ಬೆಂಗಳೂರು: ವಿಧಾನಸಭೆ ಕಲಾಪದಲ್ಲಿಂದು ಹಲವು ವಿಷಯಗಳ ಬಗ್ಗೆ ಗಂಭೀರ ಚರ್ಚೆಗಳು ನಡೆದ್ವು..ಕುಮಾರಸ್ವಾಮಿ ಭಾಷಣದ ವೇಳೆ ಕಲಾಪ ಸದ್ದುಗದ್ದಲಕ್ಕೂ ಕಾರಣವಾಯ್ತು. ವರ್ಗಾವಣೆ ದಂಧೆಯ ಆರೋಪ ಸದನದಲ್ಲಿ ವಾಕ್ಸಮರಕ್ಕೆ ಕಾರಣವಾಯ್ತು..ಇನ್ನು ಜೈನಮುನಿ ಹಾಗೂ ವೇಣುಗೋಪಾಲ್ ಹತ್ಯೆ ಪ್ರಕರಣ ಸಂಬಂಧಪಟ್ಟಂತೆ ಬಿಜೆಪಿಯವರು ರಾಜ್ಯಪಾಲರು ಮೊರೆ ಹೋಗಿದ್ರು.
ಸರ್ಕಾರದ ಗ್ಯಾರೆಂಟಿಗಳ ಚರ್ಚೆ ವೇಳೆ ಅಶ್ವಥ್ ನಾರಾಯಣ್ ಹಾಗೂ ಪ್ರಿಯಾಂಕ್ ಖರ್ಗೆ ನಡುವೆ ವಾಕ್ಸಮರೇ ನಡೆದುಹೋಯ್ತು..ಮಾಜಿ ಸಿಎಂ ಕುಮಾರಸ್ವಾಮಿ ಗ್ಯಾರೆಂಟಿಗಳ ಬಗ್ಗೆ ಮಾತನಾಡ್ತಿದ್ರು..ಹಿಂದಿನ ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಸರ್ಕಾರ ಅಂತ ಕಾಂಗ್ರೆಸ್ ನವರು ಮಾತನಾಡ್ತಿದ್ರು..ಇಂತದ್ದಕ್ಕೆ ಇಷ್ಟು ರೇಟು ಅಂತ ಪೇಪರ್ ಗಳಲ್ಲಿ ಆ್ಯಡ್ ಕೊಟ್ಟಿದ್ರು..ಈಗ ನೋಡಿದ್ರೆ ಇವರ ಸರ್ಕಾರದಲ್ಲೇ ದಂಧೆ ಶುರುವಾಗಿದೆ ಅಂತ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ರು..ಈ ವೇಳೆ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಕೂಡ ಧ್ವನಿಗೂಡಿಸಿದ್ರು..ಇದಕ್ಕೆ ಪ್ರತಿಯಾಗಿ ಸಚಿವ ಪ್ರಿಯಾಂಕ್ ಖರ್ಗೆ ತಿರುಗಿಬಿದ್ರು..ರೇಟನ್ನ ನಾವು ಹೇಳಿದ್ದಲ್ಲ,ನಿಮ್ಮ ಪಕ್ಕದಲ್ಲಿರುವ ಶಾಸಕರು ಅಂತ ಯತ್ನಾಳ್ ಕಡೆ ಕೈತೋರಿಸಿದ್ರು..ಈ ವೇಳೆ ಇಬ್ಬರ ನಡುವೆ ಜೋರು ಧ್ವನಿಯಲ್ಲಿ ಟಾಕ್ ವಾರ್ ಶುರುವಾಯ್ತು.
ಇನ್ನು ಹೆಚ್ಡಿಕೆ ಭಾಷಣದ ವೇಳೆ ಬಸನಗೌಡ ಪಾಟೀಲ್ ಯತ್ನಾಳ್ ಪದೇ ಪದೇ ಎಂಟ್ರಿಯಾಕ್ತಿದ್ರು..ಸರ್ಕಾರದ ವಿರುದ್ಧ ಕಿಚಾಯಿಸ್ತಿದ್ರು..ಈ ವೇಳೆ ಮಧ್ಯಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ ಯತ್ನಾಳರನ್ನ ಲೇವಡಿ ಮಾಡಿದ್ರು..ಪಾಪ ಪದೇ ಪದೇ ಎದ್ದು ನಿಂತು ಮಾತನಾಡೋಕೆ ಹೋಗ್ತಿದ್ದೀರ..ನಮ್ಮ ನಾಯಕರು ನೋಡಲಿ ಅನ್ನೋ ಉದ್ದೇಶ ಇರ ಹುದು..ಆದ್ರೆ ನನಗೆ ಬಂದ ಮಾಹಿತಿ ಪ್ರಕಾರ ನಿಮ್ಮನ್ನ ಪ್ರತಿಪಕ್ಷ ನಾಯಕರನ್ನಾಗಿ ಮಾಡಲ್ಲ ಅಂತ ಕಿಚಾಯಿಸಿದ್ರು..ಇದಕ್ಕೆ ನಿಮಗೆ ಮಾಹಿತಿ ಇದೆ ಅಂದ್ರೆ ಎಲ್ಲೋ ನಮ್ಮನಾಯಕರ ಜೊತೆ ಅಡ್ಜಸ್ಟ್ ಮೆಂಟ್ ಇರಬಹುದು ಅಂತ ಯತ್ನಾಳ್ ಸಿದ್ದುಗೆ ತಿರುಗೇಟು ನೀಡಿದ್ರು..ನಾನು ನಿಮಗಿಂತ ಮೊದಲು ಇಲ್ಲಿಗೆ ಬಂದವನು..ಯಡಿಯೂರಪ್ಪ,ಬಿ.ಆರ್.ಪಾಟೀಲ್,ದೇಶಪಾಂಡೆ ಅಷ್ಟೇ ಇದ್ರು..೮೩ ರಲ್ಲಿಯೇ ನಾನು ಸದನಕ್ಕೆ ಕಾಲಿಟ್ಟವನು…ಅಲ್ಲಿಂದ ಇಲ್ಲಿಯವರೆಗೆ ಯಾವ ಅಡ್ಜಸ್ಟ್ ಮೆಂಟ್ ಮಾಡಿಕೊಂಡವನಲ್ಲ..ಆ ರೀತಿ ಇದ್ದಿದ್ದು ತೋರಿಸಿ ರಾಜಕೀಯ ನಿವೃತ್ತಿ ತೆಗೆದುಕೊಳ್ತೇನೆ ಅಂತ ಟಾಂಗ್ ಕೊಟ್ರು..ಮತ್ತೆ ಧ್ವನಿ ಎತ್ತಿದ ಯತ್ನಾಳ್ ಮೊದಲು ಯಡಿಯೂರಪ್ಪಹಾಗೂ ಕುಮಾರಸ್ವಾಮಿ ನಮ್ಮಪ್ಪರಾಣೆ ಸಿಎಂ ಆಗಲ್ಲ ಅಂತಿದ್ರಿ,ಇಬ್ರೂ ಸಿಎಂ ಆಗಲಿಲ್ವೇ..ನೀವು ಹೇಳಿದ್ದಕ್ಕಾದ್ರೂ ನಾನುಪ್ರತಿಪಕ್ಷ ನಾಯಕನಾಗ್ತೇನೆ ಅಂತ ಸಿದ್ದುಗೆ ಕಿಚಾಯಿಸಿದ್ರು.
ಮೊದಲ ಬಾರಿಗೆ ಶಾಸಕರಾಗಿ ಅಯ್ಕೆಯಾದ ಪ್ರದೀಪ್ ಈಶ್ವರ್ ಶಿಕ್ಷಣ,ಅನ್ನಭಾಗ್ಯ ಯೋಜನೆ ಹಾಗೂ ಆರೋಗ್ಯ ವಿಚಾರಗಳ ಬಗ್ಗೆ ಸದನದ ಗಮನಸೆಳೆದ್ರು..ನಮ್ಮ ಸರ್ಕಾರ ಐದು ಗ್ಯಾರೆಂಟಿಗಳನ್ನ ಕೊಟ್ಟಿದೆ..ಎಲ್ಲವೂ ಬಡವರ ಪರವಾದ ಕಾರ್ಯಕ್ರಮಗಳು..ಹಸಿದವನಿಗೆ ಅನ್ನದ ಮಹತ್ವ ಗೊತ್ತು..ಹಾಗಾಗಿಯೇ ಸಿದ್ರಾಮಯ್ಯ ಅನ್ನಭಾಗ್ಯ ಯೋಜನೆ ತಂದ್ರು..ನನ್ನಂತಹ ಅನೇಕ ಬಡವರಿಗೆ ಅದು ಅನುಕೂಲವಾಗಿದೆ..ವಿದ್ಯಾನಿಧಿ ಯೋಜನೆ,೨೦೦ ಯೂನಿಟ್ ವಿದ್ಯುತ್ ಕಾರ್ಯಕ್ರಮಗಳು ಬಡವರ ಪರವಾದ ಕಾರ್ಯಕ್ರಮಗಳೇ..ಇದ್ರ ಮಹತ್ವ ನನಗೆ ಚೆನ್ನಾಗಿ ಗೊತ್ತಿದೆ..ನಾನೊಬ್ಬ ಅನಾಥ,ಚಿಕ್ಕವಯಸ್ಸಿನಲ್ಲೇ ಚಿಕಿತ್ಸೆಗೆ ಹಣ ನೀಡಲಾಗದೆ ತಂದೆ ತಾಯಿ ಕಳೆದುಕೊಂಡವನು..ನನ್ನಂತ ಅನಾಥ ಇವತ್ತು ಶಾಸಕನಾಗಿ ಅಯ್ಕೆಯಾಗೋಕೆ ಸಾಧ್ಯವಾಗಿದ್ದು ಅಂಬೇಡ್ಕರ್ ಅವರ ಕೊಡುಗೆಯಿಂದ..ಇವತ್ತು ನಾವು ಉತ್ತಮ ಕಾರ್ಯಕ್ರಮಗಳನ್ನ ನೆನಪಿಸಿಕೊಳ್ಳಬೇಕು..ಈ ಯೋಜನೆಗಳ ಬಗ್ಗೆ ಪ್ರತಿಪಕ್ಷದವರು ವಿರೋಧ ಮಾಡಬೇಡಿ ಅಂತ ಮನವಿ ಮಾಡಿದ್ರು..ಇದ್ರ ಜೊತೆಗೆ ಬಡವರ ಮಕ್ಕಳಿಗೆ ಶಿಕ್ಷಸ ಸಿಗಬೇಕು..ಇವತ್ತು ಸರ್ಕಾರಿ ಶಾಲೆಗಳ ಸುಧಾರಣೆಯಾಗಬೇಕು ಅಂತ ಸರ್ಕಾರದ ಗಮನಸೆಳೆದ್ರು..ಎಲ್ಲಿಯೂ ಒಂದು ಚೂರು ತಡವರಿಸದೆ ನಿರರ್ಗಗಳವಾಗಿ ಮಾತನಾಡಿದ್ರು..ಅವರ ಮಾತಿಗೆ ಇಡೀ ಸದನ ಮೂಕಪ್ರೇಕ್ಷವಾಯ್ತು..
ಇನ್ನು ಸರ್ಕಾರದ ಗ್ಯಾರೆಂಟಿ ಯೋಜನೆಗಳ ಬಗ್ಗೆ ಜೆಡಿಎಸ್ ನಾಯಕ ಕುಮಾರಸ್ವಾಮಿ ಕುಟುಕಿದ್ರೆ,ಅವರದೇ ಪಕ್ಷದ ಜಿಟಿಡಿ ಹೊಗಳಿಕೆ ಸುರಿಮಳೆ ಸುರಿಸಿದ್ದಾರೆ..ಅನ್ನಭಾಗ್ಯ ಯೋಜನೆ,ವಿದ್ಯುತ್ ಯೋಜನೆ ಬಡವರಿಗೆ ಅನುಕೂಲವಾಗಿವೆ..ರಾಜ್ಯ ಸರ್ಕಾರ ಅಕ್ಕಿ ಕೊಡಿ ಎಂದು ಕೇಂದ್ರಕ್ಕೆ ಮನವಿಮಾಡಿದ್ರೂ ಕೊಟ್ಟಿಲ್ಲ..ಇದನ್ನ ನಾನು ಖಂಡಿಸ್ತೇನೆ ಅಂತ ಹೇಳಿದ್ದಾರೆ..ಈ ಮೂಲಕ ಮಾಜಿ ಸಿಎಂ ಹೆಚ್ಡಿಕೆ ಸರ್ಕಾರವನ್ನ ತೆಗಳಿದ್ರೆ,ಜಿಟಿಡಿ ಹೊಗಳಿದ್ದಾರೆ..ಇದ್ರ ನಡುವೆ ಸಿದ್ದರಾಮಯ್ಯನವರ ಪರ ಬ್ಯಾಟಿಂಗ್ ನಡೆಸಿದ್ದಾರೆ..ಇದು ಎಲ್ಲರ ಅಚ್ಚ ರಿಗೆ ಕಾರಣವಾಯ್ತು..
ಇನ್ನು ಚಿಕ್ಕೋಡಿಯ ಜೈನಮುನಿ ಹಾಗೂ ಟಿ ನರೀಸಿಪುರದ ವೇಣುಗೋಪಾಲ್ ನಾಯಕ್ ಹತ್ಯೆ ಪ್ರಕರಣವನ್ನ ಸಿಬಿಐಗೆ ನೀಡುವಂತೆ ಇಂದು ವಿಧಾನಸೌಧ ಗಾಂಧಿ ಪ್ರತಿಮೆ ಮುಂದೆ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ರು.ಬಳಿಕ ವಿಧಾನಸೌಧದಿಂದ ಜಾಥಾ ಮೂಲಕ ರಾಜಭವನಕ್ಕೆ ತೆರಳಿದ ಬಿಜೆಪಿ ನಾಯಕರು,ಸರ್ಕಾರದ ವಿರುದ್ಧ ದೂರು ನೀಡಿದ್ರು.ಬಳಿಕ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ,ಎರಡು ಪ್ರಕರಣದ ತನಿಖೆಯಲ್ಲಿ ಲೋಪದೋಷಗಳಿದ್ವು,ಜೈನಮುನಿ ಪ್ರಕರಣವನ್ನ ಸಿಬಿಐಗೆ ನೀಡುವಂತೆ ಒತ್ತಾಯಿಸಿದ್ರು.
ಒಟ್ನಲ್ಲಿ ಇವತ್ತಿನ ವಿಧಾನಸಭೆ ಕಲಾಪದಲ್ಲಿ ಹಲವು ಗಂಭೀರ ವಿಷಯಗಳ ಬಗ್ಗೆ ಚರ್ಚೆಯಾಯ್ತು..ಸದಸ್ಯರು ತಮ್ಮ ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಸದನದ ಗಮನಸೆಳೆದ್ರು..ಗ್ಯಾರೆಂಟಿ ಚರ್ಚೆ ವೇಳೆ ಪರವಿರೋಧಗಳೂ ವ್ಯಕ್ತವಾದ್ವು..ಸದನದಲ್ಲಿ ಕೆಲವರ ನಡುವೆ ಸದ್ದುಗದ್ದಲವೂ ಆಯ್ತು..