ಬೆಂಗಳೂರು: ನಟ ಶಿವರಾಜ್ ಕುಮಾರ್ ಇಂದು ತಮ್ಮ ಪತ್ನಿ ಗೀತಾ ಹಾಗೂ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಸದಾಶಿವನಗರದಲ್ಲಿರುವ ಮನೆಯಲ್ಲಿ ಭೇಟಿಯಾದರು.
ಗೀತಾರನ್ನು ಮುಂದಿನ ವರ್ಷ ನಡೆಯಲಿರುವ ಲೋಕ ಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಅಭ್ಯರ್ಥಿಯಾಗಿಸುವ ಪ್ರಸ್ತಾಪವಿದೆ ಮತ್ತು ಗೀತಾ ಸಹ ಆ ಬಗ್ಗೆ ಆಸಕ್ತಿ ತೋರಿದ್ದಾರೆ ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ.
ಸಾರ್ವತ್ರಿಕ ಚುನಾವಣೆ ಬಹಳ ದೂರವೇನೂ ಇಲ್ಲ, ಕೇವಲ 10 ತಿಂಗಳು ದೂರದಲ್ಲಿದೆ. ಕಾಂಗ್ರೆಸ್ ಪಕ್ಷ ಈಗಿಂದಲೇ ತಯಾರಿ ಮಾಡಿಕೊಳ್ಳುತ್ತಿದ್ದಾರೆಂದು ಮಾಹಿತಿ ತಿಳಿದುಬರುತ್ತಿದೆ. ಆದರೂ ಏನೆಂಬುದು ಕಾದುನೋಡಬೇಕಿದೆ ಅಷ್ಟೇ.