ಹಾಸನ: ತೆಂಗಿನಕಾಯಿ ಗೊನೆ (Coconut Shell) ಬಿದ್ದು ಬಾಲಕನೊಬ್ಬ ಮೃತಪಟ್ಟ ದುರ್ಘಟನೆ ಚನ್ನರಾಯಪಟ್ಟಣದ (Channarayapatna) ಬಿ.ಚೋಳೇನಹಳ್ಳಿಯಲ್ಲಿ ನಡೆದಿದೆ.
ಪ್ರಜ್ವಲ್ (16) ಮೃತಪಟ್ಟ ಬಾಲಕ. ಗಾಳಿ, ಮಳೆಗೆ ಬಿದ್ದಿದ್ದ ಕಾಯಿಗಳನ್ನು ಒಂದೆಡೆ ಸಂಗ್ರಹಿಸುವಾಗ ಏಕಾಏಕಿ ಮರದಿಂದ ಕಾಯಿ ಗೊನೆ ಬಾಲಕನ ಮೇಲೆ ಬಿದ್ದಿದೆ. ತೀವ್ರವಾಗಿ ಪೆಟ್ಟಾಗಿದ್ದ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾನೆ.
ಶ್ರವಣಬೆಳಗೊಳ (Shravanabelagola) ಹೊರವಲಯದ ಉತ್ತೇನಹಳ್ಳಿ ಗ್ರಾಮದ ರವಿ ಮತ್ತು ಅನಸೂಯ ದಂಪತಿ ಮಗ ಪ್ರಜ್ವಲ್ನೊಂದಿಗೆ ಬಿ.ಚೋಳೇನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದರು. ಪ್ರಜ್ವಲ್ ಪ್ರತಿನಿತ್ಯ ತೋಟಕ್ಕೆ ಹೋಗಿ ಕಾಯಿ ಎತ್ತಿ ಹಾಕಿ ಇತರೆ ಸಣ್ಣಪುಟ್ಟ ಕೆಲಸ ಮುಗಿಸಿ ಕಾಲೇಜಿಗೆ ಹೋಗುತ್ತಿದ್ದ. ಭಾರೀ ಮಳೆ, ಗಾಳಿಯಿಂದ ಮರದಿಂದ ತೆಂಗಿನಕಾಯಿಗಳು ನೆಲಕ್ಕೆ ಬಿದ್ದಿದ್ದವು. ಬಿದ್ದಿದ್ದ ತೆಂಗಿನಕಾಯಿಗಳನ್ನು ಒಂದೆಡೆ ಸಂಗ್ರಹಿಸುತ್ತಿದ್ದ ವೇಳೆ ಏಕಾಏಕಿ ತೆಂಗಿನಮರದಿಂದ ಬಾಲಕನ ಮೇಲೆ ತೆಂಗಿನಕಾಯಿ ಗೊನೆಗಳು ಬಿದ್ದಿದ್ದವು