ಬೆಂಗಳೂರು:ಶಾಲೆಗಳು ಆರಂಭದ ಹಂತದಲ್ಲೇ ಮತ್ತೆ ಶಾಲಾ ಮಕ್ಕಳಿಗೆ ಬ್ಯಾಗ್ ಭಾರ ಎನ್ನುವ ವಿಷಯ ಚರ್ಚೆಗೆ ಬಂದಿದೆ. ಈ ಬಗ್ಗೆ ಬುಧವಾರ ನೀಡಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ವಕೀಲ ರಮೇಶ್ ನಾಯಕ್ ಸಲ್ಲಿಸಿದ್ದ PIL ವಜಾಗೊಳಿಸಿ ಹೈಕೋರ್ಟ್ ಆದೇಶಿಸಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿರುವ ವಿಷಯವೇನೋ ಗಂಭೀರವಾಗಿದೆ. ಆದರೆ ಪೂರಕ ಅಂಶಗಳಿಲ್ಲದೇ ಅರೆಬೆಂದ ಅರ್ಜಿ ಸಲ್ಲಿಸಲಾಗಿದೆ. ಹೊಸದಾಗಿ ಅರ್ಜಿ ಸಲ್ಲಿಸುವಂತೆ ಸಿಜೆ ಪ್ರಸನ್ನ ಬಿ.ವರಾಳೆ, ನ್ಯಾ.ಎಂ.ಜಿ.ಎಸ್.ಕಮಲ್ ಅವರಿದ್ದ ಪೀಠ ತಾಕೀತು.
ಈ ಹಿಂದಿನ ಅಂದರೆ ಬಿಜೆಪಿ ಸರ್ಕಾರ ಇದ್ದಾಗ ಶಿಕ್ಷಣ ಇಲಾಖೆ ಮುಂದಾಗಿತ್ತು. ಶನಿವಾರ ಮಕ್ಕಳ ಬ್ಯಾಗ್ ಹೊರೆ ಇಳಿಸಲು ನಿರ್ಧರಿಸಿರುವ ಇಲಾಖೆ, ಯೋಗ, ವ್ಯಾಯಾಮ ಚಟುವಟಿಕೆ ಮಾಡಿಸಲು ಸಲಹೆ ನೀಡಿದೆ. ಸದ್ಯ ಕಲಿಕಾ ಚೇತರಿಕಾ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದ ಬಳಿಕ ಬ್ಯಾಗ್ ಲೆಸ್ ಡೇ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರು ಹೇಳಿದ್ದರು.