ಬೆಂಗಳೂರು: ಪ್ರತಿ ವರ್ಷ ಹೋಳಿ ಬಂತೆಂದರೆ ಸಾಕು, ಗುಲಾಲ್ , ನೀರು ತುಂಬಿದ ಬಲೂನ್, ಬಿಂದಿಗೆ ಹಿಡಿದು ಬೀದಿಗಿಳಿಯುತ್ತಿದ್ದ ಸ್ನೇಹಿತರು, ಕುಟುಂಬಗಳು ಮತ್ತು ಅಪರಿಚಿತರು ಪರಸ್ಪರ ಬಣ್ಣ ಎರಚಿ ಶುಭಾಶಯ ಕೋರುತ್ತಿದ್ದರು. ಆದರೆ, ಈ ವರ್ಷ, ಬೆಂಗಳೂರಿನ ಕೆಲವು ಭಾಗಗಳು ಎದುರಿಸುತ್ತಿರುವ ತೀವ್ರ ನೀರಿನ ಸಮಸ್ಯೆಯಿಂದಾಗಿ ಹಬ್ಬದ ಉತ್ಸಾಹ ಕಡಿಮೆಯಾಗಿದೆ. ಇದರ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್..
ಬಣ್ಣಗಳ ಹಬ್ಬವನ್ನು ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಕೆಲವರು ಒಬ್ಬರಿಗೊಬ್ಬರು ಬಣ್ಣ ಹಚ್ಚಿಕೊಂಡು ಆನಂದಿಸಿದರೆ, ಯುವ ಜನತೆಯು ನೀರಿಗೆ ಬಣ್ಣ ಹಾಕಿ, ವಾಟರ್ ಶೂಟರ್ಗನ್ಗಳಿಂದ ಅಥವಾ ಮಗ್ಗಳ ಮೂಲಕ ಬಣ್ಣದ ನೀರನ್ನು ಎರಚಿಕೊಳ್ಳುತ್ತಾ ಸಂಭ್ರಮಿಸುತ್ತಾರೆ. ಆದರೇ ಈ ಬಾರಿ ಹಾಗಿಲ್ಲ. ನೀರಿನ ಸಮಸ್ಯೆ ಇರುವ ಕಾರಣ ಬೆಂಗಳೂರಿನಲ್ಲಿ ಎಲ್ಲೆಡೆ ಡ್ರೈ ಹೋಲಿ ಸೆಲೆಬ್ರೇಷನ್ ಗೆ ಜನರು ಮುಂದಾಗಿದ್ರು…
ನಗರದ ಪಂಚತಾರಾ ಹೋಟೆಲ್ ಮತ್ತು ರೆಸಾರ್ಟ್ಗಳಲ್ಲಿ ಹೋಳಿ ಹಬ್ಬದ ಪ್ರಯುಕ್ತ ವಾರಕ್ಕೂ ಮೊದಲೇ ವಿಶೇಷ ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಆನ್ಲೈನ್ ಮೂಲಕ ಟಿಕೆಟ್ಗಳನ್ನು ಮಾರಾಟ ಕೂಡ ಮಾಡಲಾಗಿದೆ. ಆದರೆ, ಸರ್ಕಾರ ಕೆಲವು ನೀತಿಗಳನ್ನು ಜಾರಿಗೊಳಿಸಿದ ನಂತರ, ಕಾರ್ಯಕ್ರಮ ನಿರ್ವಹಣಾ ವ್ಯವಸ್ಥೆಯು ರೈನ್ ಡ್ಯಾನ್ಸ್ ಮತ್ತು ಪೂಲ್ ಡ್ಯಾನ್ಸ್ ಆಚರಣೆಯನ್ನು ಕೈಬಿಟ್ಟಿದೆ.
: ಬಿಜೆಪಿಗೆ ಮರು ಸೇರ್ಪಡೆಗೊಂಡ ಗಣಿ ಧಣಿ ಜನಾರ್ದನ ರೆಡ್ಡಿ
ಮೈಸೂರು ರಸ್ತೆಯ ಜೆ.ಕೆ.ಗ್ರಾಂಡ್ ಅರೆನಾ ಹಾಗೂ ಜಯಮಹಲ್ಪ್ಯಾಲೇಸ್ ಹೋಟೆಲ್, ಒರಾಯನ್ ಸೇರಿ ದೊಡ್ಡ-ದೊಡ್ಡ ಹೋಟೆಲ್, ಮಾಲ್ಗಳಲ್ಲಿ ನೀರಿನ ಬಳಕೆ ಕಡಿವಾಣ ಹಾಕಲಾಗಿದ್ದು, ಕೆಲವು ರೆಸಾರ್ಟ್ ಮತ್ತು ಈವೆಂಟ್ಗಳನ್ನು ಆಯೋಜಿಸುವವರು ಹೋಲಿಗ್ರಾಮ್, ರಂಗೀಲಾ ಉತ್ಸವ ಎಂಬ ಹೆಸರಿನಲ್ಲಿ ಖಾಸಗಿ ಕಾರ್ಯ ಕ್ರಮಗಳನ್ನು ನಡೆಸುತ್ತಿವೆ.
ಇನ್ನು ಇದರ ಬಗ್ಗೆ ಮಾತನಾಡಿದ ಸಾರ್ವಜನಿಕರು.. ಇದಕ್ಕೆ ಸಾವಿರಾರು ಲೀಟರ್ ನೀರು ಬಳಸಲಾಗುತ್ತದೆ. ಇನ್ನೂ ಪೂಲ್ ಪಾರ್ಟಿ ಅಥವಾ ಮಳೆ ನೃತ್ಯಗಳಿಗೆ ಭಾರೀ ನೀರು ವ್ಯಯವಾಗುತ್ತದೆ. ಡ್ರೈ ಹೋಲಿವ ಕೂಡ ನಾವು ಎಂಜಾಯ್ ಮಾಡ್ತಿದ್ದೀವಿ,.. ಇದನ್ನೇ ಮುಂದುವರೆಸಿದರೆ ತುಂಬ ಒಳ್ಳೆಯದು.. ಹೋಲಿ ಆಡಕ್ಕೆ ರೈನ್ ಡ್ಯಾನ್ಸ್ ಬೇಕೇ ಬೇಕು ಎಂದು ಏನಿಲ್ಲ.. ಜನರು ಅರ್ಥಮಾಡಿರೊಂಡು ನೀರನ್ನು ಉಳಿಸಿ ಎಂದು ಹೇಳಿದ್ದಾರೆ..
ಒಟ್ಟಾರೆ ಹೋಲಿ ಸೆಲೆಬ್ರೇಷನ್ ಗೆ ನೀರಿನ ಅಭಾವ ಅಡ್ಡಿಯಾದರೂ ಕೂಡ ಈ ಬಾರಿ ಸಕತ್ತಾಗಿ ಎಂಜಾಯ್ ಮಾಡಿದ್ದಾರೆ.. ಮುಂದಿನ ದಿನಗಳಲ್ಲಿ ಕೂಡ ಇದೇ ರೀತಿ ಹಬ್ಬ ಆಚರಣೆ ಮಾಡಿದರೆ ಒಳಿತು ಎಂದು ಅಭಿಪ್ರಾಯ ಕೊಟ್ಟಿದ್ದಾರೆ..