರಕರಣಗಳ ತನಿಖೆಯ ಗುಣಮಟ್ಡ ಹೆಚ್ಚಿಸಿ ವೈಜ್ಞಾನಿಕವಾಗಿ ಸಮರ್ಥ ಆರೋಪ ಪಟ್ಟಿ ಸಲ್ಲಿಕೆಯಾಗಬೇಕು..ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯದ ಪ್ರಕರಣಗಳಿಗೆ ಸಂಪೂರ್ಣ ಕಡಿವಾಣ ಹಾಕಿ ಶಿಕ್ಷೆ ಪ್ರಮಾಣ ಹೆಚ್ಚಾಗಬೇಕು ಇಲ್ಲದಿದ್ದರೆ ಡಿಸಿಪಿ ಗಳನ್ನೇ ಈ ವೈಫಲ್ಯಕ್ಕೆ ಹೊಣೆ ಮಾಡುವುದು ಅನಿವಾರ್ಯವಾಗುತ್ತದೆ ಅಂತಾ ಖಡಕ್ ಎಚ್ಚರಿಕೆಯನ್ನ ಕೊಟ್ರು ಸಿಎಂ.. ಪೊಲೀಸರಿಗೆ ನಮ್ಮ ಸರ್ಕಾರ ಸಂಪೂರ್ಣ ಫ್ರೀ ಹ್ಯಾಂಡ್ ಕೊಟ್ಟಿದ್ದು ದುರುಪಯೋಗ ಆಗದಂತೆ ಅದು ಜನರಿಗೆ ಅನುಕೂಲ ಆಗುವಂತಿರಬೇಕು ಅಂತ ಸಿಎಂ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ರು..
ಇನ್ನು ಕರ್ನಾಟಕ ನಾಮಕರಣಗೊಂಡು, ಏಕೀಕರಣದ 50 ವರ್ಷದ ನೆನಪಿಗಾಗಿ ಸುವರ್ಣ ಪೊಲೀಸ್ ಭವನ ಕಟ್ಟಡ ನಿರ್ಮಾಣಕ್ಕೆ ಬಜೆಟ್ ನಲ್ಲಿ ಹಣ ನೀಡಲು ತೀರ್ಮಾನ ಮಾಡಲಾಗಿದೆ. ಇದರ ಜೊತೆಗೆ ರಾಜ್ಯದ ಎಲ್ಲಾ ಪೊಲೀಸ್ ಸಿಬ್ಬಂದಿಗೆ ಬೆಳ್ಳಿ ಪದಕ ನೀಡಲು ನಿರ್ಧರಿಸಲಾಗಿದೆ.ಇನ್ನು ರಾಜ್ಯದ ಎಲ್ಲಾ ಪೊಲೀಸರ ವೈದ್ಯಕೀಯ ವೆಚ್ಚ 1000 ದಿಂದ 1500 ಕ್ಕೆ ಹೆಚ್ಚಿಸಾಗುತ್ತಿದೆ. ಜೊತೆಗೆ ಬೆಂಗಳೂರು ನಗರದಲ್ಲಿ 8 ಅಡಿಷನಲ್ DCP ಹುದ್ದೆಗಳನ್ನು ಹೆಚ್ಚುವರಿಯಾಗಿ ಸೃಷ್ಟಿಸಲು ಸಿಎಂ ಆದೇಶ ನೀಡಿದ್ದಾರೆ. ಜೊತೆಗೆ ರಾಜ್ಯವನ್ನು ಡ್ರಗ್ ಮುಕ್ತ ಗೊಳಿಸುವ ದಿಕ್ಕಿನಲ್ಲಿ ಪರಿಣಾಮಕಾರಿ ಕ್ರಮ ವಹಿಸಕು ಮುಂದಾಗಿದ್ದು. ಈಗ ವಶಪಡಿಸಿಕೊಂಡಿರುವ 4484 ಗಾಂಜಾ ೨೩ ಕೆಜಿ ನಾಕೋಟಿಕ್ ಅನ್ನು ಫೆಬ್ರವರಿ ಮೊದಲ ವಾರದಲ್ಲಿ ನಾಶ ಮಾಡಲು ಸಿಎಂ ಸೂಚಿಸಿದ್ದಾರೆ.
ಒಟ್ನಲ್ಲಿ ಎಫ್ ಐ ಆರ್ ಆದ ೬೦ ದಿನಗಳಲ್ಲೇ ಚಾರ್ಜ್ ಶೀಟ್ ಹಾಕಬೇಕು. ಆಗ ಮಾತ್ರ ಶಿಕ್ಷೆಯನ್ನ ಸರಿಯಾದ ರೀತಿಯಲ್ಲಿ ಕೊಡಿಸಲು ಸಾಧ್ಯವಾಗುತ್ತದೆ. ಇನ್ನು ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡಬೇಕಿದೆ ಎಂದು ಕಿವಿ ಮಾತು ಹೇಳಿದ್ದಾರೆ. ಜೊತೆಗೆ ಲೋಕಸಭಾ ಚುನಾವಣೆ ಹತ್ತಿರದಲ್ಲೇ ಇರೋದ್ರಿಂದ ಕೋಮುಗಲಭೆ ಆಗದಂತೆ ನೋಡಿಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸೂಚನೆ ನೀಡಲಾಗಿದೆ..