ಬೆಂಗಳೂರು: ಕಾಂಗ್ರೆಸ್(Congress) ಬಹುಮತ ಪಡೆದು ಸರ್ಕಾರ ರಚಿಸಿದ್ದಾಯ್ತು. ಸಚಿವರ ಆಯ್ಕೆ ಕೂಡ ಮುಗಿದು ಖಾತೆ ಹಂಚಿಕೆಯಾಗಿದೆ. ನಮಗೂ ಫ್ರೀ ಕರೆಂಟ್ ಸಿಗುತ್ತಾ ಎಂದು ಮನೆ ಒಡೆಯ ಚಿಂತಿಸುತ್ತಿದ್ದಾನೆ. ನನ್ನ ಅಕೌಂಟ್ಗೆ 2 ಸಾವಿರ ಹಣ ಬರುತ್ತಾ ಅನ್ನೋ ಕಾತರ ಮನೆ ಒಡತಿಯದ್ದಾಗಿದೆ. ನನ್ನ ಬಸ್ ಚಾರ್ಜ್ ಫ್ರೀ ಆಗುತ್ತಾ ಅಂತಾ ಮನೆಯ ಹೆಣ್ಣು ಮಕ್ಕಳೆಲ್ಲಾ ಕಾಯುತ್ತಿದ್ದಾರೆ.
ಉಚಿತ ವಿದ್ಯುತ್ ಬಗ್ಗೆ ಕೆ.ಜೆ.ಜಾರ್ಜ್ ಜೊತೆ ಸಿಎಂ ಸಿದ್ದರಾಮಯ್ಯ ಸಮಾಲೋಚನೆ ನಡೆಸಿದ್ದಾರೆ. ಕುಮಾರಕೃಪಾ ರಸ್ತೆಯಲ್ಲಿರುವ ಸಿಎಂ ಸರ್ಕಾರಿ ನಿವಾಸದಲ್ಲಿ ಇಂಧನ ಖಾತೆ ಸಚಿವ ಜಾರ್ಜ್ ಜೊತೆ ಸಿಎಂ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ. ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನವಾಗಲಿದೆ.