ಕಾಫಿ ಮುಖ ಹಾಗೂ ಕೂದಲಿನ ಸೌಂದರ್ಯವನ್ನು ಹೆಚ್ಚಿಸುತ್ತದೆಯಂತೆ. ಡಾರ್ಕ್ ಸರ್ಕಲ್, ಬ್ಲ್ಯಾಕ್ ಹೆಡ್ಸ್ ಗಳನ್ನು ಕೂಡ ನಿವಾರಿಸಿ ನಿಮ್ಮ ಮುಖದ ಕಾಂತಿ ಹೆಚ್ಚಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆಯಂತೆ.
ಕಾಫಿ ಪುಡಿಗೆ ಸ್ವಲ್ಪ ತೆಂಗಿನೆಣ್ಣೆ, ಅಥವಾ ಆಲಿವ್ ಎಣ್ಣೆಯನ್ನು ಸೇರಿಸಿ ಇದರಿಂದ ನಿಮ್ಮ ದೇಹಕ್ಕೆ ಮಸಾಜ್ ಮಾಡಿಕೊಂಡರೆ ಇದು ಸ್ಕ್ರಬ್ ರೀತಿ ವರ್ತಿಸುತ್ತದೆ. ಮುಖಕ್ಕೆ ಕೂಡ ಈ ಮಿಶ್ರಣವನ್ನು ಹಚ್ಚಿಕೊಂಡು ನಿಧಾನಕ್ಕೆ ಸ್ಕ್ರಬ್ ಮಾಡಿದರೆ ರಕ್ತ ಸಂಚಲನೆ ಚೆನ್ನಾಗಿ ಆಗಿ ಮುಖ ಕಾಂತಿಯಿಂದ ಬೆಳಗುತ್ತದೆ.
ಇನ್ನು ಎಣ್ಣೆ ತ್ವಚೆಯಿಂದ ಕಿರಿಕಿರಿ ಸಮಸ್ಯೆ ಅನುಭವಿಸುವವರು, ಕೆನ್ನೆ, ಹಣೆಯ ಭಾಗದಲ್ಲಿ ಚಿಕ್ಕ ಚಿಕ್ಕ ಗುಳ್ಳೆ, ಕಲೆ ಇರುವವರು ಕಾಫಿಯ ಫೇಸ್ ಪ್ಯಾಕ್ ಹಚ್ಚಿಕೊಳ್ಳುವುದರಿಂದ ಮುಖದಲ್ಲಿನ ಜಿಡ್ಡಿನಾಂಶವನ್ನು ನಿವಾರಿಸುತ್ತದೆ. ಹಾಗೇ ಹಾಳಾಗಿರುವ ಚರ್ಮವನ್ನು ರಿಪೇರಿ ಮಾಡುವ ಗುಣ ಈ ಕಾಫಿ ಪುಡಿಯಲ್ಲಿದೆ.